ರಾಜ್ಯ

ಕಾಂಗ್ರೆಸ್ ನ ದೀಪಕ ಚಿಂಚೋರೆ, ರಜತ ಉಳ್ಳಾಗಡ್ಡಿಮಠ, ಮಂಜುನಾಥ ನಡಟ್ಟಿಗೆ ತಲಾ ಒಂದೊಂದು ಕೋಟಿ ಮಾನಹಾನಿ ಪರಿಹಾರ ನೀಡಿ ಎಂದ ಹುಬ್ಬಳ್ಳಿ-ಧಾರವಾಡ ಮೇಯರ್

ಧಾರವಾಡ prajakiran.com : ಸೆ.26 ರಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡ ರಾಷ್ಟ್ರಪತಿಯವರಿಗೆ ಪೌರ ಸನ್ಮಾನ ಕಾರ್ಯಕ್ರಮದ ಕುರಿತು ಕಾಂಗ್ರೆಸ್ ಪಕ್ಷದ ದೀಪಕ ಚಿಂಚೋರೆ, ರಜತ ಉಳ್ಳಾಗಡ್ಡಿಮಠ ಮತ್ತು ಮಂಜುನಾಥ ನಡಟ್ಟಿ ಮಾನಹಾನಿ ಮಾಡಿದ್ದಕ್ಕಾಗಿ ತಲಾ ಒಂದೊಂದು ಕೋಟಿ ಪರಿಹಾರ ನೀಡಿ ಎಂದು ಮಹಾಪೌರ ಈರೇಶ ಅಂಚಟಗೇರಿ ಕಾನೂನು ಸಮರ ಸಾರಿದ್ದಾರೆ.

ನನ್ನ ವಿರುದ್ಧ ಮಿಥ್ಯಾರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ಸದರಿ ಕಾರ್ಯಕ್ರಮದಲ್ಲಿ ಅವ್ಯವಹಾರ ಆಗಿದೆ ಅಂತಾ ಸುಳ್ಳು ಆರೋಪಗಳನ್ನು ಮಾಡಿದ ಕುರಿತು ವಿವಿಧ ದಿನಪತ್ರಿಕೆಗಳಲ್ಲಿ, ಟಿ.ವಿ. ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ PayMAYOR ಅಂತ ಕೆಟ್ಟದ್ದಾಗಿ ಪೋಸ್ಟ್ ಮಾಡಲಾಗಿದೆ.

ಈ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ. ಹೀಗಾಗಿ ಮಹಾಪೌರರ ವಿರುದ್ಧ ಮಾನಹಾನಿ ಮಾಡಿದ್ದಕ್ಕೆ ಮಹಾಪೌರ ಈರೇಶ ಅಂಚಟಗೇರಿ ತಮ್ಮ ವಕೀಲರ ಮೂಲಕ ನೋಟಿಸ್ ನೀಡಿದ್ದು, ಮಾನಹಾನಿಗೆ ಪರಿಹಾರ ಅಂತ ತಲಾ ಒಂದೊಂದು ಕೋಟಿ (ಒಟ್ಟು 3 ಕೋಟಿ ) ರೂಪಾಯಿಗಳ ಹಣವನ್ನು ಹುಬ್ಬಳ್ಳಿ ಧಾರವಾಡ ಜನತೆಯ ಮೂಲ ಸೌಕರ್ಯಗಳನ್ನು ಒದಗಿಸಲು ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಮಹಾನಗರ ಪಾಲಿಕೆಗೆ ಸಂದಾಯ ಮಾಡಬೇಕು

ಮತ್ತು ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿದ್ದಕ್ಕಾಗಿ ಬೇಷರತ್ತಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು.

ಇಲ್ಲವಾದಲ್ಲಿ ಅವರುಗಳ ಮೇಲೆ ಸೂಕ್ತ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸುತ್ತೇನೆಂದು
ಈರೇಶ ಅಂಚಟಗೇರಿ ಎಚ್ಚರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *