ರಾಜ್ಯ

ಬೈಲಹೊಂಗಲ್ ತಹಸೀಲ್ದಾರ್ ಸಿಬ್ಬಂದಿಗೆ ಕರೋನಾ :  ಕಚೇರಿ ಸೀಲ್ ಡೌನ್

ಬೈಲಹೊಂಗಲ prajakiran.com : ರಾಜ್ಯದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವ ಮಹಾಮಾರಿ ಕೊರೊನಾ ಅಟ್ಟಹಾಸ ಇದೀಗ ಬೈಲಹೊಂಗಲ ತಹಸೀಲ್ದಾರರ ಕಚೇರಿಗೂ ತಾಗಿದೆ.

ಇದರಿಂದಾಗಿ ಬೈಲಹೊಂಗಲ ತಹಸೀಲ್ದಾರ ಕಚೇರಿ ಸೀಲ್ ಡೌನ್ ಆಗಿದೆ.ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರಿಗೆ ಕರೋನಾ ಸೊಂಕು ವ್ಯಾಪಿಸಿರುವುದು ದೃಢವಾಗಿದೆ.

ಇದರ ಪರಿಣಾಮ ತಹಸೀಲ್ದಾರ ಕಚೇರಿಯ ಇತರ ಸಿಬ್ಬಂದಿಗೂ ಢವ ಢವ ಶುರುವಾಗಿದೆ.

ಮುಂಜಾಗ್ರತ ಕ್ರಮವಾಗಿ ಸೋಮವಾರ ರಾತ್ರಿಯೇ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಅವರು ಕಳೆದ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು.  ಹೀಗಾಗಿ ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೊಂಕು ಇರುವುದು ದೃಢವಾಗಿದೆ.

ಈ ಹಿನ್ನೆಲೆಯಲ್ಲಿ ಕಚೇರಿಗೆ ಸ್ಯಾನಿಟೈಸರ್ ಸಿಂಪರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ತಹಸೀಲ್ದಾರರ ಕಚೇರಿ ಆವರಣದಲ್ಲಿರುವ ಸರ್ಕಲ್‌  ಇನ್ಸಪೆಕ್ಟರ್ ಕಚೇರಿ  ಸಿಬ್ಬಂದಿಗೂ ಆತಂಕ ಎದುರಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *