ರಾಜ್ಯ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ರಾಜ್ಯದೆಲ್ಲಡೆ ಸೈಕಲ್ ಜಾಥಾ ನಡೆಸುತ್ತಿರುವ ಕಿರಣ್

ಧಾರವಾಡ prajakiran.com : ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಂದ ಮಹಿಳೆಯರನ್ನು ರಕ್ಷಿಸಲು ಮತ್ತು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ಮೂಲದ ಕಿರಣ್ ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುತ್ತಿದ್ದಾನೆ.

ಬೆಂಗಳೂರು ಮೂಲದ ಕಿರಣ್ ವಿ ಅವರು, ಕರ್ನಾಟಕದ 31 ಜಿಲ್ಲೆಗಳಿಗೆ ಸೈಕಲ್ ಮೂಲಕ ಸಂಚರಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಅಗಸ್ಟ 22 ರಿಂದ ಬೆಂಗಳೂರಿನಿಂದ ಶುರುವಾದ ಅವರ ಸೈಕಲ್ ಜಾಥಾ 3500 ಕಿಲೋಮೀಟರ್ ಸಂಚರಿಸುವ ಮೂಲಕ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗಳಿಗೆ ಭೇಟಿಯಾಗಿ ಅತ್ಯಾಚಾರ ಹಾಗೂ ಮಹಿಳೆಯರ ಮೇಲೆ ಮಹಿಳೆಯರನ್ನು ಕಿರುಕುಳದಿಂದ ರಕ್ಷಿಸುವಂತೆ ಹಾಗೂ ಅತ್ಯಾಚಾರ ಮಾಡಿದವರು ಯಾರೇ ಆಗಿದ್ದರೂ, ಕರುಣೆ ತೋರದೆ ಗಲ್ಲುಶಿಕ್ಷೆ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸುತ್ತಿದ್ದಾರೆ.

ಕಿರಣ್ ಈಗಾಗಲೇ 14 ಜಿಲ್ಲೆಗಳ ಪ್ರವಾಸ ಮುಗಿಸಿ ಇಂದು 15ನೇ ಜಿಲ್ಲೆ ಧಾರವಾಡಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇನ್ನೂ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುವಾಗ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಎಐಎಂಐಎಂ ಕಾರ್ಯಕರ್ತರು ಮತ್ತು ಧಾರವಾಡ ಜಿಲ್ಲಾ ಘಟಕ ಬೆಂಬಲ ಸೂಚಿಸಿ ಸಾಥ್ ನೀಡಿದರು.

ಇದೆ ವೇಳೆ ಕಿರಣ ಮಾತನಾಡಿ, ನಮ್ಮ ರಾಜ್ಯ ಮತ್ತು ದೇಶದಲ್ಲಿ ಯಥೇಚ್ಛವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೇ.

ಒಂದು ತಿಂಗಳ ಹಿಂದೆ ಮೈಸೂರಿನ ಗ್ಯಾಂಗ್ ರೇಪ್, ಚಿತ್ರದುರ್ಗ ಗ್ಯಾಂಗ್ ರೇಪ್ ಸಂಭವಿಸಿದ್ದು. ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ‌.

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಹಾಗೂ ಧಾರವಾಡದಲ್ಲಿ ಇಂಥ ಪ್ರಕರಣಗಳು ನಡೆಯದಂತೆ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *