ಅಂತಾರಾಷ್ಟ್ರೀಯ

ಕಸಾಪ ಚುನಾವಣಾ ಅಖಾಡದಲ್ಲಿ ಇದೀಗ ಸೂಟಕೇಸ್ ಸದ್ದು…….!?

ಕಲಬುರಗಿ/ಬೆಳಗಾವಿ prajakiran. com : ಕನ್ನಡ ಸಾಹಿತ್ಯಷತ್ತಿನ ಚುನಾವಣೆ ಅಖಾಡ ಇದೀಗ ರಾಜಕೀಯ ನಾಯಕರು ನಾಚುವಂತೆ ಆಗಿದೆ.

ಕೆಲವರು ಅಧಿಕಾರದ ಲಾಲಸೆಗೆ ಬಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿಯಾದರೂ ಪರವಾಗಿಲ್ಲ ಶತಾಯ ಗತಾಯ ಗೆಲ್ಲಲೇ ಬೇಕು ಎಂಬ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಮತದಾರರಿಗೆ ಹಣ,ಹೆಂಡ ಹಂಚಿಕೆ ಹೊರತಾಗಿ ಈಗ ಸೂಟಕೇಸ್, ಬೆಳ್ಳಿ ದೀಪ, ಉಂಗುರ, ಕುಂಕುಮ ಬಟ್ಟಲು ಹಂಚಿಕೆ ಆರಂಭಗೊಂಡಿದೆ.

ಈ ಸೂಟ್ಕೇಸ್ , ಉಡೂಗುರೆ ರೂಪದ ಆಮಿಷಗಳು ಯಾರಿಗೆ ಸೇರಿದ್ದು ಎಂಬುದು ಅಭ್ಯರ್ಥಿಗಳು ಸ್ಪಷ್ಟೀಕರಣ ನೀಡಲಿ ಎಂಬ ಕೂಗು ಬಲಗೊಂಡಿದೆ‌.

ಕಲಬುರ್ಗಿ ನಗರದಲ್ಲಿ ಮಾಯಣ್ಣ ಹೆಸರಿನ 500 ಸೂಟ್ಕೇಸ್ ವಿತರಣೆ ಗೊಂಡಿವೆ. ರಾಜ್ಯ ಕ. ಸಾ. ಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಮಾಯಣ್ಣ ಅವರೇ ಮತದಾರರಿಗೆ ಆಮಿಷ ಒಡ್ಡಿದ್ದಾರೆಯೋ ಎಂಬ ಗುಮಾನಿ ಹಲವರಿಗೆ ಕಾಡುತ್ತಿದೆ.

ಇನ್ನೂ ಕೆಲವು ಅಭ್ಯರ್ಥಿಗಳು ಮತದಾರರಿಗೆ ಕುಂಕುಮ್ ಭರಣಿ, ಬೆಳ್ಳಿ ಉಂಗುರ, ಬೆಳ್ಳಿ ದೀಪ ನೀಡಿದ್ದಾರೆ‌.

ಅಲ್ಲದೆ ಇನ್ನೂ ಕೆಲವರು ದಾಬಾಗಳಿಗೆ ಕರೆದೋಯ್ದು ಮದ್ಯ ಪಾನ ಹಾಗೂ ವಿಶೇಷ ಭೂಜನಕೂಟ ಮಾಡಿಸುತ್ತಿದ್ದಾರೆ ಇಂತಹ ಭ್ರಷ್ಟ ಅಭ್ಯರ್ಥಿಗಳಿಗೆ ಮತ ನೀಡಿದರೆ ಇವರು ಶತಮಾನಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಹೇಗೆ ಕಾಪಾಡುತ್ತಾರೆ.

ಇವರು ಇಲ್ಲಿ ಹಣ ಮಾಡಲು, ಅಧಿಕಾರದ ಲಾಲಸೆಗೆ ಅಥವಾ ಗತ್ತು, ದೌಲತ್ತುಗಳ ಪ್ರದರ್ಶನ ಮಾಡಲು
ಬರುತ್ತಿದ್ದಾರೆಯೇ ಅಥವಾ ಕನ್ನಡಮ್ಮನ ಅಳಿಲು ಸೇವೆ ಮಾಡಲಾ ಎಂಬ ಅನುಮಾನ ಕಾಡದೆ ಇರದು.

ಇಂತಹವರಿಗೆ ಹಾಗೂ ವಿಶೇಷವಾಗಿ ಕಸಾಪದ ಅಧಿಕಾರದ ರುಚಿ ಕಂಡ ಹಲವರಿಗೆ ಇದರಿಂದ ದೂರವಿಡಲು ಕಸಾಪ ಅಜೀವ ಸದಸ್ಯರು ಮನಸ್ಸು ಮಾಡುತ್ತಾರೆಯೇ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

ಬರಲಿ,ಬರಲಿ ಬೆಳಗಾವಿಗೂ
ಬರಲಿ!ಖಾಲಿ ಸೂಟ್ ಕೇಸ್
ಇದ್ದರೆ ಬೇಡವೇ ಬೇಡ!
ಗರಿ ಗರಿ ನೋಟುಗಳೇ
ತುಂಬಿದ್ದರೆ ಬಂದೇ ಬಿಡಲಿ!
ಹಂಚಲಿ ಕ.ಸಾ.ಪ.ಮತದಾರರಿಗೆಲ್ಲ
ಬರೀ ಕಲಬುರ್ಗಿಗಷ್ಟೇ ಏಕೆ
ಬೆಳಗಾವಿಗರಿಗೆ “ಅನ್ಯಾಯ”ಏಕೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 ಈ ಸೂಟ್ಕೇಸ್ ಯಾರಿಗೆ ಸೇರಿದ್ದು ಎಂಬ ಸ್ಪಷ್ಟೀಕರಣ ನೀಡಲಿ‌. ಕಲಬುರ್ಗಿ ನಗರದಲ್ಲಿ ಇಂತಹ 500 ಸೂಟ್ಕೇಸ್ ವಿತರಣೆಗೊಂಡಿವೆ.

ಬೆಂಗಳೂರು ಮೂಲದ ಅಭ್ಯರ್ಥಿಯೊಬ್ಬರ ಹೆಸರು ಅದರ ಮೇಲೆ ಬರೆಯಲಾಗಿದೆ. ಅವರು ನೀಡಿದ್ದಾರೆಯೇ ಅಥವಾ ಅವರ ಹೆಸರು ಕೆಡಿಸಲು ಯಾರಾದರೂ ಇಂತಹ ಹುನ್ನಾರ ಮಾಡಿದ್ದಾರೆಯೇ ಎಂಬುದು ಬಹಿರಂಗಗೊಳ್ಳಲಿ.

ಪ್ರೊ.ಶಿವರಾಜ ಪಾಟೀಲ. ರಾಜ್ಯಾಧ್ಯಕ್ಷ ಸ್ಥಾನದ ಕ.ಸಾ.ಪ ಆಭ್ಯರ್ಥಿ, ಕಲಬುರಗಿ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *