ಜಿಲ್ಲೆ

ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿದ ಬಸ್‌ನಿಲ್ದಾಣ ಅಧಿಕಾರಿ

ಧಾರವಾಡ prajakiran.com : ನಗರದ ಹೊಸ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಿಲ್ದಾಣಾಧಿಕಾರಿ ಅದರಗುಂಚಿ ಅವರಿಗೆ ಸಿಕ್ಕ ಬೆಲೆಬಾಳುವ ಮೊಬೈಲ್ ಸೆಟ್‌ನ್ನು ಸುರಕ್ಷಿತವಾಗಿ ಅದರ ವಾರಸುದಾರರಿಗೆ  ತಲುಪಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.

ಗುರುವಾರ ಬೆಳಿಗ್ಗೆ ರಾಹುಲ್ ಎಂ. ಬಸಟ್ಟಿ  ಎಂಬುವರ ಮೊಬೈಲ್ ಕಳೆದಿತ್ತು. ಈ ಕುರಿತು ಅವರ ತಂದೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಿಲ್ದಾಣಾಧಿಕಾರಿ ಅದರಗುಂಚಿಯವರು ತಮಗೆ ಸಿಕ್ಕ ಮೊಬೈಲ್‌ನ್ನು ಸಂಬಂಧಿಸಿದ ವ್ಯಕ್ತಿಗೆ ಹಿಂದಿರುಗಿಸಿದರು.

ಈ ಸಂದರ್ಭದಲ್ಲಿ ವಿಭಾಗದ ಉಪಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಶಶಿಧರ ಕುಂಬಾರ ಉಪಸ್ಥಿತರಿದ್ದರು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ  ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *