ಹುಬ್ಬಳ್ಳಿ prajakiran.com : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ.
ನಗರದ ಬಾಬಾಸಾನ್ ಗಲ್ಲಿಯಲ್ಲಿ ಹಾಡಹಗಲೇ ಚಾಕು ಇರಿದು ಕೊಲೆ ಮಾಡಲಾಗಿದೆ.
ಒಂದು ಕಾಲದ ಸ್ಪಿರಿಟ್ ಕುಳವಾಗಿದ್ದ
ಕಮರಿಪೇಟೆಯ ರಮೇಶ ಭಾಂಡಗೆ ಎಂಬುವನೇ ಚಾಕು ಇರಿತದಿಂದ ಸಾವನ್ನಪ್ಪಿದ್ದಾನೆ.
ರಮೇಶ ಭಾಂಡಗೆ ಈ ಹಿಂದೆ ಹಲವು ಅಕ್ರಮ ಧಂದೆಯಲ್ಲಿ ಭಾಗಿಯಾಗಿದ್ದ. ಅಲ್ಲದೆ, ಹಲವರ ಜೊತೆಗೆ ಹಳೆ ವೈಷಮ್ಯವಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆತನನ್ನು
ಹಾಡುಹಗಲೇ ಚಾಕು ಇರಿದು ದುಷ್ಕರ್ಮಿಗಳು
ಪರಾರಿಯಾಗಿದ್ದಾರೆ.
ಹುಬ್ಬಳ್ಳಿಯ
ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ
ಅಂಗಡಿಯೊಂದರ ಮುಂದೆ ಚಾಕು ಇರಿಯಲಾಗಿದೆ. ಅದರ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಹಳೆಯ ವೈಷಮ್ಯದಿಂದಲೇ ಕೃತ್ಯ ಎಸಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ
ಸ್ಥಳಕ್ಕೆ ಶಹರ ಪೊಲೀಸ್ ಅಧಿಕಾರಿಗಳುದ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.