ರಾಜ್ಯ

ಎಪ್ರಿಲ್ 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ

prajakiran.com : ಧಾರವಾಡದ ನಗರ ಬಸ್ ನಿಲ್ದಾಣದಲ್ಲಿ ಗುರುವಾರ ರಾಜ್ಯ ರಸ್ತೆ ಸಾರಿಗೆ
ನೌಕರರು ಸಾಂಕೇತಿಕವಾಗಿ ಕೈಗೆ ಕಪ್ಪು ಬಟ್ಟೆ ಕಟ್ಟುವುದರೊಂದಿಗೆ ಪ್ರತಿಭಟನೆ ಪ್ರಾರಂಭ ಮಾಡಿದರು.

ಎಪ್ರಿಲ್ 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ
ಗೌರವ ಅಧ್ಯಕ್ಷ ಪಿ.ಎಚ್. ನೀರಲಕೇರಿ ತಿಳಿಸಿದರು‌.

ಅವರು ಗುರುವಾರ ಸಾರಿಗೆ ನೌಕರರ ಪ್ರತಿಭಟನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರಕ್ಕೆ ಹಾಗೂ ವಿಶೇಷವಾಗಿ
ಸಾರಿಗೆ ಇಲಾಖೆಗೆ ಪ್ರತಿಭಟನೆ ನಡೆಸುವ ಕುರಿತು ಈಗಾಗಲೇ ನೋಟಿಸ್ ನೀಡಿದ್ದೇವೆ.

ನಮ್ಮ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರಕಾರ ವಿಫಲವಾಗಿದೆ ಎಂದು ದೂರಿದರು‌.

ಕೆ ಎಸ್ ಆರ್ ಟಿಸಿ ನೌಕರರು 24 ಗಂಟೆಗಳ ಕಾಲ ದುಡಿದರೂ ಸಂಬಳ ಹೆಚ್ಚಿಸಲು ಆಗಿಲ್ಲ.
ಸಾರಿಗೆ ಇಲಾಖೆಯ ನಿರ್ವಹಣೆ ಮಾಡುವಲ್ಲಿ ಸಾರಿಗೆ ಸಚಿವರು ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ವಿಫಲ ಆಗಿದ್ದಾರೆ ಎಂದು ದೂರಿದರು.

ಆರನೇ ವೇತನ ಆಯೋಗ ಜಾರಿಗೆ ಮಾಡಿ ಇಲ್ಲದಿದ್ದರೆ ರಾಜ್ಯದ ಒಂದು‌ ಲಕ್ಷ ಮೂವತ್ತೈದು ಸಾವಿರ ಸಾರಿಗೆ ನೌಕರರ ಶಾಪಕ್ಕೆ ಗುರಿಯಾಗುತ್ತಿರಿ ಎಂದುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ
ಗೌರವ ಅಧ್ಯಕ್ಷ ಪಿ.ಎಚ್. ನೀರಲಕೇರಿ ದೂರಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *