ರಾಜ್ಯ

ಕಲ್ಲಿದ್ದಲು ಗಣಿಗಾರಿಕೆ ಖಾಸಗೀಕರಣದಿಂದ ಹಗಲು ದರೋಡೆ ಎಂದ ಎಸ್ ಆರ್ ಹಿರೇಮಠ

ಧಾರವಾಡ prajakiran.com : ಕಲ್ಲಿದ್ದಲು ಗಣಿಗಾರಿಕೆ ಖಾಸಗೀಕರಣ ಮಾಡಿದರೆ ಹಗಲು ದರೋಡೆ ಮಾಡಲು ಅನುಕೂಲವಾಗುತ್ತದೆ  ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಬಗ್ಗೆ ಹುಬ್ಬಳ್ಳಿಯವರೇ ಆಗಿರುವ ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಪ್ರಹ್ಲಾದ ಜೋಶಿ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ರಾಷ್ಟ್ರದಾದ್ಯಂತ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಗುಡುಗಿದರು.

ಈ ಹಿಂದೆ ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರು ಗಣಿಗಾರಿಕೆಯಲ್ಲಿ ಹಗಲ ದರೋಡೆ ಮಾಡಿದಂತೆ ದೇಶದಲ್ಲೂ ಗಣಿಗಾರಿಕೆಗಳು ಖಾಸಗೀಕರಣವಾದರೆ ಹಗಲು ದರೋಡೆಯಾಗುವುದಂತೂ ಸತ್ಯ ಎಂದು ಕಿಡಿಕಾರಿದರು.

ಇದರಿಂದ ದೇಶದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣಗೊಳಿಸುವುದನ್ನು ಕೈಬಿಡಬೇಕು ಎಂದು ಹಿರೇಮಠ ಒತ್ತಾಯಿಸಿದರು.

ಉಳಿದವರಂತೆಯೇ ಪ್ರಧಾನಿ ಮೋದಿ ಅವರು ನಡೆಯುತ್ತಿದ್ದಾರೆ. ದೇಶದ ಕಲ್ಲಿದ್ದಲು ಸಂಪತ್ತು ಇವರಿಂದಾದರೂ ಉಳಿಯುತ್ತದೆ ಎಂದು ನಾವು ನಂಬಿದ್ದೆವು. ಆದರೆ, ಅವರೇ ಈಗ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಈ ಸಂಬಂಧ ನಾವು ರಾಷ್ಟ್ರದಾದ್ಯಂತ ಜನಾಂದೋಲನ ರೂಪಿಸುತ್ತೇವೆ ಎಂದರು.

ಕಾರ್ಮಿಕರು ಹಕ್ಕುಗಳ ಹಾಗೂ ವಲಸೆ ಕಾರ್ಮಿಕರ ವಿರುದ್ಧ ಕೇಂದ್ರ ಸರ್ಕಾರ ಇತ್ತೀಚೆಗೆ ಅವರ ಹಕ್ಕುಗಳ ವಿರುದ್ಧ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ.

ಕಾರ್ಮಿಕರ ಹಕ್ಕುಗಳನ್ನು ಕ್ಷಿಣಿಸುವ ನಿರ್ಣಯ ಹಿಂಪಡೆದು ಮೊದಲಿನ ಕಾಯ್ದೆಗಳು ಮುಂದುವರೆಯುವಂತೆ ಮಾಡಬೇಕು ಎಂದು ಎಸ್ ಆರ್ ಹಿರೇಮಠ ಆಗ್ರಹಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *