ಮುಂಬೈ (ಮಹಾರಾಷ್ಟ್ರ) Prajakiran.com : ಕೊರೋನಾ ಹೆಚ್ಚಳದಿಂದಾಗಿ ಈಗಾಗಲೇ ದೆಹೆಲಿ ಲಾಕ್ ಡೌನ್ ಮಾಡಿದೆ.
ಇದೀಗ ಮಹಾರಾಷ್ಟ್ರದಲ್ಲಿಯೂ ಕೂಡ ಇಂದಿನಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಇಂದಿನಿಂದ ಮೇ.1ರ ವರೆಗೂ ಈ ನಿಯಮ ಜಾರಿಯಲ್ಲಿರಲಿದೆ.
ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಶೇ. 15ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದ್ದು, ಮದುವೆ, ಮುಂಜಿಯಂತಹ ಕಾರ್ಯಕ್ರಮಗಳಿಗೆ 25 ಜನರು ಭಾಗಿಯಾಗಲು ಅವಕಾಶ ನೀಡಿಲಾಗಿದೆ.
ಕೊರೋನಾ ನಿಯಮ ಉಲ್ಲಂಘಿಸುವವರಿಗೆ ಸರ್ಕಾರ 50 ಸಾವಿರದವರಗೂ ದಂಢ ಪವಿಧಿಸಿದೆ.
ತುರ್ತು ಪರಿಸ್ಥಿತಿ ಹೊರತು ಪಡಿಸಿ ಇತರ ಸಮಯದಲ್ಲಿ ಖಾಸಗಿ ವಾಹನ ಬಳಕೆ ಮಾಡಿದರೆ 10 ಸಾವಿರ ದಂಡ ವಿಧಿಸಿದೆ.