ರಾಜ್ಯ

ಧಾರವಾಡ ವಿಧಾನ ಸಭಾ ಕ್ಷೇತ್ರ 71ರ 93 ಸರಕಾರಿ ಶಾಲೆಯ 20 ಸಾವಿರ ಸರಕಾರಿ ಶಾಲೆ ಮಕ್ಕಳಿಗೆ ಒಂದೂವರೆ ಲಕ್ಷಕ್ಕೂ ಅಧಿಕ ನೋಟ್ ಬುಕ್ ವಿತರಣೆ ಗುರಿ : ಬಸವರಾಜ ಕೊರವರ

ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ ವತಿಯಿಂದ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ
ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ : ಬಸವರಾಜ ಕೊರವರ
ಧಾರವಾಡ prajakiran.com : ಧಾರವಾಡ ವಿಧಾನ ಸಭಾ ಕ್ಷೇತ್ರ ೭೧ರ ವ್ಯಾಪ್ತಿಯ ೯೩  ಸರಕಾರಿ ಶಾಲೆಯ ೨೦ ಸಾವಿರ ಮಕ್ಕಳಿಗೆ ಹಾಗೂ ಧಾರವಾಡದ ಒಂಬತ್ತು ವಾರ್ಡುಗಳ ಹತ್ತಾರು ಸರಕಾರಿ ಶಾಲೆಯ ಸಾವಿರಾರು ಮಕ್ಕಳಿಗೆ ಮುಂದಿನ ಒಂದೂವರೆ ತಿಂಗಳಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ನೋಟ್ ಬುಕ್ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು  ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ತಿಳಿಸಿದರು.
ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ  ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಅಂದ್ರೆ ಕೇವಲ ಶಾಲಾ ಪಠ್ಯ ಪುಸ್ತಕಗಳನ್ನು ಓದಿ ಅಕ್ಷರ ತಿಳಿದುಕೊಳ್ಳುವುದು ಅಷ್ಟೇ ಅಲ್ಲ ಬದುಕು ರೂಪಿಸಿಕೊಂಡು ಪ್ರತಿಯೊಬ್ವರಿಗೆ ನಮ್ಮಿಂದ ಕೈಲಾದ ಸಹಾಯ, ಸಹಕಾರ, ಗೌರವ, ಪ್ರೀತಿ, ವಿಶ್ವಾಸ ಕೊಡುವುದಾಗಿದೆ ಎಂದರು.
ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಅದು ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳಲ್ಲಿ ಸಿಗಲಿದೆ. ಇಂದು ಸಮಾಜದ ಉನ್ನತ ಹುದ್ದೆಯಲ್ಲಿ ಇರುವ ಬಹುತೇಕರು   ಸರಕಾರಿ ಶಾಲೆಯಲ್ಲಿ ಓದಿದವರು ಎಂದರು.
ರಾಜ್ಯದಲ್ಲಿರುವ ೪೫ ಸಾವಿರ ಸರಕಾರಿ ಶಾಲೆಗಳು ಸದೃಢವಾಗಬೇಕಾಗಿವೆ. ಅವುಗಳ ಬಲವರ್ಧನೆಗೆ ಸರ್ಕಾರ ಅಗತ್ಯ ಹಾಗೂ ಬಲವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉಚಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ಸಿಗಬೇಕಾಗಿದೆ.
ಆದರೆ ಇಂದು ಎರಡು ಕ್ಷೇತ್ರಗಳು ವ್ಯಾಪಾರೀಕರಣ ಆಗಿಬಿಟ್ಟಿದೆ. ಹೀಗಾಗಿ ನಾವು ಸಂವಿಧಾನದ ಆಶಯ ರಕ್ಷಣೆ ಮಾಡಬೇಕಿದೆ.
ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಇದಾಗಿದ್ದು, ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದ್ದು, ಅವರ  ಸಮಸ್ಯೆಯನ್ನು ಆಲಿಸಿ ಪರಿಹರಿಸಲು ಪ್ರಯತ್ನ ಮಾಡುವುದಕ್ಕಾಗಿ ಸರಕಾರಿ ಶಾಲೆ ಉಳಿಸಿ ಬೆಳಸಲು ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟದ ಭಾಗವಾಗಿ ಇಲ್ಲಿಗೆ ಬಂದಿದ್ದೇವೆ ಎಂದರು.
ಅತ್ಯುತ್ತಮ ಶಿಕ್ಷಕರು ಸರಕಾರಿ ಶಾಲೆಯಲ್ಲಿಯೇ ಸಿಗುತ್ತಾರೆ. ಒಳ್ಳೆಯ ಶಿಕ್ಷಣ ಪಡೆಯುವ ಜೊತೆಗೆ ಊರಿಗೆ ಒಬ್ಬ ವ್ಯಕ್ತಿ, ಶಕ್ತಿಯಾಗಿ ಬೆಳೆಯಬೇಕು. ಗುರಿ ತಲುಪಲು ನಿರಂತರ ಪ್ರಯತ್ನ ಮಾಡಬೇಕು. ಗುರಿ ಇಲ್ಲದೆ ಏನೂ ಸಾಧಿಸಲು ಆಗಲ್ಲ ಎಂದರು.
ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠದ ಸಂಗಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ, ಜೀವನ ನಡೆಸಲಿಕ್ಕೆ ಶಿಕ್ಷಣ ಬೇಕು.
ಶಿಕ್ಷಣವಿಲ್ಲದ ಬದುಕು ಬರಡು. ಇವತ್ತಿನ ದಿನಮಾನಗಳಲ್ಲಿ ಎಲ್ಲಡೆ ಸ್ಪರ್ಧೆ ಇದೆ. ಸಂಸ್ಕಾರ ಇದ್ದರೆ ಮಾತ್ರ ಮಕ್ಕಳಿಗೆ ಶಿಕ್ಷಣ ಹತ್ತುತ್ತದೆ ಎಂದು ಹೇಳಿದರು.
ಎಷ್ಟು ಕೋಟಿ ಸಂಪಾದನೆ ಇದ್ದರೆ ಎನೂ ಪ್ರಯೋಜನ. ನಮ್ಮ ಒಳ್ಳೆಯ ಕೆಲಸ ಕಾರ್ಯದಿಂದ ಸಮಾಜದಲ್ಲಿ ಸದಾಕಾಲ ಬದುಕಬೇಕು.
ಈ ನಿಟ್ಟಿನಲ್ಲಿ ಬಸವರಾಜ ಕೊರವರ ಅವರ ಕೊಡುಗೆ ಸಮಾಜಕ್ಕೆ ಬಹಳಷ್ಟಿದೆ. ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಬಹಳ ಅಗತ್ಯವಿದೆ. ಏಕೆಂದರೆ ಕೆಟ್ಟದ್ದು ಬಹಳ ಬೇಗ ಸ್ವೀಕಾರವಾಗಲಿದೆ.  
ಹಿರಿಯರಿಗೆ, ಪಾಲಕರಿಗೆ ಗೌರವ ಕೊಟ್ಟಷ್ಟು ಮಕ್ಕಳು ಯಶಸ್ವಿ ಸಾಧಿಸಲು ಸಾಧ್ಯ. ಅದಕ್ಕೆ ಆಧ್ಯಾತ್ಮಿಕ ಚಿಂತನೆ ಮಾಡೋಣ ಎಂದು ಹೇಳಿದರು.
ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ಕನವರ್ ಮಾತನಾಡಿ, ಮನಸ್ಸಿನ ಮಾತುಗಳು ಕಾರ್ಯ ರೂಪಕ್ಕೆ ಬರುವುದು ಬಹಳ ಅಪರೂಪ.
ಆದರೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರು ಧಾರವಾಡ ವಿಧಾನ ಸಭಾ ಕ್ಷೇತ್ರದ ೯೩ ಸರಕಾರಿ ಶಾಲೆಗಳ ೨೦ ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ನಮ್ಮ  ಮನಸ್ಸಿನ ಮಾತುಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದರು.
ಗ್ರಾಮೀಣ ಮಕ್ಕಳ ಕಷ್ಟದ ಓದು ನಮಗೆ ಗೊತ್ತಿರುವ ಸಂಗತಿ. ಇಂದಿನ ದಿನಗಳಲ್ಲಿ ಶಿಕ್ಷಣ ಬಹಳ ಮುಖ್ಯ.
ಧಾರವಾಡ ಗ್ರಾಮೀಣ ಮಕ್ಕಳು  ನವೋದಯ, ಮುರಾರ್ಜಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಹೆಚ್ಚಿನ ಪ್ರಮಾಣದಲ್ಲಿ ಪಾಸ್ ಆಗಿದ್ದಾರೆ.  ಈಗ ಸ್ಪರ್ಧೆಗೆ ಕಾಲಿಟ್ಟರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.
ಶಾಲೆ, ಮಠದಲ್ಲಿ ಯಾವುದೇ ಭೇದ ಭಾವ ಇರಲ್ಲ. ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ನಿರಂಜನ್, ಎಸ್ ಡಿಎಂಸಿ ಉಪಾಧ್ಯಕ್ಷ ಈಶ್ವರ್ ಗಾಣಿಗೇರ್, ಭಾರತ ಸೇವಾದಳ ತಾಲೂಕು ಅಧ್ಯಕ್ಷ ಮಂಜುನಾಥ ತಿರ್ಲಾಪುರ, ಗ್ರಾಮ ಪಂಚಾಯತಿ ಸದಸ್ಯರಾದ  ರಾಯನಗೌಡ ಪಾಟೀಲ್, ನಾಗರಾಜ್ ಹಟ್ಟಿಹೊಳಿ, ಸಿ ಆರ್ ಪಿ ಮಡಿವಾಳಪ್ಪ ಪರಕಾಳಿ, ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಬಳಗೇರಿ, ನಿವೃತ್ತ ಶಿಕ್ಷಕರಾದ ರೇವಣಸಿದ್ದಪ್ಪ, ಗುರಯ್ಯ ಓದುಸಮಠ, ಶಿಕ್ಷಕರಾದ ಕುಮಾರ್ ಭಜಂತ್ರಿ, ಜೆ.ಎಂ ಗಾಮನಗಟ್ಟಿ, ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ  ಸುಮಂಗಲಾ ಕೊರವರ, ಜಯಶ್ರೀ ನಾಯಕವಾಡಿ, ಕುಮಾರ್ ಅಗಸಿಮನಿ,  ಎಫ್ ಎಂ. ಮುಲ್ಲಾ, ಆನಂದ್ ಪಾಟೀಲ, ವಿನೋದ್ ಶಿಂಧೆ, ಬಸವರಾಜ್ ಧಾರವಾಡ, ರೋಹಿತ ಜಂಗನವಾರಿ, ನವೀನ್ ಪ್ಯಾಟಿ, ರಾಜಶೇಖರ್ ಕುರುಬರ, ಉಪಸ್ಥಿತರಿದ್ದರು.
ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ.ವೈ. ಬಡಿಗೇರ್ ಸ್ವಾಗತಿಸಿ ನಿರೂಪಣೆ ಮಾಡಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *