ರಾಜ್ಯ

ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗೆ ಇಳಿಸಿದರೆ ಲಿಂಗಾಯತ ಸಮಾಜ ಬಿಜೆಪಿಯನ್ನು ಕ್ಷಮಿಸಲ್ಲ

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ

ಧಾರವಾಡ prajakiran.com : ನಾಡಿನ ಸುತ್ತೂರು ಮಠ, ಕಲಬುರಗಿಯ ಸಾರಂಗಿ ಮಠ ಸೇರಿದಂತೆ ಹಲವು ಮಠಧೀಶರು ಮತ್ತು ವಿಶೇಷವಾಗಿ ಎಲ್ಲಾ ಪಕ್ಷಗಳ ಲಿಂಗಾಯತ ನಾಯಕರು ಪಕ್ಷ ಭೇದ ಮರೆತು ಈಗಾಗಲೇ ಸಿಎಂ ಯಡಿಯೂರಪ್ಪ ಅವರಿಗೆ ಅವಧಿ ಮುಗಿಯುವರೆಗೆ ಸಿಎಂ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರಿಂದ ಬಿಜೆಪಿ ಹೈಕಮಾಂಡ್ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಲಹೆ ನೀಡಿದರು.

ಅವರು ಧಾರವಾಡದ ಎಪಿಎಂಸಿ ದಲಾಲ್ ಮತ್ತು ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ್ ಹಂಪಣ್ಣವರ ನೇತೃತ್ವದಲ್ಲಿ ನಡೆದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಇಲ್ಲದಿದ್ದರೆ ಅದರ ಪರಿಣಾಮ ಬಿಜೆಪಿಯು ಬರುವ ದಿನಗಳಲ್ಲಿ ಎದುರಿಸಬೇಕಾದಿತು ಎಂದರು‌.

ಸಭೆಯ ನೇತೃತ್ವ ವಹಿಸಿದ್ದ ಧಾರವಾಡ ದಲಾಲ್ ಮತ್ತು ವರ್ತಕರ ಸಂಘದ ಅಧ್ಯಕ್ಷ ಹಾಗೂ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಶಿವಶಂಕರ್ ಹಂಪಣ್ಣವರ ಮಾತನಾಡಿ, ಲಿಂಗಾಯತ ಸಮಾಜವು ಸೇರಿದಂತೆ ಎಲ್ಲಾ ಸಮಾಜದ ಜೊತೆಗೆ ಕೆಳದ ಹಲವು ದಶಕಗಳಿಂದ
ಉತ್ತಮ ಒಡನಾಟ ಹಾಗೂ ಬಾಂಧವ್ಯ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ಬಿಜೆಪಿ ಯನ್ನು ಲಿಂಗಾಯತ ಸಮಾಜ ಯಾವತ್ತೂ ಕ್ಷಮಿಸಲ್ಲ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು‌.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ
ಅಧ್ಯಕ್ಷರಾದ ಶ್ಯಾಮನೂರು ಶಿವಶಂಕ್ರಪ್ಪ, ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಈಗಾಗಲೇ ಈ ಕುರಿತು ನಿಲುವು ತಿಳಿಸಿದ್ದಾರೆ.

ಇದು
ಇಡೀ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದಂತಾಗುತ್ತದೆ. ಲಿಂಗಾಯತ ಸಮಾಜದ ನಾಯಕರನ್ನು ಈ ಹಿಂದಿನಿಂದಲೂ ಎಲ್ಲಾ ಪಕ್ಷದ ನಾಯಕರು ತುಳಿಯುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ಅವರನ್ನು
ಯಾವ ಕಾರಣಕ್ಕಾಗಿ ತೆಗೆಯುತ್ತಿದ್ದೀರಿ. ಪದೇ ಪದೇ ಈ ವಿಷಯ ಮುನ್ನಲೆಗೆ ಬರಲು ಕಾರಣವೇನು. ಎಂದು ಪ್ರಶ್ನಿಸಿದರು.

ಮಾಜಿ ಸಚಿವ
ಎಂ.ಬಿ. ಪಾಟೀಲರನ್ನು ಮೀರ್ ಸಾಧಿಕ್ ಎನ್ನುವ ಬದಲಿಗೆ ಬಿಜೆಪಿ ಯಲ್ಲಿಯೇ ಸಾಕಷ್ಟು ಜನ ಮೀರ್ ಸಾಧಿಕರು ಇದ್ದಾರೆ ಎಂದು ಗುಡುಗಿದ್ದಾರೆ‌‌.

ಈಗಾಗಲೇ ವಿವಿಧ ಸಮಾಜದ ಮಠಾಧೀಶರು ಯಡಿಯೂರಪ್ಪ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ
ಹೈ ಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರು ಆಗಿರುವ ಯಡಿಯೂರಪ್ಪ ಅವರನ್ನೇ ಮುಂದಿನ ಎರಡು ವರ್ಷ ಮುಂದಿವರೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ
ಬಸವರಾಜ ದಿಗ್ಗಿ, ಶಂಕರ ಬೆಂಡಿಗೇರಿ, ಬಸವರಾಜ ಸೂರೇಬಾನ, ಸಂಗನಗೌಡರ ಖಾನಗೌಡರ, ಅಶೋಕ ಸಂಗೋಳ್ಳಿ, ಗುರು ವಾಲಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಮಿಟಿ ಸದಸ್ಯ ನೀಲಕಂಠ ಹಂಪಣ್ಣವರ,
ಯಲ್ಲಪ್ಪ ಮುಂದಿನಮನಿ ತಮ್ಮಣ್ಣ ಯಂಡಿಗೇರಿ, ಮಲ್ಲನಗೌಡರ ಚಿಕ್ಕನಗೌಡರ, ಪ್ರದೀಪ ಪಾಟೀಲ, ಬಾರ್ ಅಸೋಸಿಯೇಷನ್ ಸದಸ್ಯ ಪ್ರಕಾಶ ಬಾವಿಕಟ್ಟಿ ಉಪಸ್ಥಿತರಿದ್ದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *