ರಾಜ್ಯ

ವಿಜಯ ಕುಲಕರ್ಣಿ, ಚಂದೂ ಮಾಮ, ಸೋಮು ನ್ಯಾಮಗೌಡ, ಬಸವರಾಜ ಮುತ್ತಗಿ ಸೇರಿ ಹಲವರ ದಿನವೀಡಿ ವಿಚಾರಣೆ ನಡೆಸಿದ ಸಿಬಿಐ

ಧಾರವಾಡ prajakiran.com : ಧಾರವಾಡ ಜಿಪಂ ಸದಸ್ಯ ಯೋಗೀಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಸಿಬಿಐ ಅಧಿಕಾರಿಗಳ ತಂಡ ಹಲವರನ್ನು ದಿನವೀಡಿ ಡ್ರಿಲ್ ನಡೆಸಿದ್ದಾರೆ. ಸತತ ಎಂಟು ಗಂಟೆಗಳ ಕಾಲ ಹತ್ತು ಹಲವು ಆಯಾಮಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನಿಟ್ಟು ಸತ್ಯ ಬಾಯಿಬಿಡುವಂತೆ ಮಾಡಿ ಕೆಲವರನ್ನು ಇಕ್ಕಟ್ಟಿಗೆ ಸಿಲುಕಿದರು ಎಂದು ಹೇಳಲಾಗಿದೆ. ಸತ್ಯ ಮರೆ ಮಾಚಲು ಯತ್ನಿಸದವರಿಗೆ ಸರಿಯಾಗಿ ಬಿಸಿ ತಾಕಿದ್ದರಿಂದ ಹಲವರು ಕಂಗಾಲಾಗಿದ್ದರು ಎಂದು ತಿಳಿದುಬಂದಿದೆ. ಶನಿವಾರ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮಾಜಿ ಸಚಿವ ವಿನಯ […]

ರಾಜ್ಯ

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಷಡ್ಯಂತ್ರ ಎಂದ ಕೂಡಲ ಸಂಗಮ ಸ್ವಾಮೀಜಿ

ಬೆಂಗಳೂರು prajakiran.com : ಮಾಜಿ ಸಚಿವ ವಿನಯ ಕುಲಕರ್ಣಿಯವರ ವಿರುದ್ದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿನಯಕುಲಕರ್ಣಿ ಲಿಂಗಾಯತ ಹಾಗೂ ಪಂಚಮಸಾಲಿ ಸಮಾಜದ ಮುಖಂಡ.ಅವರ ಬೆಳವಣಿಗೆಯನ್ನು ಸಹಿಸದೆ ಕೆಲವರು ರಾಜಕೀಯ ಲೆಕ್ಕಚಾರಕ್ಕಾಗಿ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ನಾಯಕರ ವಿರುದ್ದ ಪತ್ರಿಕಾಗೋಷ್ಠಿಯ ಉದ್ದಕ್ಕೂ ಹರಿಹಾಯ್ದ ಸ್ವಾಮೀಜಿ, ಯಾರ ಹೆಸರನ್ನು […]

ರಾಜ್ಯ

ಮಕ್ಕಳ ಪ್ರಾಣ ಭಯದಿಂದ ಸಿದ್ದರಾಮಯ್ಯ ಮೂಲಕ ಕೈ ಸೇರಿದ್ದೆ ಎಂದ ಮಲ್ಲಮ್ಮ ಗೌಡರ

  ಧಾರವಾಡ prajakiran.com : ನಾನು ನನ್ನ ಮಕ್ಕಳ ಪ್ರಾಣ ಭಯದಿಂದ ಸಿದ್ದರಾಮಯ್ಯ ಮೂಲಕ ಕೈ ಸೇರಿದ್ದೆ ಎಂದು ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ಗೌಡರ  ಹೊಸ ಬಾಂಬ್ ಸಿಡಿಸಿದ್ದಾರೆ. ಸಿಬಿಐ ವಿಚಾರಣೆ ತೀವ್ರಗೊಂಡು ಅಂತಿಮ ಹಂತದ ತಲುಪಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು ಅಚ್ಚರಿ ಹಾಗೂ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ಬಿಜೆಪಿ ನಾಯಕರ ಬಳಿ ಹೋಗಿ ಗೋಗರಿದರು. ಆಗ ಅವರು ಸಕರಾತ್ಮಕವಾಗಿ ಸ್ಪಂದಿಸಲಿಲ್ಲ.  ಗಂಡನನ್ನ ಕಳೆದುಕೊಂಡ ನೋವು ನಂಗೂ ಇದೆ ಎಂದು ಗೋಳು […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಮಾಜಿ ಸಚಿವ ವಿನಯ ಕುಲಕರ್ಣಿ, ವಿಜಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಗುರುವಾರ ಬೆಳ್ಳಂ ಬೆಳಗ್ಗೆ  ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಾರಾಕೋಟ್ರಿ ನಿವಾಸದ ಕದವನ್ನು ತಟ್ಟಿದೆ. ಹಲವು ಅಧಿಕಾರಿಗಳ ತಂಡ ಏಕಾಎಕಿ ಅವರ ಮನೆಗೆ ತೆರಳಿ ಅವರನ್ನು ಕರೆದುಕೊಂಡು ಉಪನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಂತೆ ಸೂಚಿಸಿದರು. ಆಗ ಅವರ ಪುತ್ರಿ ತಮ್ಮ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಬಂದು ಪೊಲೀಸ್ ಠಾಣೆಗೆ ಬಿಟ್ಟರು. ಇದೇ […]

ರಾಜ್ಯ

ಧಾರವಾಡದ ಯೋಗೀಶಗೌಡ ಗೌಡರ ಕೊಲೆ ಪ್ರಕರಣ : ಪೊಲೀಸ್ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ  ಯೋಗೀಶಗೌಡಗೌಡರ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಈ ಕುರಿತು ಗುರುವಾರ ವಿಚಾರಣೆ ನಡೆಸಿದ್ದ ಧಾರವಾಡದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು ಈ ಮಹತ್ವದ ತೀರ್ಪು ಹೊರಡಿಸಿದರು. ಅ.೨೨ರಂದು ಗುರುವಾರ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಪ್ರಕರಣ ಧಾರವಾಡದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ಎದುರು […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಮಾಜಿ ಸಚಿವರ ಆಪ್ತರ ವಿಚಾರಣೆ ನಡೆಸಿದ ಸಿಬಿಐ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಕುರಿತಂತೆ ಸಿಬಿಐ ಅಧಿಕಾರಿಗಳ ತಂಡ ಮಾಜಿ ಸಚಿವರ ಹಲವು  ಆಪ್ತರನ್ನು ವಿಚಾರಣೆಗೆ ಒಳಪಡಿಸಿದೆ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಗೆ ಕರೆಸಿಕೊಂಡು ಹಲವು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿ ಮಹತ್ವದ ಸಾಕ್ಷ್ಯ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ವಿನಯಕುಲಕರ್ಣಿಯವರು ಸಚಿವರಾಗಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದ ಕೆ ಎ ಎಸ್ ಅಧಿಕಾರಿ ಸೋಮು ನ್ಯಾಮಗೌಡರ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಮುಂದುವರೆದ ಸಿಬಿಐ ವಿಚಾರಣೆ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ  ಸಿಬಿಐ ವಿಚಾರಣೆ ಸೋಮವಾರವು ಮುಂದುವರೆಯಿತು. ಕಳೆದ ಹಲವು ತಿಂಗಳಿಂದ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿಯೇ ವಿಚಾರಣೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳ ತಂಡ ಸೋಮವಾರಅದರ ಬದಲಿಗೆ ವಿಚಾರಣೆಯನ್ನು ಧಾರವಾಡದ ಡಯಟ್ ಆವರಣಕ್ಕೆ ಸ್ಥಳಾಂತರಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ ಹಲವು ದಿನಗಳಿಂದ ಸಿಬಿಐ ವಿಚಾರಣೆ ಎದುರಿಸುತ್ತಿರುವ ಧಾರವಾಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರನ್ನು ಸೋಮವಾರವು ಐದನೇ ಬಾರಿಗೆ ವಿಚಾರಣೆ […]

ರಾಜ್ಯ

ಧಾರವಾಡ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿ ಹಲವರ ವಿಚಾರಣೆ ನಡೆಸಿದ ಸಿಬಿಐ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಭಾನುವಾರ ಧಾರವಾಡ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿ ಹಲವರ ವಿಚಾರಣೆ ನಡೆಸಿದರು. ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿದ ಶಿವಾನಂದ ಕರಿಗಾರ ಅವರನ್ನು  ಗಂಟೆಗಳಿಗೂ ಅಧಿಕ ಕಾಲ ಸಿಬಿಐ ಅಧಿಕಾರಿಗಳ ತಂಡ ವಿಚಾರಣೆ ನಡೆಸಿ ಹತ್ತು ಹಲವು ಪ್ರಶ್ನೆಗಳ ಮೂಲಕ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದರು ಎನ್ನಲಾಗಿದೆ. ಇದೇ ವೇಳೆ ಭಾನುವಾರ ಕೂಡ ಅನೇಕರು […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ : ಸಿಬಿಐ ವಿಚಾರಣೆ ವೇಳೆ ರಾಜಿ ಸಂಧಾನ ಬಯಲು….!?

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಗುರುವಾರ ದಿನವಿಡಿ ಕಾಂಗ್ರೆಸ್ ಮುಖಂಡರ ವಿಚಾರಣೆ ನಡೆಸಿತು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಯೋಗೀಶಗೌಡ ಪತ್ನಿ ಮಲ್ಲಮ್ಮ ಅವರನ್ನು ಸಿಬಿಐ ಅಧಿಕಾರಿಗಳು ಸತತ ಆರು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ಮೊದಲು ಪ್ರತ್ಯೇಕ ಹಾಗೂ ಆನಂತರ ಒಟ್ಟಿಗೆ ವಿಚಾರಣೆ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಡ್ರಿಲ್ ನಡೆಸಿದ ಸಿಬಿಐ […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣ : ವಿಜಯ ಕುಲಕರ್ಣಿ ಸಿಬಿಐ ವಿಚಾರಣೆ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಮತಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಬಿಐ ಅಧಿಕಾರಿಗಳ ತಂಡ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿಯವರನ್ನು ವಿಚಾರಣೆಗೆ ಒಳಪಡಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಬೆಂಗಳೂರಿನ ಸಿಬಿಐ ಕಚೇರಿಯಲ್ಲಿಯೇ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ ಕುಲಕರ್ಣಿಯವರ ಸಿಬಿಐ ವಿಚಾರಣೆ ಆರಂಭವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಈಗಾಗಲೇ ಹಲವರನ್ನು ತೀವ್ರ ವಿಚಾರಣೆಗೆ […]