ಅಂತಾರಾಷ್ಟ್ರೀಯ

ವೀರಶೈವ-ಲಿಂಗಾಯತದ ಎಲ್ಲಾ ಉಪ ಪಂಗಡಗಳನ್ನು ಕೇಂದ್ರದ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಿ : ನಾಗನಗೌಡ ಪಾಟೀಲ ನೀರಲಗಿ

ವೀರಶೈವ-ಲಿಂಗಾಯತ ಎಲ್ಲಾ ಉಪ ಪಂಗಡಗಳನ್ನು ಒಂದುಗೂಡಿಸಿ 3 ಬಿ ಮೀಸಲಾತಿಗೆ ಸೇರಿಸಿ
ಮಿಸಲಾತಿ ಪ್ರಮಾಣ ಶೇ 15% ಕ್ಕೆ ಏರಿಸಿ

ಧಾರವಾಡ ಪ್ರಜಾಕಿರಣ.ಕಾಮ್ :
ರಾಜ್ಯಗಳ ಜನಸಂಖ್ಯೆ, ಸಾಮಾಜಿಕ, ಆರ್ಥಿಕತೆ ಅನುಗುಣವಾಗಿ ಕಾಲಕಾಲಕ್ಕೆ ವರ್ಗೀಕರಣವನ್ನು ಸರಿಪಡಿಸುವುದು ಸರ್ಕಾರದ ಆದ್ಯ ಕರ್ತವ್ಯ ಆಗಿದೆ. ಆದರೆ, ಆದ್ಯತೆಯಿಂದ ‘ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಅನ್ಯಾಯ ಆಗದ ರೀತಿ ಸಾಮಾಜಿಕ ನ್ಯಾಯದಡಿ ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂದು ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ನಾಗನಗೌಡ ಪಾಟೀಲ ನೀರಲಗಿ ಹಾಗೂ ರಾಜ್ಯ ಸಂಚಾಲಕ ನಾಗರಾಜ ಕಿರಣಗಿ ಒತ್ತಾಯಿಸಿದರು.

ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಭಾರತ ಸರ್ಕಾರದ ನಾನಾ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯುವಾಗ ನಮ್ಮ ವಿಶ್ವ ವೀರಶೈವ ಲಿಂಗಾಯತ ಉಪ ಪಂಗಡಗಳಿಗೆ ಅನ್ಯಾಯವಾಗುತ್ತಿದ್ದು, ಎಲ್ಲಾ ವೀರಶೈವ ಉಪ ಪಂಗಡಗಳನ್ನು ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂಬುದು ನಮ್ಮ ಬಹುದಿನದ ಬೇಡಿಕೆಯಾಗಿದೆ ಎಂದರು‌.

ಪ್ರಧಾನ ಮಂತ್ರಿಗಳು ಇದಕ್ಕೆ ಗಮನ ಹರಿಸುವ ಹಾಗೆ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ ಜೋಷಿ ಹಾಗೂ ಮುಖ್ಯ ಮಂತ್ರಿಗಳಾದ ಬೊಮ್ಮಾಯಿಯವರು ಇದರ ಬಗ್ಗೆ ಮುತವರ್ಜಿ ವಹಿಸಿ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕೆಂಬುದು ಒತ್ತಾಯವಾಗಿದೆ.

ಈ ಹಿಂದೆ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಇದರ ಬಗ್ಗೆ ಕಾರ್ಯ ಪ್ರವರ್ತರಾಗಿದ್ದರು.

ಆದರೆ ಅದೇ ವೇಳೆಯಲ್ಲಿ ರಾಜಕೀಯ ಕಾರಣಾತರದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಆ ಕಾರ್ಯವು ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋಗುವುದು ಹಾಗೇ ಉಳಿದುಕೊಂಡಿದೆ ಎಂದರು.

ಕರ್ನಾಟಕ ಸರ್ಕಾರದ ಮಿಸಲಾತಿಯ ಬಗ್ಗೆ 3 ಬಿಯನ್ನು ಶೇ 15ಕ್ಕೆ ಏರಿಸುವುದರಿಂದ ಸಮಾಜದ ಒಡಕನ್ನು ತಡೆದು ನಮ್ಮ ವೀರಶೈವ ಲಿಂಗಾಯತ ಉಪಜಾತಿ ಪಂಗಡಗಳು ಒಂದೇ ಸೂರಿನಡಿ ಬರಬೇಕೆಂದರೆ, ಈಗಿರುವ 3ಬಿ ಮೀಸಲಾತಿ 5%, ಕರ್ನಾಟಕದಲ್ಲಿ ರಾಜ್ಯ ಮೀಸಲಾತಿ, ಸಂಬಂದಿ ಇಡಬ್ಲೂಎಸ್ 10% ಮೀಸಲಾತಿಯನ್ನು 3ಬಿ ಗೆ ಕೂಡಿಸಿದರೆ ಒಟ್ಟು 15% ಆಗುತ್ತದೆ ಎಂದರು.

ಲಿಂಗಾಯತ ಉಪ ಪಂಗಡಗಳು ಈಗಾಗಲೇ ಪ್ರವರ್ಗ ಮತ್ತು 23 ದಲ್ಲಿ ಇದ್ದು ಸೌಲಭ್ಯವನ್ನು ಪಡೆಯುತ್ತಿರುತ್ತವೆ. ವೀರಶೈವ ಲಿಂಗಾಯತ ಎಲ್ಲಾ ಒಳ ಪಂಗಡಗಳನ್ನು ಸೇರಿಸಿ 3ಬಿಯಲ್ಲಿ ಸೇರಿಸಬೇಕು.

ಈಗಿರುವ 3ಬಿಯಲ್ಲಿಯ ಬೇರೆ ಬೇರೆ ಜಾತಿ ಅಂದರೆ ಬ್ರಾಹಣ. ಜೈನ,ಮರಾಠಾ ಮುಂತಾದ ಸಣ್ಣ ಜನಸಂಖ್ಯೆ ಜಾತಿಗಳನ್ನು 2ಎ ಗೆ ಸೇರಿಸಬೇಕು ಇದರಿಂದ ಸಾಮಾಜಿಕ ನ್ಯಾಯ ಹಾಗೂ ಜನಸಂಖ್ಯೆ ಅನುಗುಣವಾಗಿ ಸಮಪಾಲು-ಸಮಬಾಳು ನೀಡಿದಂತಾಗುತ್ತದೆ.

ಇದರಿಂದ ಎಲ್ಲರಿಗೂ ಅನುಕೂಲವಾಗುವ ರೀತಿ ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂದು ಸಮಸ್ತ ವಿಶ್ವ ವೀರಶೈವ ಲಿಂಗಾಯತ ಸಮಾಜದ ಬೇಡಿಕೆಯಾಗಿರುತ್ತದೆ ಎಂದರು.

ವೀರಶೈವಲಿಂಗಾಯತ ಸಮಾಜ ಈ ಮೀಸಲಾತಿ ಪಡೆಯುವುದಕ್ಕೋಸ್ಕರ ಈಗಾಗಲೇ ಛಿದ್ರಛಿದ್ರವಾಗಿ ಕೆಲವೊಂದು ಉಪ ಪಂಗಡಗಳು ಧಾರ್ಮಿಕವಾಗಿ ವೀರಶೈವ ಲಿಂಗಾಯತರಾಗಿಯೇ ಇದ್ದು ಕಾನೂನಿನ ಅನುಕೂಲಕ್ಕೋಸ್ಕರ, ಪ್ರವರ್ಗ 1 ಪ್ರವರ್ಗ 2ಎ ಮತ್ತು 2ಬಿ, ‘ಜಿಯಲ್ಲಿ ಸೌಲಭ್ಯಗಳನ್ನು ಪಡೆಯುವದಕ್ಕೋಸ್ಕರ ಕಾನೂನಿನ ರೀತಿ ತಮ್ಮ ತಮ್ಮ ಉಪ ಪಂಗಡದ ಮುಂದೆ ವೀರಶೈವ ಲಿಂಗಾಯತ ಕಟ್ಟವನ್ನು ತೆಗೆದು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ತೊಂದರೆಯಾಗುತ್ತಿದೆ ಎಂದರು‌

ಇಂದಿನ ಈ ಕಾಲಘಟ್ಟದಲ್ಲಿ ಉದ್ಭವಿಸಿದ ಮೀಸಲಾತಿಯ ಕೂಗಿನ ಬೇಡಿಕೆಗೆ ಸಮಾಜ ಸಮಾಜದಲ್ಲಿಯೇ ವಿರೋಧ ಭಾಸ ಕಂದಕವು ಹೆಚ್ಚಾಗುತ್ತಿದೆ.

ಈ ಕಂದಕವನ್ನು ಹೆಚ್ಚಾಗದಂತೆ ಅವರ ಬೇಡಿಕೆಯನ್ನು ಸಹ ಪೂರೈಸುವುದು ಸಮಸ್ತ ಜನತೆಯನ್ನು ಸಹಬಾಳ್ವೆ ಕಲ್ಪಿಸುವದು ಸರ್ಕಾರದ ಆದ್ಯತೆ ಯಾಗಿದೆ.

ಒಂದು ವೇಳೆ ಪಂಚಮಸಾಲಿ ಸಮಾಜಕ್ಕೆ ಬೇರೆ ಪ್ರವರ್ಗ ಮೀಸಲಾತಿ ಕಲ್ಪಿಸುವುದಾದಲ್ಲಿ 12% ಮೀಸಲಾತಿ ಬರುವಹಾಗೆ ಕಲ್ಪಿಸಬೇಕು ಎಂದು ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ನಾಗನಗೌಡ ಪಾಟೀಲ ನೀರಲಗಿ ಹಾಗೂ ರಾಜ್ಯ ಸಂಚಾಲಕ ನಾಗರಾಜ ಕಿರಣಗಿ ಒತ್ತಾಯಿಸಿದರು‌.

ಪತ್ರಿಕಾಗೋಷ್ಠಿಯಲ್ಲಿ ನಿಂಗಣ್ಣ ಕೂಡ ಒಕ್ಕಲಗರ, ಮಲ್ಲಿಕಾರ್ಜುನ ಹಡಪದ, ಮತ್ತು ರಾಮನಗೌಡ ಕಿತ್ತೂರ, ಇತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *