ರಾಜ್ಯ

ರಾಜ್ಯ ಸರಕಾರದ ಕ್ರಮದಿಂದಾಗಿ ಸಾವಿರಾರು ಶಿಕ್ಷಕರಿಗೆ ವರ್ಗಾವಣೆ ಮರೀಚಿಕೆ

ಧಾರವಾಡ prajakiran.com :  ಶಿಕ್ಷಕರ ವರ್ಗಾವಣೆ ನಿಯಂತ್ರಣ ಕರಡು ನಿಯಮಗಳು 2020 ಪ್ರಕಾರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ.

ಆದರೆ ತಾವು ಹೊರಡಿಸಿರುವ ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕರಡು ನಿಯಮಗಳು ಶಿಕ್ಷಕರ ಸ್ನೇಹಿಯಾಗದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ತಿಳಿಸಿದ್ದಾರೆ.

ಇದರಿಂದಾಗಿ ಸಾವಿರಾರು ಶಿಕ್ಷಕಿಯರಿಗೆ ವರ್ಗಾವಣೆ ಮರೀಚಿಕೆಯಾಗಿದೆ.ಆದ್ದರಿಂದ ನಿಯಮಗಳನ್ನು ಮರು ಮಾರ್ಪಾಡು ಮಾಡಿ ಶಿಕ್ಷಕರ ಸ್ನೇಹಿ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.  

25/ ಖಾಲಿ ಹುದ್ದೆಗಳಿರುವ ತಾಲೂಕಿನಲ್ಲಿ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶವಿಲ್ಲ ಎಂಬ ನಿಯಮವನ್ನು ರದ್ದುಪಡಿಸಬೇಕು. ನೇಮಕಾತಿಯಲ್ಲಿ 25/ ಖಾಲಿ ಹುದ್ದೆ ಗಳಿರುವ ತಾಲೂಕಿಗೆ ಹೆಚ್ಚಿನ ಹುದ್ದೆ ನಿಗದಿ ಮಾಡಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.




ದಯವಿಟ್ಟು ಶೇಕಡ 25  ನ್ನು ಕೂಡ ಶಿಕ್ಷಕ ಸ್ನೇಹಿಯಾಗಿಸಿ,  25/,ಕ್ಕಿಂತ ಹೆಚ್ಚು ಖಾಲಿ ಇರುವ ಹುದ್ದೆಗಳ ತಾಲೂಕುಗಳಿಂದ ವರ್ಗಾವಣೆ ಇಲ್ಲ ಎಂಬ ನಿಯಮದಿಂದ ಅನೇಕ ತಾಲ್ಲೂಕುಗಳಿಂದ ವರ್ಗಾವಣೆ ಆಗಿಲ್ಲ ಎಂದು ತಿಳಿಸಿದ್ದಾರೆ.

ವೈದ್ಯಕೀಯ, ಅಂಗವಿಕಲ, ವಿಧವಾ, ಮಾಜಿ ಸೈನಿಕ ಹಾಗೂ ಅವಿವಾಹಿತರು, ವಿಚ್ಛೇದಿತರು, ಪತಿ, ಪತ್ನಿ, ಸಿಂಗಲ್,  ಕಪಲ್  ನೌಕರರ ಪ್ರಕರಣಗಳ ಗಂಭೀರತೆಯನ್ನು ದಯವಿಟ್ಟು ಯೋಚಿಸಿ ಎಂದು ಕೋರಿದ್ದಾರೆ.

25/ ಕ್ಕಿಂತ ಹೆಚ್ಚು ಖಾಲಿ ಹುದ್ದೆ ಇರುವ ತಾಲೂಕುಗಳಿಂದ ವರ್ಗಾವಣೆ ಇಲ್ಲ ಎಂಬ ನಿಯಮ ರದ್ದು ಮಾಡಿ, ಶಿಕ್ಷಣ ಸ್ನೇಹಿ ಎಲ್ಲ ಶಿಕ್ಷಕರಿಗೂ  ಸ್ನೇಹಿಯಾಗುವಂತಾಗಲಿ ಎಂದಅವರು ಗಂಭೀರ ಪ್ರಕರಣಗಳ ಶಿಕ್ಷಕರನ್ನು ಒತ್ತಡದಿಂದ ಬಂಧಿಸಿ, ಅವರಿಂದ ಯಾವ ತರಹದ ಗುಣಮಟ್ಟದ ಬೋಧನೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದು ಶಿಕ್ಷಕರ ವೈಯಕ್ತಿಕ ಬದುಕು, ಮಕ್ಕಳ ಶಿಕ್ಷಣ ಮತ್ತು ಬೋಧನೆಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ಶಿಕ್ಷಕರು ತಮ್ಮ ಕುಟುಂಬಗಳ ಜೊತೆ ಬದುಕಲು ಅವಕಾಶ ಮಾಡಿಕೊಡಿ .ಮತ್ತು ಗುಣಾತ್ಮಕವಾಗಿ  ಬೋಧಿಸಲು ಉತ್ಸಾಹ ಇಮ್ಮಡಿಗೊಳಿಸಲು ಪ್ರಸ್ತುತ ಸರ್ಕಾರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.  



ಅಂತರ್ ಘಟಕ ವರ್ಗಾವಣೆ ನಿಗದಿಪಡಿಸಿರುವ ಶೇಕಡಾ 2 ಮಿತಿಯನ್ನು ಶೇಕಡಾ 6 ಗೆ ಹೆಚ್ಚಿಸುವುದು, ಪತಿ-ಪತ್ನಿ ಪ್ರಕರಣ ಹಾಗೂ ಪರಸ್ಪರ ವರ್ಗಾವಣೆಯನ್ನು ಸೇವಾ ಅವಧಿಯಲ್ಲಿ  3 ಬಾರಿ ಅವಕಾಶ ನೀಡುವುದು.

ಇದಕ್ಕೆ ಕಾಲಮಿತಿ ನಿಗದಿ ಪಡಿಸಬಾರದು. ಕನಿಷ್ಠ ಮೂರು ವರ್ಷ ಸೇವೆ ಕಡ್ಡಾಯ ಮಾಡಬೇಕು .ಪತಿ ಪತ್ನಿ ಪ್ರಕರಣದಲ್ಲಿ ಎಲ್ಲಾ ಇಲಾಖೆಗಳನ್ನು ಪರಿಗಣನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜೊತೆಗೆ ಹಿಂದಿ ಶಿಕ್ಷಕರಿಗೆ ಕೌನ್ಸೆಲಿಂಗನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಖಾಲಿ ಹುದ್ದೆಗಳನ್ನು ಸೃಷ್ಟಿಸುವುದು. ಹಾಗೂ ಹಿಂದಿ ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯ ಶಿಕ್ಷಕರ ಹುದ್ದೆಗಳಿಗೆ ತೆಗೆದುಕೊಳ್ಳಲು ಅವಕಾಶವನ್ನು ನೀಡಬೇಕು ಎಂದಿದ್ದಾರೆ .

 ವಲಯ ವರ್ಗಾವಣೆಯನ್ನು ‘ಎ ‘ ವಲಯಕ್ಕೆ ಸೀಮಿತ ಮಾಡದೇ ಎಲ್ಲಾ ವಲಯದ ಶಿಕ್ಷಕರಿಗೆ ವಲಯ ವರ್ಗಾವಣೆ ಎಂಬ ನಿಯಮವನ್ನು ಜಾರಿಗೊಳಿಸುವುದು(ಸಿ-ಬಿ. ಬಿ-ಎ. ಎ-ಸಿ ಅದೇ ತಾಲ್ಲೂಕಿನಲ್ಲಿ ಕ್ರಮವಹಿಸುವುದು)  

12 ವರ್ಷದೊಳಗಿನ ಮಕ್ಕಳಿರುವ ವಿಧವೆಯರಿಗೆ ಮಾತ್ರ ವಿನಾಯಿತಿಯನ್ನು ನೀಡಿದ್ದು ಇದನ್ನು ಸಡಿಲಗೊಳಿಸಿ ಎಲ್ಲ ವಿಧವೆಯರಿಗೂ  ವಿನಾಯ್ತಿ ನೀಡಬೇಕು .



  ಒಂದೇ ಜಿಲ್ಲೆಯಲ್ಲಿ 10 ವರ್ಷಗಳಾದರೂ ವರ್ಗಾವಣೆ ಆಗದೇ ಇರುವ ಶಿಕ್ಷಕರಿಗೆ ತಮ್ಮ ಮೂಲ ಜಿಲ್ಲೆಗಳಿಗೆ ವರ್ಗಾವಣೆಯಾಗಲು ಅವಕಾಶ, ವಿಕಲಚೇತನ ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಒಂದು ಬಾರಿ  ವರ್ಗಾವಣೆ ಎಂಬ ನಿಯಮವನ್ನು ಸಡಿಲಗೊಳಿಸಬೇಕು. 

  ಕೋರಿಕೆ ವರ್ಗಾವಣೆಯನ್ನು ಬಯಸಿದ ಶಿಕ್ಷಕರಿಗೆ ಆದ್ಯತಾ ಪಟ್ಟಿಯನ್ನು ತಯಾರಿಸುವಾಗ ಬೇರೆ ಬೇರೆ ವಿಧದ ಕೋರಿಕೆ ವರ್ಗಾವಣೆಗೆ ಪ್ರತ್ಯೇಕ ಶೇಕಡವಾರು ನಿಗದಿಪಡಿಸುವುದು( ದಂಪತಿ ಪ್ರಕರಣ. ದಂಪತಿ ರಹಿತ ಪ್ರಕರಣ .ಸಾಮಾನ್ಯ ವರ್ಗಾವಣೆ ಪ್ರಕರಣ)  

 ಪ್ರತಿ ಶಾಲೆಯಲ್ಲಿ ಮುಖ್ಯಗುರುಗಳು, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಹೊರತುಪಡಿಸಿ  ಪಿ.ಟಿ. ಆರ್.(ಶಿಕ್ಷಕ-ವಿದ್ಯಾರ್ಥಿ ಅನುಪಾತ) ಆಧಾರದಲ್ಲಿ ಶಿಕ್ಷಕರ ಸಂಖ್ಯೆ ಹಂಚಿಕೆಯಾಗಬೇಕು.  

 ಹೈದರಾಬಾದ್-ಕರ್ನಾಟಕ ಜಿಲ್ಲೆಗಳಲ್ಲಿ 10 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅವರ ಮೂಲ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಲು ಅವಕಾಶ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ. 



ಕಳೆದ ಬಾರಿ ಕಡ್ಡಾಯ ವರ್ಗಾವಣೆಯಿಂದ ಅನ್ಯಾಯವಾದ ಶಿಕ್ಷಕರಿಗೆ. ಸಿ. ಆರ್. ಪಿ. /ಬಿ. ಆರ್. ಪಿ. ಅವರಿಗೆ ಈ ಬಾರಿ ವರ್ಗಾವಣೆಯಲ್ಲಿ ಪ್ರಥಮ ಆದ್ಯತೆ ನೀಡಬೇಕು.

ಆದ್ಯತೆ ಪ್ರಕರಣಗಳಲ್ಲಿ ಗರ್ಭಿಣಿ ಹಾಗೂ ಒಂದು ವರ್ಷದೊಳಗಿನ ಮಗು ಈ ಪ್ರಕರಣವನ್ನು ವಿನಾಯತಿಗೆ ಮಾತ್ರ ಪರಿಗಣಿಸಲಾಗಿದೆ. ಈ ಪ್ರಕರಣವನ್ನು ವರ್ಗಾವಣೆ ಆದ್ಯತೆಯಲ್ಲಿಯು ಪರಿಗಣಿಸಿ 

 ದಂಪತಿ ಪ್ರಕರಣಕ್ಕೆ ಒಳಪಡದ ಸಿಂಗಲ್ ಕಪಲ್ ಶಿಕ್ಷಕರು ಪ್ರತಿಸಾರಿ ವರ್ಗಾವಣೆಯಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ.

ಅಂತಹ ಶಿಕ್ಷಕರಿಗೆ ಈ ಸಾರಿ ವರ್ಗಾವಣೆಯಲ್ಲಿ ಆದ್ಯತೆಯಡಿ ಪ್ರತ್ಯೇಕ ಪ್ರತಿಶತ ನಿಗದಿಪಡಿಸಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ವರ್ಗಾವಣೆಯಲ್ಲಿPST ಮತ್ತು GPT ಹುದ್ದೆಗಳು ಎಂದು ಪರಿಗಣಿಸದೆ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೌನ್ಸಿಲಿಂಗ್ ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದು 

 ಅವಿವಾಹಿತ ಮಹಿಳಾ ಶಿಕ್ಷಕಿಯರಿಗೆ ವರ್ಗಾವಣೆಯಲ್ಲಿ ಆದ್ಯತೆ ಹಾಗೂ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *