ರಾಜ್ಯ

17 ಚೆಕ್ ಪೋಸ್ಟ್ ದಾಟಿ ಮುಂಬೈನಿಂದ ಮಂಡ್ಯಕ್ಕೆ ಶವ ಬಂದಿದ್ದು ಹೇಗೆ ಎಂದ ಕುಮಾರಸ್ವಾಮಿ

ಮಂಡ್ಯ prajakiran.com : ರಾಜ್ಯದ ಬಿಜೆಪಿ ಸರಕಾರ ಪದೇ ಪದೇ ನಮ್ಮನ್ನು ಕೆಣಕುತ್ತಿದೆ. ರಾಮನಗರ ಬಳಿಕ ಈಗ ಮಂಡ್ಯದ ವಿರುದ್ದ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಕೊಡಗಹಳ್ಳಿ ವ್ಯಕ್ತಿಯೊಬ್ಬ ಮುಂಬೈನಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಆ ವ್ಯಕ್ತಿ ಸಾವನ್ನಪ್ಪಿದ್ದ ನಂತರ ಶವ ಸಂಸ್ಕಾರಕ್ಕೆ ಮಂಡ್ಯಕ್ಕೆ ತಂದಿದ್ದು ಹೇಗೆ.

ಅವರಿಗೆ  ಪರವಾನಿಗೆ ಕೊಟ್ಟವರು ಯಾರು. ಪರವಾನಿಗೆ ಇಲ್ಲದೆ ತಂದರು ಹೇಗೆ, ಹಾಗಿದ್ದರೆ ಫೇಕ್ ದಾಖಲೆ ಸೃಷ್ಟಿಸಿದ್ದರೆ ಎಂದು ಹೆಚ್ ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ ಅವರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಮುಂಬೈ ನಿಂದ ಪಾಂಡವಪುರದವರೆಗೆ 17 ಟೋಲ್ ಬರುತ್ತದೆ.

ಅದು ದಾಟಿದ್ದು ಹೇಗೆ, ಮಂಡ್ಯ ಜನತೆ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು.

ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಮುಂದೆ ನಿಂತು ಶವ ಇಳಿಸಿಕೊಂಡಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಅಧಿಕಾರಿಗಳಲ್ಲಿ ಗಂಭೀರತೆ ಇಲ್ಲ. ಕೆಲವರು ಮುಂಬೈನಿಂದ ಬಸ್ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಇದೆ. ಹಳ್ಳಿಗಳಿಗೆ ಹರಡಿದರೆ ಗತಿ ಏನು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತಪ್ಪು ಎಸಗಿದಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಮಹಾರಾಷ್ಟ್ರದಅಂಬುಲೆನ್ಸ್ ರಾಜ್ಯದ ಪ್ರವೇಶ ಮಾಡಿದ್ದು ಹೇಗೆ ಅಕ್ರಮವಾಗಿ ಬಂದದ್ದು ಹೇಗೆ

ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಪೋನ್ ಮಾಡಿದರೆ ಬಾಡಿ ತಂದಿದ್ದು ಗೊತ್ತೆ ಇಲ್ಲ ಎಂದು ಉಡಾಫೆ ಉತ್ತರ ಹೇಳಿದ್ದಾರೆ.

ಗಾಡಿ ತಂದವರಿಗೆ ಪಾಸಿಟಿವ್ ಇರುವುದು ಆತಂಕದ ಸಂಗತಿಯಾಗಿದೆ. ಅದರಲ್ಲಿ ಶವದ ಜೊತೆಗೆ ಬಂದಿದ್ದ ಐವರಿಗೆ ಸೋಂಕು ಹರಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಡ್ಯದ ಜನತೆ ವಿರೋಧ ಮಾಡಿದ್ದರೂ, ಅಧಿಕಾರಿಗಳೇ ಮುಂದೆ ನಿಂತು ಶವ ಸಂಸ್ಕಾರ ಮಾಡಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.

ಇದರಲ್ಲಿ ನನ್ನ ಪಾತ್ರವಿಲ್ಲ. ನಾನು ಕೂಡ ವಿರೋಧಿಸಿದ್ದೇನೆ. ಮಾಹಿತಿ ಅರಿತಅಧಿಕಾರಿಗಳು ತಕ್ಷಣಅದನ್ನು ತಡೆದು ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದರಲ್ಲಿ ಯಾರೆಲ್ಲಾ ಶಾಮಿಲಾಗಿದ್ದಾರೆ ಎಂಬುದು ಬಹಿರಂಗವಾಗಬೇಕು ಅಂದರೆ ಈ ಕುರಿತು ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಒತ್ತಾಯಿಸಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *