ರಾಜ್ಯ

ಸವದತ್ತಿ : ಸತತ ಮಳೆಯಿಂದ ಈರುಳ್ಳಿ ಬೆಳೆಗಾರರಲ್ಲಿ ಕಣ್ಣೀರು….!

ವಿಶೇಷ ವರದಿ : ಪ್ರಶಾಂತ ಹೂಗಾರ್ ಹೊಲದಲ್ಲೆ ಕೊಳೆಯುತ್ತಿರುವ ಈರುಳ್ಳಿ  ಸವದತ್ತಿ prajakiran.com : ತಾಲೂಕಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಸತತ ಮಳೆ ಪರಿಣಾಮ ಈರುಳ್ಳಿ ಬೆಳೆದ ರೈತರು ಕಣ್ಣೀರು ಸುರಿಸುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಹಿಂದಿನ ವರ್ಷ ಅತಿಯಾದ ಮಳೆ ಮತ್ತು ಪ್ರವಾಹದಿಂದ ನಷ್ಟದಲ್ಲಿರುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಹಿಂದಿನ ವರ್ಷದಲ್ಲಿ ಸಾಲ ಸೂಲ ಮಾಡಿ ಬೆಳೆದ ಬೆಳೆ ಮಳೆರಾಯನ ಪಾಲಾಗಿತ್ತು. […]

ರಾಜ್ಯ

ಧಾರವಾಡದಲ್ಲಿ ಧಾರಾಕಾರ ಮಳೆಗೆ ನೂರಾರು ಮನೆಗಳಿಗೆ ನುಗ್ಗಿದ ನೀರು : ಗ್ರಾಮೀಣ ಶಾಸಕರ ವಿರುದ್ದ ಜನತೆ ಆಕ್ರೋಶ

ಧಾರವಾಡ prajakiran.com : ಧಾರವಾಡದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಸಾಧನಕೇರಿಯ ಬಳಿಯ ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ್ ಪ್ಲಾಟ್ ನ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೆ, ಮುಂದೆ ಸಾಧನಕೇರಿಯ ನೀರು ಕೋಡಿ ಹರಿದು ಬ್ರಹ್ಮಚೈತನ್ಯ ಪಾರ್ಕ್ ನಲ್ಲಿ ಕೂಡ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅದೇ ರೀತಿ ದೊಡ್ಡ ನಾಯಕನಕೊಪ್ಪ, ಕೆ.ಎಚ್. ಬಿ ಕಾಲೋನಿಯ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಜನತೆ ಕಕ್ಕಾಬಿಕ್ಕಿಯಾಗಿದ್ದು, ಹಲವು ಗಂಟೆಗಳ ಕಾಲ […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ಸಾಕಷ್ಟು ಬೆಳೆಹಾನಿಯಾಗಿದೆ. ಕಷ್ಟಪಟ್ಟು ರೈತ ಬೆಳೆದ ಬೆಳೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು, ಗದ್ದೆಗಳು ಕೆರೆಗಳಂತಾಗಿವೆ. ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನಿಗೆ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ‌ ಜಿಲ್ಲೆಯ ರೈತನ ಬದುಕುಮೂರಾಬಟ್ಟೆಯಾಗಿದ್ದು, ಶೇಂಗಾ, ಹೆಸರು, ಸೋಯಾಬಿನ್ ಸೇರಿದಂತೆ […]

ಜಿಲ್ಲೆ

ಹಳ್ಳವಾದ ಧಾರವಾಡದ ಹಾಸ್ಮಿನಗರ ರಸ್ತೆ

ಧಾರವಾಡ prajakiran.com  : ರಾತ್ರಿಯಿಡೀ ಮಳೆ ಸುರಿದ ಹಿನ್ನೆಲೆ ಯಲ್ಲಿ ಧಾರವಾಡದ ಹಾಸ್ಮಿನಗರ ರಸ್ತೆ ಹಳ್ಳದಂತಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಹೋಗಲು   ಪರದಾಟ ನಡೆಸುವಂತಾಗಿದೆ. ಹದಗೆಟ್ಟ ರಸ್ತೆ ಗುಂಡಿಗಳಲ್ಲಿ ತುಂಬಿ ನಿಂತಿರುವ ನೀರುಹಾಸ್ಮೀ ನಗರ 1ನೇ ಕ್ರಾಸ್‌ನಲ್ಲಿ ಈ ಯಡವಟ್ಟು ಆಗಿದೆ. ತುಂಬಿರುವ ನೀರುಬಕೇಟ್‌ಗಳಿಂದ  ಹೊರ ಹಾಕುತ್ತಿರುವ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ದಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೀರು ಹೊರ ಹಾಕಿ ದಾರಿ ಸುಗಮ‌ ಮಾಡಿಕೊಳ್ಳುತ್ತಿರುವ  ಸ್ಥಳೀಯರು ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ನೋಡುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಅನೇಕರು ತಗ್ಗು […]

ರಾಜ್ಯ

ಗದಗನಲ್ಲಿ ಮಳೆರಾಯನ ಅವಾಂತರಕ್ಕೆ ರಾತ್ರಿಯಿಡಿ ಜಾಗರಣೆ

ಜಲ್ಲಿಗೇರಿ ತಾಂಡಾ ಸಂಪೂರ್ಣ ಕೆರೆ ನೀರಲ್ಲೇ ರಾತ್ರಿಯಿಡೀ ಕಳೆದ ಜನತೆ ಗದಗ : ರಾತ್ರಿಯಿಡೀ ಸುರಿದ ರಣ ಮಳೆಯಿಂದಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಲವಡೆ ಅನೇಕ ಅವಾಂತರ ಸೃಷ್ಟಿಯಾಗಿವೆ. ಇದರಿಂದಾಗಿ ತಾಲೂಕಿನ ಜಲ್ಲಿಗೇರಿ ತಾಂಡಾ ಸಂಪೂರ್ಣ ಕೆರೆಯಂತಾಗಿದೆ.ತಾಂಡಾದ ಅನೇಕ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು ರಾತ್ರಿಯಿಡೀ ಗ್ರಾಮಸ್ಥರು ಹೈರಾಣಾಗಿದ್ದಾರೆ. ತಡರಾತ್ರಿಯಿಂದ ನಸುಕಿನ ಜಾವದವರೆಗೂ ಸುರಿದ ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಮಕ್ಕಳು, ವೃದ್ಧರು, ಮಹಿಳೆಯರು ನೀರಲ್ಲೇ ರಾತ್ರಿಯಿಡೀ ಕಳೆದ ಪರದಾಡಿದ್ದಾರೆ. ಗೃಹ ಉಪಯೋಗಿ ವಸ್ತುಗಳು […]

ಜಿಲ್ಲೆ

ಧಾರವಾಡದ ಮಾರಡಗಿಯಲ್ಲಿ ಹತ್ತಾರು ಮನೆಗಳಿಗೆ ನುಗ್ಗಿದ ನೀರು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಈ ಮಳೆಯಿಂದಾಗಿ ತಾಲೂಕಿನ ಮಾರಡಗಿಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಮಾರಡಗಿ ಗ್ರಾಮದ ಮಟ್ಟಿ ಕೆರೆ ತುಂಬಿದ್ದರಿಂದ ಜನತಾ ಪ್ಲಾಟ್ಗಳ ಮನೆಗೆ ನೀರು ನುಗ್ಗಿದೆ.  ಇಂದಿರಾಗಾಂಧಿ ಕಾಲದಲ್ಲಿ ಹಾಕಿಸಿಕೊಂಡ ಮನೆಗಳು ಇದಾಗಿದ್ದು, ಪ್ರತಿ ಭಾರಿ ದೊಡ್ಡ ಮಳೆಯಾದರೆ ಸಾಕು ಕೆರೆ ತುಂಬಿದರೆ ಪ್ರತಿ ವರ್ಷ ಇದೇ ಗೋಳು ಅನುಭವಿಸಬೇಕಾಗುತ್ತದೆ. ಒಂದೊಂದು ಬಾರಿ ರಾತ್ರಿಯಿಡಿ ಮಳೆ ಬಂದರೆ ಜೀವ ಕೈ ಯಲ್ಲಿ ಹಿಡಿದುಕೊಂಡು ಬದುಕುವಂತಹ […]