ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ ನಂ. 1ರ ಪಕ್ಷೇತರ ಅಭ್ಯರ್ಥಿ ಜಯಶ್ರೀ ಪವಾರಗೆ ಮನೆ ಮನೆಯಲ್ಲಿ ಉಡಿ ತುಂಬಿ ಹಾರೈಸುತ್ತಿರುವ ಜನತೆ….!

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಅಖಾಡ ರಂಗೇರಿದೆ.

ಮತದಾರ ಗಮನ ಸೆಳೆಯಲು ಅಭ್ಯರ್ಥಿಗಳು ಹಲವು ಕಸರತ್ತು ನಡೆಸುವುದು ಸರ್ವೆ ಸಾಮಾನ್ಯ.

ಆದರೆ ವಾರ್ಡ್ ನಂಬರ 1 ರಲ್ಲಿ ಚಿತ್ರಣವೇ ಬೇರೆ ಇದೆ. ಇಲ್ಲಿ ಸ್ಪರ್ಧೆ ಮಾಡಿರುವ
ಪಕ್ಷೇತರ ಅಭ್ಯರ್ಥಿ ಜಯಶ್ರೀ ಪವಾರ ನಾಯ್ಕವಾಡ ಅವರಿಗೆ ಮತದಾರರೇ ಉಡಿ ತುಂಬಿ ಹರಿಸಿ ಹಾರೈಸುತ್ತಿದ್ದಾರೆ.

ಅಲ್ಲದೆ, ಅವರೆ ಇವರಿಗೆ ತಮ್ಮ ಕೈಲಾದಷ್ಟು ಧನ‌ಸಹಾಯ ಮಾಡಿ ಶುಭ ಕೋರುತ್ತಿರುವುದು ವಿಶೇಷವಾಗಿದೆ.

ಈ ಬಗ್ಗೆ ಪ್ರಜಾಕಿರಣ.ಕಾಮ್ ಜೊತೆಗೆ ಮಾತನಾಡಿದ ವಾರ್ಡ್ ನ ಗುರುಹಿರಿಯರು ಜಯಶ್ರೀ ಪವಾರ ನಮ್ಮ ಮನೆ ಮಗಳು.

ಅವಳು‌ ಪೊಲೀಸರ ಮಗಳು.‌ಸ್ಥಳೀಯ ಸಮಸ್ಯೆಗಳ ಅರಿವುದರಿಂದ ಅವರ ಆಯ್ಕೆಗೆ ಒಲುವು ತೋರಿಸಿದ್ದೇವೆ.

ಈಗಾಗಲೇ ಬಡಾವಣೆಯಲ್ಲಿ ಬಸವರಾಜ ಕೊರವರ ಅವರ ಸಾಕಷ್ಟು ಹೋರಾಟದ ಫಲವಾಗಿ ಅನೇಕ ಕೆಲಸ ಕಾರ್ಯಗಳು. ಪಕ್ಷೇತರ ಅಭ್ಯರ್ಥಿ ಆರಿಸಿಬಂದರೆ ನಮ್ಮ ವಾರ್ಡ್ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಯಶ್ರೀ ಪವಾರ ನಾಯ್ಕವಾಡ ಅವರು ಜನರ ಪ್ರೀತಿ ವಿಶ್ವಾಸ ಕಂಡು ಖುಷಿಯಾಗಿದೆ.

ಹೊದಲೆಲ್ಲಾ ಉಡಿ ತುಂಬಿ ಹರಿಸಿ ಹಾರೈಸುತ್ತಿರುವುದು ನನ್ನ ಜವಬ್ದಾರಿ ಹೆಚ್ಚಿಸಿದೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.

ಸುಮಾ ಬಸವರಾಜ ಕೊರವರ ಮಾತನಾಡಿ, ಜನರು ಪ್ರತಿ ಬಾರಿ ನಮ್ಮ ಮೇಲೆ ಭರವಸೆ ಇಟ್ಟಿರುವುದಕ್ಕೆ ನಾವು ಋಣಿಯಾಗಿದ್ದೇವೆ‌.

ಈ ಸಲ ಪಕ್ಷೇತರ ಅಭ್ಯರ್ಥಿ ಜಯಶ್ರೀ ಪವಾರ ಅವರ ಪರ ಜನತೆ ಒಲುವು ಹೊಂದಿರುವುದು ನಮಗೆ ಸಂತಸದ ಸಂಗತಿಯಾಗಿದೆ.

ಪೊಲೀಸ್ ಕುಟುಂಬದ ಸದಸ್ಯೆ ಆಗಿರುವ ಜಯಶ್ರೀ ಪವಾರ ಗೆಲುವು ಬಡಾವಣೆಯ ಗೆಲುವು ಆಗಲಿದೆ ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *