ಆಧ್ಯಾತ್ಮ

ಧಾರವಾಡ ಜಿಲ್ಲೆಯ ಕಮಡೊಳ್ಳಿ ಲೋಚನೇಶ್ವರ ಮಠದ ಶತಾಯುಷಿ ಮಹಾಸ್ವಾಮಿಗಳು ಲಿಂಗೈಕ್ಯ

ಶೋಕಸಾಗರದಲ್ಲಿ ಭಕ್ತ ಜನತೆ

ಕುಂದಗೋಳ prajakiran.com : ಕಳೆದ ಎರಡು ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಲೋಚನೇಶ್ವರ ಮಠದ 5ನೇ ಪೀಠಾಧಿಪತಿ ರಾಚೋಟೇಶ್ವರ ಮಹಾಸ್ವಾಮಿಗಳು ತಮ್ಮ 103ನೇ ವಯಸ್ಸಿನಲ್ಲಿ ಲೋಚನೇಶ್ವರ ಮಠದಲ್ಲೇ ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ಲಿಂಗೈಕ್ಯರಾಗಿದ್ದಾರೆ.

ಸರಿ ಸುಮಾರು 200 ವರ್ಷ ಇತಿಹಾಸದ ಕುಂದಗೋಳ ತಾಲೂಕಷ್ಟೇ ಅಲ್ಲದೇ ರಾಜ್ಯಾದ್ಯಂತ ಭಕ್ತರನ್ನು ಹೊಂದಿದ್ದ ಸ್ವಾಮಿಗಳು ತಮ್ಮ ಪ್ರವಚನ ಹಾಗೂ ಮಾತಿನ ಶೈಲಿಯಿಂದಲೇ ಹೆಸರಾಗಿದ್ದರು.

2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ದೇವರನ್ನು ಸರ್ವ ಸ್ವಾಮಿಗಳ ನೇತೃತ್ವದಲ್ಲಿ ಪೀಠಾಧಿಕಾರ ಮಾಡಿ ಮಠದ ಏಳ್ಗೆಗೆ ಚಿಂತನೆ ಮಾಡಿದ್ದರು.

ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದರು.

ಕಳೆದ 2 ಎರಡು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲೋಚನೇಶ್ವರ ಮಹಾಸ್ವಾಮಿಗಳಿಗೆ ಭಕ್ತರು ಮಠದ ಹಿಂದಿನ ಮಠಾಧಿಪತಿಗಳಂತೆ ಅವರಿಗೂ ಸಹ ಮಠದಲ್ಲಿ ಲಿಂಗೈಕ್ಯರಾಗುವದಕ್ಕೆ ಮೊದಲೇ ಗದ್ದುಗೆ ನಿರ್ಮಿಸಿದ್ದರು.

ಮನಿಪ್ರ ರಾಜೋಟೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು ಇಡೀ ಭಕ್ತ ಸಾಗರವೇ ಶೋಕದಲ್ಲಿ ಮುಳುಗಿದೆ.ಇವರ ಅಂತ್ಯಕ್ರಿಯೆ ಸಾಯಂಕಾಲ 5 ಗಂಟೆಗೆ ಮಠದ ಆವರಣದಲ್ಲಿ ನಡೆಯಲಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *