ಅಂತಾರಾಷ್ಟ್ರೀಯ

ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರು

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಂಡದಿಂದ ವಿಶಿಷ್ಟ ನಮನ

ಧಾರವಾಡ prajakiran.com : ಸ್ವಾಮಿ ವಿವೇಕಾನಂದರ 159ನೇ ಜಯಂತಿ ಹಿನ್ನೆಲೆಯಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಂಡದಿಂದ ವಿಶಿಷ್ಟ ನಮನ ಸಲ್ಲಿಸಲಾಯಿತು.

ಧಾರವಾಡದ ದೊಡ್ಡನಾಯಕೊಪ್ಪದಲ್ಲಿ ಮರಳು ಕಲಾಕೃತಿ ಮಾಡಿ ಯುವಕರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಸಾಮೂಹಿಕ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿ ಗೌರವ ಸೂಚಿಸಿ ವಿವೇಕಾನಂದರ ತತ್ವ ಆದರ್ಶಗಳನ್ನು ಮನನ ಮಾಡಿದರು.

ಕಲಾವಿದ ಮಂಜುನಾಥ ಹಿರೇಮಠ ಅವರಿಂದ ಮರಳು ಕಲಾಕೃತಿ ರಚನೆ ಮಾಡಲಾಯಿತು.

ಎರಡು ಟ್ರ್ಯಾಕ್ಟರ್ ಮರಳಿನಲ್ಲಿ ಆರು ಅಡಿ ಎತ್ತರದ ಕಲಾಕೃತಿ ಮನ ಸೆಳೆಯಿತು.
ಕಲಾವಿದ ಮಂಜುನಾಥ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಿದರು

ಆನಂತರ ಪೊಲೀಸ್ ಮಕ್ಕಳ ವಸತಿ ಶಾಲೆಯ 11 ಮಕ್ಕಳು ಅಂತರ್ ರಾಷ್ಟ್ರೀಯ ಜಂಪ್ ರೋಮದಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸುಮಾ ಕೋರವರ, ಜಯಶ್ರೀ ನಾಯಕವಾಡ, ನಾಗಮ್ಮ ಹರ್ಕುಣಿ, ವಿಮಲಾ ಹೆಗಡೆ, ಸುಮಿತ್ರಾ ಪಾಟೀಲ್, ಸುಧಾ ಕರೆನ್ನವರ್, ಮಂಜುಳಾ ಹಿರೇಮಠ, ಶೋಭಾ ಭೂಮರೆಡ್ಡಿ, ಕವಿತಾ ದೇವನಗೌಡರ, ಸಂಗೀತ ಜಾಧವ್, ನಿರ್ಮಲಾ ಸಲೋಡಿ, ವಿಭಾ ಪುಡಕಲಕಟ್ಟಿ, ಚೈತ್ರ ಗಾಳಿ, ನಾಗರಾಜ್ ಕಿರಣಗಿ, ರಾಘು ಶೆಟ್ಟಿ, ಕುಮಾರ್ ಅಗಸಿಮನಿ,
ಆನಂದ್ ಪಾಟೀಲ್, ಸುರೇಶ್ ಪವಾರ, ಬಸವರಾಜ ಶೀಲವಂತರ, ಈರಣ್ಣ ಹೂಗಾರ್, ಮಲ್ಲೇಶ್, ಪ್ರಮೋದ ಹರ್ಕುಣಿ,ನವೀನ್ ಪ್ಯಾಟಿ,ಅಕ್ಷಯ ಹರ್ಕುಣಿ, ಉಝೆಫ್ ಬೆಣ್ಣಿ, ಚಂದ್ರು, ಬಸು ಧಾರವಾಡ, ಶಶಿ ಮುಂದಿನಮನಿ, ಹರೀಶ್ ಕಮತಿ ಹಾಗೂ ಜನ ಜಾಗೃತಿ ಸಂಘದ ಸರ್ವಾ ಸದಸ್ಯರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *