ರಾಜ್ಯ

ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ನಿರ್ದೇಶಕರಾಗಿ ಮಮತಾ ನಾಯಕ ಅಧಿಕಾರ ಸ್ವೀಕಾರ

ಧಾರವಾಡ prajakiran.com : ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕಶೈಕ್ಷಣಿಕ ವಲಯದ ಆಯುಕ್ತರ ಕಚೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನೂತನ ನಿರ್ದೇಶಕರಾಗಿ ಕೆ.ಇ.ಎಸ್. ಹಿರಿಯ ಶ್ರೇಣಿ ಅಧಿಕಾರಿ ಮಮತಾ  ನಾಯಕ  ಶನಿವಾರ ಅಧಿಕಾರ ಸ್ವೀಕರಿಸಿದರು. ೧೯೯೪ರಲ್ಲಿ ಕೆ.ಇ.ಎಸ್. ತೇರ್ಗಡೆಯಾಗಿ ಉ.ಕ. ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸರಕಾರಿ ಸೇವೆ ಆರಂಭಿಸಿದರು.  ನಗರದ ಡಯಟ್ ಉಪನ್ಯಾಸಕರಾಗಿ ಸೇವೆಸಲ್ಲಿಸಿ, ಬಿಇಓ ಹುದ್ದೆಗೆ ಪದೋನ್ನತಿ ಹೊಂದಿ ಕಾರವಾರ ತಾಲೂಕಿನ ಬಿಇಓ ಆಗಿ ಸೇವೆ ಸಲ್ಲಿಸಿದರು.  ನಗರದ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ, ಧಾರವಾಡ ಡಯಟ್ ಉಪಪ್ರಾಚಾರ್ಯರಾಗಿ ಸೇವೆಗೈದಿದ್ದಾರೆ. ಡಿಡಿಪಿಐ ಹುದ್ದೆಗೆ ಪದೋನ್ನತಿ ಪಡೆದು, ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ)ದ ಸಮಾನಾಂತರ ಹುದ್ದೆಯಲ್ಲಿ ರೀಡರ್ ಆದರು. ನಗರದ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಮತ್ತು ಹಾವೇರಿ ಜಿಲ್ಲೆಯ ಆಡಳಿತ ಉಪನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ. ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ಬೆಳಗಾವಿಯ ಸಿಟಿಇ ಪ್ರಾಚಾರ್ಯರಾಗಿ ಮತ್ತು ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.  […]

education minister sureshkumar
ರಾಜ್ಯ

ರಾಜ್ಯದಲ್ಲಿ ಜಾರಿ ತಂದಿರುವ ವಿದ್ಯಾಗಮ ತಾತ್ಕಾಲಿಕವಾಗಿ ಸ್ಥಗಿತ

ಬೆಂಗಳೂರು prajakiran.com : ರಾಜ್ಯದಲ್ಲಿ ಜಾರಿ ತಂದಿರುವ #ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿ, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತಮ್ಮ ಮುಖಪುಸ್ತಕದಲ್ಲಿ ಬರೆದುಕೊಂಡಿರುವಅವರು, #ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ ಎಂದು ವಿವರಿಸಿದ್ದಾರೆ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ […]

ರಾಜ್ಯ

ಶಿಕ್ಷಕರು ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ವಿದ್ಯಾರ್ಥಿಗಳನ್ನು ಸಂಪರ್ಕಿಸಿ

ಧಾರವಾಡ prajakiran.com : ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ನೀಡಬೇಕು ಎಂದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕಿ ಮಮತಾ ನಾಯಕ ಹೇಳಿದರು.  ಅವರು ಮಂಗಳವಾರ ನಗರದ ಡಯಟ್‌ನ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಜಿಲ್ಲಾ ಮಟ್ಟದ ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯು ಬೇರೆ ರಾಜ್ಯಗಳಲ್ಲಿಯೂ ಇದೀಗ ಅನುಷ್ಠಾನವಾಗುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು. ಪ್ರತೀ ವಾರ […]

ಜಿಲ್ಲೆ

ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾಗಮ ಅನುಷ್ಠಾನ ವೀಕ್ಷಣೆ   

 ಧಾರವಾಡ prajakiran.com : ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಮಮತಾ ನಾಯಕ ಸೋಮವಾರ ವೀಕ್ಷಣೆ ಮಾಡಿದರು.  ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನದ ಕುರಿತು ಸಮಗ್ರ ಮಾಹಿತಿಯನ್ನು ಪಡೆದು ಮಾರ್ಗದರ್ಶನ ಮಾಡಿದರು. ನಂತರ ಧಾರವಾಡ ಗ್ರಾಮೀಣ ವಲಯದ ಕೆಜಿಎಸ್ ನರೇಂದ್ರ ಹಾಗೂ ಜಿಹೆಚ್‌ಎಸ್ ಚಿಕ್ಕಮಲ್ಲಿಗವಾಡ ಶಾಲೆಗಳ ವೀಕ್ಷಣೆ ಮಾಡಿದರು. ಗ್ರಾಮೀಣ ಮಕ್ಕಳು ಬಹಳ ಉತ್ಸಾಹದಿಂದ ಕಲಿಕಾ ಕೇಂದ್ರಗಳಲ್ಲಿ ಭಾಗವಹಿಸಿರುವುದು ಹಾಗೂ ಊರಿನ ಜನರ […]

ಜಿಲ್ಲೆ

ಶಿಕ್ಷಣಾಧಿಕಾರಿಗಳ ಸಂಘದ ಬೇಡಿಕೆಗೆ ಸಚಿವರ ಭರವಸೆ

ಧಾರವಾಡ prajakiran.com : ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಸಲ್ಲಿಸಿದ ಪ್ರಮುಖ ೪ ಬೇಡಿಕೆಗಳ ಈಡೇರಿಕೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಭರವಸೆ ನೀಡಿದರು. ಗುರುವಾರ ನಗರಕ್ಕೆ ಆಗಮಿಸಿದ್ದ ಸಚಿವರಿಗೆ ಶಿಕ್ಷಣಾಧಿಕಾರಿಗಳ ಸಂಘದ ಪರವಾಗಿ ಮನವಿ ಅರ್ಪಿಸಲಾಯಿತು. ಈಗಾಗಲೇ ಡಿ.ಪಿ.ಸಿ ಆಗಿರುವ ಶಿಕ್ಷಣ ಇಲಾಖೆಯ ಗ್ರುಪ್ ಬಿ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಶೀಘ್ರ ಸ್ಥಳ ನಿಯುಕ್ತಿಗೊಳಿಸುವದು. ಸರ್ಕಾರದಿಂದ ರಚನೆಯಾಗಿರುವ ಹೊಸ ತಾಲೂಕುಗಳಿಗೆ ಶೀಘ್ರವೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕಗೊಳಿಸಿ […]

ರಾಜ್ಯ

ಪಾರ್ಶ್ವವಾಯು ಪೀಡಿತ ಶಿಕ್ಷಣಾಧಿಕಾರಿಗೆ ಸ್ವಯಂ ನಿವೃತ್ತಿ ಆದೇಶ ಹಸ್ತಾಂತರ

ಶೀಘ್ರ  ನಿವೃತ್ತಿಯ ಎಲ್ಲಾ ಸೌಲಭ್ಯಗಳು ಅನುಕಂಪ ಆಧಾರಿತ ನೌಕರಿ ಸಚಿವ ಸಂಪುಟಸಭೆಯಲ್ಲಿ ನಿರ್ಧಾರ ಮಹದೇವ ಮಾಳಗಿ ನಿವಾಸಕ್ಕೆ ಸಚಿವ ಎಸ್.ಸುರೇಶಕುಮಾರ್ ಭೇಟಿ, ಧಾರವಾಡ prajakiran.com : ಕಳೆದ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಶೇ.100 ರಷ್ಟು ಅಂಗವೈಕಲ್ಯದಿಂದ  ಹಾಸಿಗೆ ಹಿಡಿದಿರುವ ಕೆಇಎಸ್ ಅಧಿಕಾರಿ, ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕ ಮಹದೇವ ಬ.ಮಾಳಗಿ ಅವರ ನಿವಾಸಕ್ಕೆ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಗುರುವಾರ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ, ಇದೇ ವೇಳೆ ಅಧಿಕಾರಿಯ ಸ್ವಯಂ ನಿವೃತ್ತಿ ಆದೇಶವನ್ನು […]

ರಾಜ್ಯ

ಧಾರವಾಡದ ಕೆ ಇ ಎಸ್ ಅಧಿಕಾರಿಗೆ ಕೊನೆಗೂ ಸ್ವಯಂ ನಿವೃತ್ತಿಗೆ ಸಮ್ಮತಿ

ಮಹದೇವ ಮಾಳಗಿ ಕುಟುಂಬದ ದಯನೀಯ ಸ್ಥಿತಿಗೆ ಮರುಗಿದ ಶಿಕ್ಷಣ ಸಚಿವರು ಧಾರವಾಡ prajakiran.com : ಧಾರವಾಡದ ಕೆ ಇ ಎಸ್ ಅಧಿಕಾರಿ ಮಹಾದೇವ ಮಾಳಗಿ ಅವರಿಗೆ ಕೊನೆಗೂ ಸ್ವಯಂ ನಿವೃತ್ತಿ ಹೊಂದಲು ರಾಜ್ಯ ಸರಕಾರ ಸಮ್ಮತಿ ಸೂಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಸಂಪೂರ್ಣಅಸಹಾಯಕ ಸ್ಥಿತಿಯಲ್ಲಿದ್ದು, ಹಾಸಿಗೆ ಹಿಡಿದು ಆರು ವರ್ಷಗಳೇ ಕಳೆದರೂ ಮಾಳಗಿ ಅವರ ನೆರವಿಗೆ ಆಳುವ ಸರಕಾರಗಳು ಬಂದಿರಲಿಲ್ಲ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.  ಕೊನೆಗೂ ಶಿಕ್ಷಣ ಸಚಿವರ ಸೂಚನೆ ಮೇರೆಗೆ […]

ರಾಜ್ಯ

ಶಿಕ್ಷಕರ ವರ್ಗಾವಣೆ : ಸಚಿವರ ಪುತ್ರನ ಹೆಸರಿನಲ್ಲಿ ವಂಚನೆ….!

ಅಸಲಿಗೆ ಸಚಿವರಿಗೆ ಪುತ್ರನೇ ಇಲ್ಲ ಶಿಕ್ಷಕರ ಗೋಳು ಕೇಳಿ ಶಿಕ್ಷಣ ಸಚಿವರೇ ಕಳವಳ ಬೆಂಗಳೂರು prajakiran.com : ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್ ಮಾತ್ರ ಏಕೈಕ ದಾರಿ. ಆದರೂ ಕೆಲವು ಶಿಕ್ಷಕರು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದು, ಶಿಕ್ಷಕರನ್ನೇ ಯಾಮಾರಿಸಿದ್ದಾರೆ. ಈ ಬಗ್ಗೆ ಗೋಳು ತೋಡಿಕೊಂಡಿರುವ ಇಬ್ಬರು ಶಿಕ್ಷಕರು ಸಚಿವರ ಪುತ್ರನ ಹೆಸರಿನಲ್ಲಿ ವಂಚನೆಗೆ ಒಳಗಾಗಿರುವುದಾಗಿ ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಈಗಾಗಲೇ ವರ್ಷಗಳಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ವರ್ಗಾವಣೆಯೂ ಆಗದೆ ಕಂಗಲಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಹಾಗೂ […]

ಜಿಲ್ಲೆ

ನೈತಿಕ ಜವಾಬ್ದಾರಿ ಅರಿತು ಶಿಕ್ಷಕರು ಕೆಲಸ ನಿರ್ವಹಿಸಲಿ

೧೩೨ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಬಡ್ತಿ  ಧಾರವಾಡ orajakiran.com : ಶಾಲೆಯ ಮುಖ್ಯಾಧ್ಯಾಪಕರು ನಿರಂತರ ಕ್ರಿಯಾಶೀಲ ನೆಲೆಯಲ್ಲಿ ತಮ್ಮ ನೈತಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು. ಅವರು ಗುರುವಾರ ಬೆಳಗಾವಿ ವಿಭಾಗ ಮಟ್ಟದ ಕೌನ್ಸೆಲಿಂಗ್‌ದಲ್ಲಿ ಸರಕಾರಿ ಪ್ರೌಢ ಶಾಲಾ ಗ್ರೇಡ್-೨ ಸಹ ಶಿಕ್ಷಕ ವೃಂದದಿಂದ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗ್ರುಪ್-ಬಿ ವೃಂದಕ್ಕೆ ಬಡ್ತಿ   ಪಡೆದ ಶಿಕ್ಷಕ-ಶಿಕ್ಷಕಿಯರಿಗೆ […]

ರಾಜ್ಯ

ಬೆಳಗಾವಿ ವಿಭಾಗದ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಬಡ್ತಿ

ಧಾರವಾಡ prajakiran.com : ಬೆಳಗಾವಿ ವಿಭಾಗ ವ್ಯಾಪ್ತಿಯ ೯ ಜಿಲ್ಲೆಗಳಲ್ಲಿರುವ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-೨ ವೃಂದದ ೧೩೨ ಶಿಕ್ಷಕರಿಗೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಗ್ರುಪ್-ಬಿ ವೃಂದದ ಹುದ್ದೆಗೆ ಬಡ್ತಿ ನೀಡಲು ಇಲಾಖೆ ನಿರ್ಧರಿಸಿದೆ. ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಯಿತು. ಕೌನ್ಸೆಲಿಂಗ್ : ಸೇವಾಜೇಷ್ಠತೆಯನ್ನು ಆಧರಿಸಿ ಸರಕಾರಿ ಪ್ರೌಢ ಶಾಲಾ […]