ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ನಟಿ ಮಾಲಾಶ್ರೀ ಪತಿ ರಾಮು ಕೊರೋನಾ ಸೋಂಕಿನಿಂದ ಇಂದು ನಿಧನರಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆ ರಾಮು ಅವರಿಗೆ ಕೊರೋನಾ ಸೊಂಕು ದೃಢಪಟ್ಟಿತ್ತು,
ಕೊರೋನಾ ಸೊಂಕಿನಿಂದ ಬಳುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ.
ತುಮಕೂರಿನ ಕುಣಿಗಲ್ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು
, ಕನ್ನಡದ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿ ಕೋಟಿ ನಿರ್ಮಾಪಕ ರಾಮು ಎಂದು ಹೆಸರು ಪಡೆದುಕೊಂಡಿದ್ದರು.