- ಅಮೃತ ಬಳ‍್ಳಿ 18 ಗ್ರಾಂ ಅಜವಾನ 6 ಗ್ರಾಂ, ಸಣ್ಣ ಹಿಪ್ಪಲಿ 6 ಗ್ರಾಂ, ಬೇವಿನ ಚಿಗರು 7 ಇವುಗಳನ್ನು ಜಜ್ಜಿ ರಾತ್ರಿ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಅದರಲ್ಲಿ 200 ಎಂ.ಎಲ್ ನೀರು ಹಾಕಿ ಮುಚ್ಚಿಟ್ಟಿದ್ದು ಬೆಳಗ್ಗೆ ಅದನ್ನು ನುಣ್ಣಗೆ ಅರೆದು ಅದೇ ನೀರಿನಲ್ಲಿ ಕದಡಿ, ಅದಕ್ಕೆ 15 ಎಂ.ಎಲ್. ಜೇನು ಸೇರಿಸಿ ಬರೆ ಹೊಟ್ಟೆಯಲ್ಲಿ ನಿತ್ಯ ಬೆಳಗ್ಗೆ 20 ರಿಂದ 40 ದಿನ ಕುಡಿಯುವುದರಿಂದ ಉದರಕ್ಕೆ ಸಂಬಂಧಪಟ್ಟ ಸಕಲ ವಿಧದ ಶುಲೆಗಳು ನಿವಾರಣೆಯಾಗುತ್ತದೆ.
- 25 ಗ್ರಾಂ ಬೀಜ ತೆಗೆದ ಖರ್ಜೂರವನ್ನು 60 ಮಿ.ಲೀ. ಗಾತ್ರ ತುಂಬೆ ಸೊಪ್ಪಿನ ರಸದಲ್ಲಿ ಅರೆದು ನಿತ್ಯ ಬೆಳಗ್ಗೆ ರಾತ್ರಿ ಎರಡರಿಂದ ಮೂರು ವಾರ ಸೇವಿಸುವುದರಿಂದ ಉದರ ಶೂಲೆಯು ನಿವಾರಣೆಯಾಗುತ್ತದೆ.
- 36 ಗ್ರಾಂ ಮುತ್ತುಗದ ತೊಗಟೆಯನ್ನು ಕುಟ್ಟಿ ಒಂದು ಲೀಟರ್ ನೀರಿನಲ್ಲಿ ಹಾಕಿ ಕಷಾಯಕ್ಕಿಟ್ಟು ಬತ್ತಿಸಿ 125 ಎಂ.ಎಲ್ ಇಳಿಸಿ ಸೊಸಿ ಇದರಲ್ಲಿ 72 ಗ್ರಾಂ ತೆಂಗಿನ ಹಾಲು ಸೇರಿಸಿ ಒಂದು ವಾರ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಉದರ ಶೂಲೆಯ ನಿವಾರಣೆಯಾಗುವುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು