ರಾಜ್ಯ

ಮಹಾಮಾರಿ ಕರೊನಾ ಹಿನ್ನೆಲೆ : ಸರಳ ವಿವಾಹ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ ಪತ್ರಕರ್ತ  

ಧಾರವಾಡ prajakiran.com :  ಮಹಾಮಾರಿ ಕರೊನಾ ಹಿನ್ನೆಲೆಯಲ್ಲಿ ಯುವ ಪತ್ರಕರ್ತ  ರವಿ ಗೋಸಾವಿ ಹಾಗೂ ಶಿವಲೀಲಾ ಜವಳಿ ಭಾನುವಾರ ಸರಳ ವಿವಾಹ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದರು.

ಧಾರವಾಡ ಜಿಲ್ಲೆಯ ಕೊಟಬಾಗಿಯ ಸ್ವಗೃಹದಲ್ಲಿ ತಂದೆ ತಾಯಿ ಹಾಗೂ ಕೆಲವೇ ಕೆಲವು ಕುಟುಂಬಸ್ಥರ  ಸಮ್ಮುಖದಲ್ಲಿ ಸತಿಪತಿಗಳಾದರು.

ಈ ಮದುವೆಯ ಇನ್ನೊಂದು ವಿಶೇಷವೆಂದರೆ ಮೊದಲು ಇಬ್ಬರು ಪರಸ್ಪರ ಕೈಗೆ ಸ್ಯಾನಿಟೇಶರ್ ಹಚ್ಚಿಕೊಂಡ ಬಳಿಕಅಕ್ಷತೆ ಹಾಕಿಕೊಂಡರು. ಜೊತೆಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಮದುವೆಯಾದರು.

ಇಬ್ಬರು ಪತ್ರಿಕೋದ್ಯಮದಲ್ಲಿ ಪದವಿಧರರಾಗಿದ್ದು, ಪರಸ್ಪರ ಪ್ರೀತಿಸಿ, ಎರಡು ಕುಟುಂಬದವರ ಸಮ್ಮತಿ ಮೇರೆಗೆ  ಇಂದು ಹೊಸಬಾಳಿಗೆ ಮುನ್ನುಡಿ ಬರೆದರು.

ಶಿವಲೀಲಾ ಜವಳಿ ಕೂಡ ಪತ್ರಕರ್ತೆಯಾಗಿದ್ದು, ಈ ಹಿಂದೆ ಸಂಜೆವಾಣಿಯಲ್ಲಿ ಕಾರ್ಯನಿರ್ವಹಿಸಿದ್ದರು.

ರವಿ ಗೋಸಾವಿ ಪ್ರಸ್ತುತ ವಿಜಯವಾಣಿ ಪತ್ರಿಕೆಯ ಬೆಳಗಾವಿ ಜಿಲ್ಲೆ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಕೂಡ ಸಂಜೆವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 

ಈ ಮದುವೆಗೆ ಪತ್ರಕರ್ತರಾದ ರಾಯಣ್ಣ ಆರ್. ಸಿ., ಅರುಣ ಯಳ್ಳೂರಕರ್, ರಾಮಚಂದ್ರ ಕುಲಕರ್ಣಿ ಸಾಕ್ಷಿಯಾದರು.

ಎಲ್ಲಡೆ ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿ, ಅಡಂಬರದ ಮದುವೆಗೆ ತಿಲಾಂಜಲಿ ಹೇಳಿ ಸರಳ ವಿವಾಹವಾಗುವ ಮೂಲಕ ಯುವ ಪತ್ರಕರ್ತ ರವಿ ಗೋಸಾವಿ ಹಾಗೂ ಶಿವಲೀಲಾ ಜವಳಿ ಇತರರಿಗೆ ಮಾದರಿಯಾಗಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *