ರಾಜ್ಯ

ಧಾರವಾಡದ ಬೆಣ್ಣಿಹಳ್ಳ ಪ್ತವಾಹ : ಎರಡು ರೈತ ಕುಟುಂಬಗಳಿಗೆ ಒಂದು ತಿಂಗಳು ಕಳೆದರೂ ಪರಿಹಾರ ಮರೀಚಿಕೆ  

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳದ ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ತೇಲಿ ಹೋದ ಬಲ್ಲರವಾಡ ಗ್ರಾಮದ ಎರಡು ರೈತ ಕುಟುಂಬಗಳಿಗೆ ರಾಜ್ಯ ಸರಕಾರ ಹಾಗೂ ಧಾರವಾಡ ಜಿಲ್ಲಾಡಳಿತ ಒಂದು ತಿಂಗಳು ಕಳೇದರೂ ಈವರೆಗೆ ಪರಿಹಾರ ನೀಡಿಲ್ಲ. ಘಟನೆ ನಡೆದು  ಒಂದು ತಿಂಗಳು ಕಳೆದರೂ ಸಹ ಧಾರವಾಡ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.  ಅಲ್ಲದೇ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಪರ ಒಳಿತು ಬಯಸದೇ ಬೇಜವಾಬ್ದಾರಿ ತೋರುತ್ತಿರುವದು ಸರಿಯಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ […]

ರಾಜ್ಯ

ಗದಗ ಜಿಮ್ಸ್ ಯಡವಟ್ಟಿಗೆ ಗರಂ…!

ಗದಗ prajakiran.com : ಲಿಪ್ಟ್ ನಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಮೃತ ದೇಹ ಬಿಟ್ಟು ಯಡವಟ್ಟು ಮಾಡಿದ್ದ ಗದಗ ಜಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಗದಗ ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ಎಸ್‌.ಬೂಸರೆಡ್ಡಿ ಅವರ ಜೊತೆ ಮಾತನಾಡಿ ಸಮಸ್ಯೆಯಾಗದಂತೆ ಎಚ್ಚರವಹಿಸಿ ಎಂದು ಸೂಚನೆ ಕೊಟ್ಟಿದ್ದಾರೆ. ಕೊರೊನಾ ರೋಗಿ ಮೃತದೇಹವನ್ನು ಕೆಲ ಹೊತ್ತು ಲಿಫ್ಟ್ ನಲ್ಲಿ ಬಿಟ್ಟು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಸುದ್ದಿ […]

ರಾಜ್ಯ

ಕೊನೆಗೂ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ

ತೇಲಿಹೋದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ  ಪರಿಹಾರ ಧಾರವಾಡ prajakiran.com : ತುಪ್ಪರಿಹಳ್ಳದ ಪ್ರವಾಹದಲ್ಲಿ ತೇಲಿಹೋದ ಹಾರೋಬೆಳವಡಿಯ ರೈತ ಮಡಿವಾಳಪ್ಪ ಜಕ್ಕಣ್ಣವರ ಅವರ ತಂದೆ ನಾಗಪ್ಪ ಅವರಿಗೆ 5 ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು ಭಾನುವಾರ ಧಾರವಾಡ ಜಿಲ್ಲಾಡಳಿತ ಕೊನೆಗೂ ಹಸ್ತಾಂತರಿಸಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದೆ. ತುಪರಿಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ, ಹಿರಿಯ ಜೀವಗಳ ಕಣ್ಣೀರು ಒರೆಸದ ಜಿಲ್ಲಾಡಳಿತ ಎಂದು ಈ ಕುರಿತು ಪ್ರಜಾಕಿರಣ.ಕಾಮ್ ಸಮಗ್ರ ವರದಿ ಪ್ರಕಟಿಸಿತ್ತು. […]

ರಾಜ್ಯ

ಗದಗ ಜಿಲ್ಲೆಯ ಶೇ.೯೬ ರಷ್ಟು ಆಟೊ ಚಾಲಕರಿಗಿಲ್ಲ ನೆರವು…!

೧೬ ಸಾವಿರ ಆಟೋ ಚಾಲಕರಲ್ಲಿ ೪೨೩ ಜನಕ್ಕಷ್ಟೇ ನೆರವು ದಾಖಲಾತಿ, ಮಾಹಿತಿ ಕೊರತೆ  ಸರ್ಕಾರದ ೫೦೦೦ ಪರಿಹಾರ ಧನ ನಾಮಕಾವಾಸ್ತೆ ಮಂಜುನಾಥ ಎಸ್.ರಾಠೋಡ ಗದಗ prajakiran.com : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಆಟೊ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಧನದ ಪ್ರಯೋಜನ ಗದಗ ಜಿಲ್ಲೆಯ ಬಹುತೇಕ ಆಟೊ ಚಾಲಕರಿಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರವು ಪ್ರತಿ ಆಟೊ ಚಾಲಕನಿಗೆ ೫,೦೦೦ ಪರಿಹಾರ ಧನ ಘೋಷಿಸಿತ್ತು. ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಜು. ೩೧ ಕಡೆಯ ದಿನವಾಗಿತ್ತು. ಗದಗ […]

ರಾಜ್ಯ

ಗದಗದಲ್ಲಿ ವೆಂಟಿಲೇಟರ್ ಸಿಗದೆ ಕಾರ್ಮಿಕ ಸಾವು….!

ವೆಂಟಿಲೇಟರ್ ಕೊರತೆ ಕರೋನೇತರ ರೋಗಿಗಳ ಪರದಾಟ ಮಂಜುನಾಥ ಸಿಂಗ್ ರಾಠೋಢ ಗದಗ: ಗುತ್ತಿಗೆ ನೌಕರನೊಬ್ಬ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಾಟಕ್ಕೆ ಮರದ ಕೊಂಬೆ ತೊಡಕಾಗುತ್ತೆಂದು ಕೊಂಬೆ ಕತ್ತರಿಸುವ ವೇಳೆ ಆಯತಪ್ಪಿ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿದ್ದ. ಸರಿಯಾದ ಸಮಯಕ್ಕೆ ವೆಂಟಿಲೇಟರ್ ಸಿಗದ ಹಿನ್ನಲೆಯಲ್ಲಿ ಆತ ಮೃತಪಟ್ಟ ಘಟನೆ ನಗರದಲ್ಲಿ ಸೋಮವಾರ ಜರುಗಿದೆ. ಅಂಬ್ಯುಲೆನ್ಸ್ ಮೂಲಕ ಬಸವರಾಜನನ್ನು ಗದಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ, ವೆಂಟಿಲೇಟರ್ ಕೊರತೆಯ ನೆಪವೊಡ್ಡಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.  ಹುಬ್ಬಳ್ಳಿಯ ಕಿಮ್ಸ್ […]

ರಾಜ್ಯ

ಧಾರವಾಡ ಹೈಕೋರ್ಟ್ ಸರ್ಕಾರಿ ವಕೀಲರ ನೇಮಕದಲ್ಲಿಉತ್ತರ ಕರ್ನಾಟಕಕ್ಕೆ ತಾರತಮ್ಯ

ಧಾರವಾಡ prajakiran.com : ಉತ್ತರ ಕರ್ನಾಟಕದ ಬಹುದಿನದ ಕನಸಾಗಿ ಧಾರವಾಡದಲ್ಲಿ ಉಚ್ಚ ನ್ಯಾಯಾಲಯದ ಪೀಠ ಆರಂಭವಾಗಿ ದಶಕಗಳೇ ಕಳೆದರೂ ಸರ್ಕಾರವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮತ್ತು ತಾರತಮ್ಯ ಮಾಡುವುದನ್ನು ಮುಂದುವರೆಸಿರುವುದು ಸ್ಪಷ್ಟವಾಗುತ್ತಿದೆ. ಧಾರವಾಡದ ಉಚ್ಚ ನ್ಯಾಯಾಲಯದ ಪೀಠದಲ್ಲಿ ಎರಡು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಹುದ್ದೆಗಳಿವೆ. ಅದರಲ್ಲಿ ಒಂದು ಹುದ್ದೆಗೆ ಬೆಂಗಳೂರಿನ ವೃತ್ತಿನಿರತ ವಕೀಲರಾದ ಧ್ಯಾನ್‌ ಪೂಣಚ್ಚ ಅವರನ್ನು ಸರ್ಕಾರ ನೇಮಿಸಿದೆ. ಧ್ಯಾನ್‌ ಪೂಣಚ್ಚ ಅವರು ಬೆಂಗಳೂರಿನಲ್ಲಿಯೇ ವೃತ್ತಿ ನಡೆಸುತ್ತಿದ್ದು ಧಾರವಾಡ ಪೀಠದಲ್ಲಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಹುದ್ದೆಯನ್ನು […]

p h neeralkeri
ರಾಜ್ಯ

ರಾಮಮಂದಿರ ಭೂಮಿಪೂಜೆಗೆ ಉತ್ತರ ಕರ್ನಾಟಕ ನಿರ್ಲಕ್ಷ್ಯ

ಧಾರವಾಡ prajakiran.com : ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದವರನ್ನು ಅಲಕ್ಷಿಸಿರುವುದು ಸರಿಯಲ್ಲ ಎಂದು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕರ್ನಾಟಕದ ಎಂಟು ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆಹ್ವಾನಿಸಲಾದ ಎಂಟು ಮಂದಿ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ನಮ್ಮ ಉತ್ತರ ಕರ್ನಾಟಕದಿಂದ ಯಾರೊಬ್ಬರನ್ನೂ ಆಹ್ವಾನಿಸದಿರುವುದು ವಿಷಾದದ ಸಂಗತಿ, ಶ್ರೀ ರಾಮಜನ್ಮಭೂಮಿ ಹೊರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ನೂರಾರು ಪ್ರಮುಖರು ಧಾರವಾಡ, ಬೆಳಗಾವಿ, […]