ನವದೆಹಲಿ prajakiran. com : ಹಿರಿಯ ಪತ್ರಕರ್ತ ರಾಜ್ ಕುಮಾರ್ ಕೇಶ್ವಾನಿ (72) ವಿಧಿವಶರಾಗಿದ್ದಾರೆ.
ಏ.8 ರಂದು ಕೇಶ್ವಾನಿ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು.
ಏ. 20 ರಂದು ಚೇತರಿಸಿಕೊಂಡಿದ್ದರು ಬಳಿಕ ಶ್ವಾಸಕೋಶದ ತೊಂದರೆಯಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು.
ಆದರೆ ನಿನ್ನೆ ಇತರೆ ಅನಾರೋಗ್ಯದ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಕೇಶ್ವಾನಿ ಅವರ ಪುತ್ರ ರೌನಾಕ್ ಹೇಳಿದ್ದಾರೆ.
ಕೇಶ್ವಾನಿ ನ್ಯೂಯಾರ್ಕ್ ಟೈಮ್ಸ್, ಎನ್ ಡಿಟಿವಿ, ದೈನಿಕ್ ಭಾಸ್ಕರ್, ದಿ ಇಲ್ಯುಸ್ಟ್ರೇಟೆಡ್ ವೀಕ್ಲೀ ಆಫ್ ಇಂಡಿಯಾ, ಸಂಡೇ, ಇಂಡಿಯಾ ಟುಡೇ ಮತ್ತು ದಿ ವೀಕ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.