ರಾಜ್ಯ

ಹಿರಿಯ ಮಹಿಳಾ ಸಾಹಿತಿ ಶಾಂತಾದೇವಿ ಕಣವಿ ಇನ್ನಿಲ್ಲ

ಬೆಳಗಾವಿ/ ಧಾರವಾಡ prajakiran.com : ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರ ಧರ್ಮಪತ್ನಿಯಾಗಿದ್ದ ಹಿರಿಯ ಮಹಿಳಾ ಸಾಹಿತಿ ಶಾಂತಾದೇವಿ ಕಣವಿ ಅವರು ಶುಕ್ರವಾರ ಸಂಜೆ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲಿ ವಿಧಿವಶರಾದರು.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಕಳೆದ ಹದಿನೈದು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಇಹಲೋಕ ತ್ಯಜಿಸಿದರು.  ಶನಿವಾರ ಬೆಳಗ್ಗೆ ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಚೆಂಬೆಳಕಿನ ನಿವಾಸಕ್ಕೆ ಪ್ರಾರ್ಥಿವ ಶರೀರ ತೆಗೆದುಕೊಂಡು ಬರಲಾಗುವುದು.

ಅವರ ಅಂತ್ಯಕ್ರಿಯೆಯನ್ನು ಧಾರವಾಡದ ಕೆಲಗೇರಿಯಲ್ಲಿರುವ ಸೃಷ್ಟಿ ಫಾರ್ಮ ಹೌಸ್ ನಲ್ಲಿ ಶನಿವಾರ ಮಧ್ಯಾಹ್ನ ನೆರವೇರಿಸಲಾಗುವುದು ಎಂದು ಅವರ ಕುಟುಂಬ ಸದಸ್ಯರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

ಶಾಂತಾದೇವಿ ಕಣವಿ ಅವರು ತಮ್ಮ ಉತ್ತರಕರ್ನಾಟಕ ಸೊಗಡಿನ ಕಥೆ, ಕಾದಂಬರಿ, ಲೇಖನಗಳ ಮೂಲಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.

ಸ್ವತಃ ಕವಿಯತ್ರಿಯಾಗಿದ್ದ ಶಾಂತಾದೇವಿ ಕಣವಿಯವರು ನಾಡೋಜ ಚನ್ನವೀರ ಕಣವಿ ಅವರ ಸಾಹಿತ್ಯ ರಚನೆಗೆ ಸದಾ ಕಾಲ ಬೆನ್ನುಲುಬು ಆಗಿದ್ದರು.

ಇವರಿಗೆ ಐದು ಜನ ಮಕ್ಕಳಿದ್ದು, ಶಿವಾನಂದ ಕಣವಿ, ಚಂದ್ರಮೌಳಿ ಕಣವಿ, ಪ್ರಿಯದರ್ಶಿ ಕಣವಿ, ಕರುಣಪ್ರಸಾದ ಕಣವಿ ಹಾಗೂ ಮಗಳು ಡಾ. ರಂಜನಾ ಗೋಧಿ ಸೇರಿ ಅಪಾರ ಬಂಧು ಬಳಗ ಇದ್ದಾರೆ.

ಅವರ ಅಗಲಿಕೆ ಮಹಿಳಾ ಸಾಹಿತ್ಯ ಲೋಕಕ್ಕೆಅಷ್ಟೇ ಅಲ್ಲದೆ ಕನ್ನಡದ ಸ್ವಾರಸ್ವತ ಲೋಕಕ್ಕೂ ಕೂಡ ತುಂಬಲಾರದ ನಷ್ಟವಾಗಿದೆ ಎಂದು ಅನೇಕ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *