ಜಿಲ್ಲೆ

ಧಾರವಾಡದ ವಾರ್ಡ್ ನಂ. 1 ರಲ್ಲಿ ಜಯಶ್ರೀ ಪವಾರ ಗೆಲುವು ನಿಶ್ಚಿತ : ಬಸವರಾಜ ಕೊರವರ

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 1 ರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಹೋದರಿ ಜಯಶ್ರೀ ಪವಾರ (ನಾಯಕವಾಡ) ಅವರ ಗೆಲುವು ನಿಶ್ಚಿತ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಮುಧೋಳಕರ್ ಕಂಪೌಂಡ್, ಕುಮಾರೇಶ್ವರ ನಗರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಸಮಾಜದ ಹಿರಿಯರ, ಗುರು ಹಿರಿಯರ ಬಳಿ ಮತಯಾಚಿಸಿ ಮಾತನಾಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ಆಯ್ಕೆ ಅಗತ್ಯವಿದ್ದು, ಪೊಲೀಸರ ಮಗಳಾದ ಜಯಶ್ರೀ ಇದೇ ವಾರ್ಡ್ ನ ನಿವಾಸಿಯಾಗಿರುವುದರಿಂದ ಅವರನ್ನು ಆಯ್ಕೆ ಮಾಡಿದರೆ ಹೋರಾಟದ ಮೂಲಕವಾದರೂ ನಮ್ಮ ಧ್ವನಿ ಪಾಲಿಕೆಯಲ್ಲಿ ಮೊಳಗಲಿದೆ ಎಂದರು.

ಇದೇ ವೇಳೆ ಅವರ ಪರ ಸುಮಾ ಬಸವರಾಜ ಕೊರವರ, ಮಂಜುನಾಥ ಪವಾರ, ಸುರೇಶ ಪವಾರ, ಫಕ್ರುಸಾಬ ಎಂ. ಮುಲ್ಲಾ, ಮಂಜುನಾಥ ಹಿರೇಮಠ, ಮಂಜುನಾಥ ಕಾಳೆ, ಬಸವರಾಜ ಶೀಲವಂತರ, ಶಶಿಧರ ಮುಂದಿಮನಿ, ಅಂಬರೀಶ್ ‌ಮನಗೂಳಿ, ಸಾಧಿಕ್ ಹುಲಗೂರ, ಸಮೀರ ಪಾಗೆ, ಅಶೋಕ ಮಹಾರಾಜನವರ, ಮಂಜುನಾಥ ದುಬೆ, ಪ್ರಜ್ವಲ್ ಪವಾರ ಹಾಗೂ ಗಣೇಶ ಪೂಜಾರ, ನಾಗರಾಜ ಪವಾರ
ಸೇರಿದಂತೆ ಹತ್ತು ಹಲವು ಯುವಕರ ಪಡೆ ಅಖಾಡಕ್ಕೆ ಇಳಿದಿದೆ.

ಇದಲ್ಲದೆ, 12 ಬೂತಗಳ ವಿವಿಧ ಬಡಾವಣೆಗಳಾದ ಪೊಲೀಸ್ ಹೆಡ್ ಕ್ವಾರ್ಟರ್ಸ್, ರಕ್ಷಾ ಕಾಲೋನಿ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಹೊಸ ಲೈನ್, ಮುಕಾಬಿಂಕಾ ನಗರ, ಕೆ ಹೆಚ್ ಬಿ ಕಾಲನಿ, ಬನಶ್ರೀ ನಗರ, ಅರ್ಜಂಟ ನಗರದಲ್ಲಿ ಮನೆ ಮನೆಗೆ ತೆರಳಿ ಹಲವು ಯುವಕರು ಮತ ಯಾಚಿಸಿದರು.

ವಾರ್ಡ್‌ನ ಗುರು ಹಿರಿಯರ ಆಶಯದಂತೆ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಜಯಶ್ರೀ ಪವಾರ (ನಾಯಕವಾಡ)
ಕಣಕ್ಕೆ ಇಳಿದಿದ್ದಾರೆ‌. ಪೊಲೀಸ್ ಕುಟುಂಬದ ಸದಸ್ಯೆಯಾಗಿರುವ ಜಯಶ್ರೀ ಪವಾರ
ಗೆಲುವಿಗಾಗಿ ಪೊಲೀಸರ ವಿವಿಧ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಬಸವರಾಜ ಹೆಚ್‌ ಕೊರವರ ಅವರು ಅಖಾಡಕ್ಕೆ ಇಳಿದಿರುವುದು ನಮಗೆ ಆನೆಬಲ ಬಂದಂತಾಗಿದೆ‌.

ಹೀಗಾಗಿ ಪೊಲೀಸರ ಕುಟುಂಬಗಳು ಆರ್ಶೀವಾದ ಮಾಡಬೇಕು ಎಂದು ಯುವಕರ ತಂಡ ಮನವಿ ಮಾಡಿತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *