ರಾಜ್ಯ

ನಿಯಮ ಪಾಲಿಸದ ಪಿಜಿ, ಕೋಚಿಂಗ್ ಸೆಂಟರ್, 24×7 ಗ್ರಂಥಾಲಯಗಳು ಸೀಜ್

ಧಾರವಾಡ prajakiran.com : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರು ಶಿಕ್ಷಿತರು ನಡೆಸುತ್ತಿರುವ ಪಿಜಿ ಕೇಂದ್ರಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್‍ಗಳಲ್ಲಿ ಮತ್ತು ದಿನದ 24 ಗಂಟೆ (24×7) ನಡೆಯುತ್ತಿರುವ ಗ್ರಂಥಾಲಯಗಳಲ್ಲಿ ರಾಜ್ಯಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿರುವ ಕೋವಿಡ್ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಕಂಡು ಬರುತ್ತಿದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಇಂತಹ ಕೇಂದ್ರಗಳ ಮೇಲೆ ಕಾರ್ಯಾಚರಣೆ ಮಾಡಿ ಮಾಸ್ಕ್ ಧರಿಸದೇ ಬರುವ ಮತ್ತು ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸದಿರುವ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸಬೇಕು.

ಮತ್ತು ಸಂಪೂರ್ಣವಾಗಿ ಆ ಕೇಂದ್ರದ ವಿಡಿಯೋ ಚಿತ್ರೀಕರಣ ಮತ್ತು ಫೋಟೋಗ್ರಾಫಿ ಮಾಡಬೇಕು. ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಸ್ಥಳದಲ್ಲಿಯೇ ಆರ್‍ಟಿಪಿಸಿಆರ್ ಮೂಲಕ ಕೋವಿಡ್ ಟೆಸ್ಟಿಂಗ್ ಮಾಡಬೇಕು ಎಂದು ಹೇಳಿದರು.

ಪಿಜಿ, ಕೋಚಿಂಗ್ ಸೆಂಟರ್, 24×7 ಗ್ರಂಥಾಲಯಗಳಲ್ಲಿ ಟೆಸ್ಟಿಂಗ್ ಮಾಡಿದಾಗ ಯಾವುದೇ ಕೇಂದ್ರದಲ್ಲಿ ಪಾಸಿಟಿವ್ ಕಂಡುಬಂದರೆ ಆ ಕೇಂದ್ರದ ಮಾಲೀಕ ಹಾಗೂ ಮುಖ್ಯಸ್ಥನನ್ನು ಜವಾಬ್ದಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು

ಮತ್ತು ತಕ್ಷಣ ಆ ಕೇಂದ್ರವನ್ನು ಸೀಜ್ ಮಾಡಿ ಅದನ್ನು ಕಂಟೈನ್‍ಮೆಂಟ್ ಝೋನ್ ಎಂದು ಆದೇಶಿಸಿ ಕಠಿಣ ಭದ್ರತಾ ಕ್ರಮಗಳನ್ನು ಪಾಲಿಕೆಯ ಅಧಿಕಾರಿಗಳು ಕೈಗೊಳ್ಳಬೇಕು.

ಮತ್ತು ಶೀಘ್ರದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿರುವ ಪಿಜಿ, ಕೋಚಿಂಗ್ ಸೆಂಟರ್, 24×7 ಗ್ರಂಥಾಲಯಗಳ ಮುಖ್ಯಸ್ಥರ ಸಭೆ ಜರುಗಿಸಿ ಈ ಕುರಿತು ಸಂಪೂರ್ಣ ಮಾಹಿತಿ ನೀಡಿ, ಪಾಲಿಕೆ ಅಧಿಕಾರಿಗಳು ಕೇಂದ್ರಗಳ ಮೇಲೆ ಅನಿರೀಕ್ಷಿತವಾದ ವಿಶೇಷ ಕಾರ್ಯಾಚರಣೆ (ಸ್ಪೆಷಲ್ ಡ್ರೈವ್) ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಹೆದ್ದಾರಿ ಪಕ್ಕದ ಮಾವು ಮಾರಾಟ ಕೇಂದ್ರಗಳ ಮೇಲೆ ನಿಗಾವಹಿಸಿ :

ಜಿಲ್ಲೆಯಲ್ಲಿ ಮಾವು ಮಾರಾಟ ಆರಂಭವಾಗುತ್ತಿದ್ದು, ವಿಶೇಷವಾಗಿ ಹೊರ ರಾಜ್ಯಗಳಿಂದ ಆಗಮಿಸುವ ಏಜೆಂಟರು, ದಲಾಲರು ಮತ್ತು ವ್ಯಾಪಾರಿಗಳಿಗೆ ಸ್ಥಳದಲ್ಲಿಯೇ ಆರ್‍ಟಿಪಿಸಿಆರ್ ಟೆಸ್ಟಿಂಗ್ ಮಾಡಬೇಕು.

ಮತ್ತು ಜಿಲ್ಲೆಗೆ ಆಗಮಿಸುವ ಪೂರ್ವದಲ್ಲಿಯೇ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯವಾಗಿ ತಿಳಿಸಬೇಕು.

ಒಂದುವೇಳೆ ಅವರು ನೆಗೆಟಿವ್ ವರದಿ ಹೊಂದಿರದಿದ್ದಲ್ಲಿ ತಕ್ಷಣ ಅವರ ರಾಜ್ಯಕ್ಕೆ ಮರಳಿ ಕಳುಹಿಸಬೇಕು ಅಥವಾ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್ ಮಾಡಬೇಕು ಎಂದರು.

ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ನರೇಂದ್ರ, ಯರಿಕೊಪ್ಪ, ಬೈಪಾಸ್ ರಸ್ತೆ, ಟೋಲ್‍ಗೇಟ್ ಹತ್ತಿರ ಹಾಗೂ ನವಲೂರ ಬಳಿ ಮಾವು ಮಾರಾಟದ ಕೇಂದ್ರಗಳನ್ನು ತಾತ್ಕಾಲಿಕವಾಗಿ ರೈತರು ಹಾಗೂ ವ್ಯಾಪಾರಿಗಳು ಆರಂಭಿಸಿರುತ್ತಾರೆ.

ಇಲ್ಲಿಗೆ ಹೊರರಾಜ್ಯ ವಿಶೇಷವಾಗಿ ಮಹಾರಾಷ್ಟ್ರದಿಂದ ಹೆಚ್ಚು ಜನ ಮಾವು ಖರೀದಿಗಾಗಿ ಬರುವುದರಿಂದ ಆರೋಗ್ಯ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕೆಂದು ಅವರು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *