ಧಾರವಾಡ prajakiran. com : ಧಾರವಾಡದ ಮಾಳಾಪುರದ ನಿವಾಸಿ ಶ್ರೇಯಸ್ ಈರಣ್ಣ ಅಕ್ಕಿಮರಡಿ ಮಲೇಶಿಯಾದದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಬಂದು ಭಾರತಕ್ಕೆ ಹೆಮ್ಮೆ ತಂದಿದ್ದಾನೆ.
ಧಾರವಾಡದ ಮಲ್ಲಸಜ್ಜನ ಶಾಲೆಯ ವಿದ್ಯಾರ್ಥಿಯ ಈ ಸಾಧನೆಗೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
18 ನೇ ಅಂತರರಾಷ್ಟ್ರೀಯ ಓಕಿನವಾ ಗೊಜು ರೂಂ ಇಪ್ಪೊ ಸಿಟಿ ಕರಾಟೆ ಓಪನ್ ಚಾಂಪಿಯನ್ ಶಿಪ್ 2022 ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾನೆ.
ಈತನಿಗೆ ಗುರುಗಳಾದ ವಿನಯ ನಾಡಗೇರ, ಮಂಜುನಾಥ ಹೂಗಾರ ಹಾಗೂ ಇತರ ಶಿಕ್ಷಕರು ಕರಾಟೆ ತರಬೇತಿ ನೀಡಿದ್ದಾರೆ.
ಅದರಂತೆ ಶ್ರೇಯಸ್ ತಂದೆ ಈರಣ್ಣ ಅಕ್ಕಿಮರಡಿ ಆತನ ಸಾಧನೆಗೆ ಪ್ರೋತ್ಸಾಹಿಸಿ ಆತನನ್ನು ಮಲೇಶಿಯಾಕ್ಕೆ ಕಳುಹಿಸಿದ್ದರು.
ಈಗ ಶ್ರೇಯಸ್ ಕಂಚಿನ ಪದಕ ಪಡೆದ ಹಿನ್ನಲೆಯಲ್ಲಿ ಧಾರವಾಡ ಜನರು ಹಾಗೂ ಕುಟುಂಬ ಸದಸ್ಯರು ಶ್ರೇಯಸ್ ಅಕ್ಕಿಮರಡಿ ಸಾಧನೆಯನ್ನು ಕೊಂಡಾಡಿದ್ದಾರೆ.
ಮಲೇಶಿಯಾದ ಐ ಫೂನ್ ಸಿಟಿಯಲ್ಲಿ ಆಯೋಜಿಸಿದ್ದ 18 ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪೇಧೆ೯ಯಲ್ಲಿ ಧಾರವಾಡದ ಆದಿತ್ಯ ಸೊಲ್ಲಾಪುರ ಬ್ಯಾಕ್ ಬೆಲ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಗೆದ್ದಿದ್ದು, ಬಣ್ಣದ ಬೆಲ್ಟ್ ನ ಸ್ಪಧೆ೯ ಯಲ್ಲಿ ವಿನೂತ ಗಾಣಿಗ ಪ್ರಥಮ, ಉತ್ಸವ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು.
ಧಾರವಾಡದ ಜೆ ಎಸ್ ಎಸ್ ಕಬ್ಬೂರ ತಾಂತ್ರಿಕ ವಿದ್ಯಾಲಯದಲ್ಲಿ ಇಬ್ಬರು ಕೂನೆಯ ವಷ೯ದಲ್ಲಿ ಅಟೂಮೂಬೈಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.
ಇವರ ಮಾಗ೯ದಶ೯ಕ ಹಾಗೂ ಗುರುಗಳು ರಮೇಶ ಸೋಲಾಪುರ ಸಹ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.