ರಾಜ್ಯ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ 1, 3, 36, 37, 38, ರಲ್ಲಿ ಬಿಜೆಪಿ ಗೆಲುವು

ಹುಬ್ಬಳ್ಳಿ ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.

ವಾರ್ಡ್ ನಂಬರ್ 1 ರಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿ 2231 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಯಶ್ರೀ ರಾ ನಾಯಕವಾಡ 2165 ಹಾಗೂ ಕಾಂಗ್ರೇಸ್ ಅಭ್ಯರ್ಥಿ ನಿರ್ಮಲಾ ಹೊಂಗಲ 1124 ಮತಗಳನ್ನು ಪಡೆದಿದ್ದಾರೆ. 89 ನೋಟಾ ಮತಗಳು ಸೇರಿ 5609 ಮತಗಳು ಚಲಾವಣೆಯಾಗಿವೆ. 8 ಮತಗಳು ತಿರಸ್ಕೃತವಾಗಿವೆ.

ವಾರ್ಡ್ ನಂಬರ್ 3 ರಲ್ಲಿ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ 3209 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾಹೀದ ಅಹ್ಮದ ನದಾಫ 182, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಹೂಗಾರ 1140, ಪಕ್ಷೇತರ ಅಭ್ಯರ್ಥಿಗಳಾದ ಗುರುರಾಜ ಪ್ರಭು ಸುಣಗಾರ 81, ಮಹಮೂದವ ಹದ್ಲಿ 60, ದೂದಬಾದಶಾ ಬಾನಿ 6, ಮಂಜುನಾಥ ಬಾಳಪ್ಪ ನಡಟ್ಟಿ 209 ಮತಗಳನ್ನು ಪಡೆದಿದ್ದಾರೆ. ನೋಟಾ 36 ಸೇರಿ 4923 ಮತಗಳು ಚಲಾವಣೆಯಾಗಿವೆ.

ವಾರ್ಡ್ ನಂಬರ್ 38 ರಲ್ಲಿ
ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಗಿರಿಮಲ್ಲಪ್ಪ ಮಜ್ಜಗಿ 3685 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಆಪ್ ಅಭ್ಯರ್ಥಿ ಮಲ್ಲಪ್ಪ ತಡಸದ 582 ಮತಗಳನ್ನು ಹಾಗೂ ಕಾಂಗ್ರೇಸ್
ಅಭ್ಯರ್ಥಿ ಮಹಮ್ಮದತೌಸಿಫ 546 ಮತಗಳನ್ನು ಪಡೆದಿದ್ದಾರೆ. 65 ನೋಟಾ ಅಭ್ಯರ್ಥಿಗಳು ಸೇರಿ ಒಟ್ಟು 4878 ಮತಗಳು ಚಲಾವಣೆಯಾಗಿದ್ದು, 4813 ಮತಗಳು ಸಿಂಧುವಾಗಿವೆ.

ವಾರ್ಡ್ ನಂಬರ್ 37* ರಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶಗೌಡ ಚಂದ್ರಶೇಖರಗೌಡ ಕೌಜಗೇರಿ 3163 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಭಿಮನ್ಯು ರಾಜೇಂದ್ರ ರೆಡ್ಡಿ 1188 ಮತಗಳನ್ನು ಹಾಗೂ‌ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ತೋಟಗೇರ 282 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಿಂಗರಾಜ ಗುಡ್ಡಪ್ಪ ಕಲ್ಲಾಪೂರ 453 ಮತಗಳನ್ನು ಪಡೆದಿದ್ದಾರೆ‌. ನೋಟಾ 70 ಮತಗಳು ಸೇರಿ ಒಟ್ಟು 5156 ಮತಗಳು ಚಲಾವಣೆಯಗಿವೆ. 5156 ಮತಗಳು ಸಿಂಧು ಆಗಿವೆ.

ವಾರ್ಡ್ 36 ರಲ್ಲಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಮೂರುಸಾವಿರಪ್ಪ ಕೊರವಿ 3891 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೀರಭದ್ರಯ್ಯ ಹಿರೇಹಾಳ 520 ಹಾಗೂ ಆಪ್ ಅಭ್ಯರ್ಥಿ ಮಲ್ಲಿಕಾರ್ಜುನಯ್ಯ ಬಸಯ್ಯ ಹಿರೇಮಠ 347 ಮತಗಳನ್ನು ಪಡೆದಿದ್ದಾರೆ. 92 ನೋಟಾ ಮತಗಳು ಸೇರಿ 4850 ಮತಗಳು ಚಲಾಯಿಸಲ್ಪಟ್ಟಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *