ಅಂತಾರಾಷ್ಟ್ರೀಯ

ವಿಜಯಪುರ ಜಿಲ್ಲೆಯ ಹವಾಲ್ದಾರ್ ಕಾಶಿರಾಯ ಬಮ್ಮನಳ್ಳಿಗೆ ಮರಣೋತ್ತರ ಶೋರ್ಯಚಕ್ರ

ಕನ್ನಡಿಗರಿಗೆ ಹೆಮ್ಮೆಯ ಕ್ಷಣ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು prajakiran.com ಮೇ 11- ಕಳೆದ ಜುಲೈನಲ್ಲಿ ಪಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ವಿಜಯಪುರ ಜಿಲ್ಲೆಯ ಕಾಶಿರಾಯ ಬಮ್ಮನಳ್ಳಿ ಅವರಿಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ರಾಷ್ಟ್ರಪತಿ ಭವನ ದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಕಾಶಿರಾಯ ಬಮ್ಮನಹಳ್ಳಿ ಪತ್ನಿ ಸಂಗೀತಾ ಹಾಗೂ ತಾಯಿ ಶಂಕರಿಬಾಯಿ ಅವರು ಈ ಶೌರ್ಯ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪುಲ್ವಾವ್ ದಲ್ಲಿ ಆತಂಕವಾದಿಗಳ ವಿರುದ್ಧ  ನಡೆದ ಮಧ್ಯರಾತ್ರಿ ಕಾರ್ಯಾಚರಣೆ ವೇಳೆ ಕಾಶಿರಾಯ ವೀರ ಮರಣವನ್ನಪ್ಪಿದ್ದರು.

ಕನ್ನಡಿಗ ಕಾಶಿರಾಯ ಬಮ್ಮನಹಳ್ಳಿ ಅವರಿಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ ದೊರೆಯುತಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ

ಕನ್ನಡಿಗ ಯೋಧನೊಬ್ಬ ಪಡೆದಿರುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಬಮ್ಮನಳ್ಳಿ ಅವರ ಶೌರ್ಯ, ಸಾಹಸ, ಬಲಿದಾನ ಗಳಿಗೆ ಸಂದ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಬಮ್ಮನಳ್ಳಿ ಅವರ ಕುಟುಂಬಕ್ಕೆ ಸರ್ಕಾರ ನಿಯಮಾನುಸಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *