ಧಾರವಾಡ prajakiran.com : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾನಗರಿ ಧಾರವಾಡ ಜಿಲ್ಲೆಯು ಶೇ. ೬೭.೩೧ ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ೧೭ ನೇ ಸ್ಥಾನಕ್ಕೆ ಕುಸಿದಿದೆ.
ಪರೀಕ್ಷೆಗೆ ಹಾಜರಾದ ಧಾರವಾಡ ಜಿಲ್ಲೆಯ ಒಟ್ಟು ೨೧, ೮೪೦ ವಿದ್ಯಾರ್ಥಿಗಳ ಪೈಕಿ ೧೪, ೭೦೧ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.
ಕಳೆದ ವರ್ಷ ಶೇ.೬೨.೧೯ ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ೨೩ ನೇ ಸ್ಥಾನಕ್ಕೆ ಇಳಿದಿತ್ತು. ಈ ಬಾರಿ ಫಲಿತಾಂಶದಲ್ಲಿಸ್ವಲ್ಪ ಸುಧಾರಣೆ ಕಂಡಿದ್ದು, ಸಮಾಧಾನಕರ ಸಂಗತಿಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕ ಚಿದಂಬರ ಕೆ. ಅವರು ತಿಳಿಸಿದ್ದಾರೆ.