ಆಧ್ಯಾತ್ಮ

ಯಮಕನಮರಡಿ ಚಿನ್ನಕಳುವು ಪ್ರಕರಣ ತನಿಖೆ ನಡೆಸಿದರೆ 10-15 ಪ್ರಕರಣ ಬಯಲಿಗೆ : ಬಸವರಾಜ ಕೊರವರ

ಕಿಂಗಪಿನ್ ಕಿರಣ ಹಲವು ಹಿರಿಯ ಪೊಲೀಸ ಅಧಿಕಾರಿಗಳ ಸಾಥ್

ಪೊಲೀಸ್ ಮಹಾನಿರ್ದೇಶಕರಿಗೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ನಾಲ್ಕು ಪುಟದ ಪತ್ರ ಬರೆದು ಆಗ್ರಹ

ಧಾರವಾಡ : ಬೆಳಗಾವಿಯ ಯಮಕನಮರಡಿ ೪.೯ ಕೆಜಿ ಚಿನ್ನ ಕಳವು ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಇಂತಹ ಹತ್ತು ಹದಿನೈದು ಚಿನ್ನ ಕಳುವು ಪ್ರಕರಣ ಬಯಲಿಗೆ ಬರಲಿವೆ ಎಂದು ಸಾಮಾಜಿಕ ಕರ‍್ಯಕರ್ತ ಬಸವರಾಜ ಕೊರವರ ತಿಳಿಸಿದ್ದಾರೆ.
ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ ಅವರಿಗೆ ಪತ್ರ ಬರೆದಿದ್ದು, ಹಿರಿಯ ಪೊಲೀಸ ಅಧಿಕಾರಿಯ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಪ್ರಕರಣದ ಕಿಂಗಪಿನ್ ಕಿರಣ ಹಲವು ಹಿರಿಯ ಪೊಲೀಸ ಅಧಿಕಾರಿಗಳ ಸ್ನೇಹ ಸಾಧಿಸಿ ಹಾಗೂ ಹಣದ ಆಮಿಷ ಒಡ್ಡಿ ಇದನ್ನೇ ದಂಧೆಯನ್ನಾಗಿಸಿಕೊAಡು ಬಂದಿದ್ದಾನೆ. ಹೀಗಾಗಿಯೇ ಆತನನ್ನು ಪೊಲೀಸರು ಹೈವೇ ದಲಾಲ್ ಎಂದು ಸಂಬೋಧಿಸುತ್ತಾರೆ ಎಂದು ಪತ್ರದಲ್ಲಿ ಗಮನ ಸೆಳೇದಿದ್ದಾರೆ.
ಈ ಪ್ರಕರಣ ಕರ್ನಾಟಕ ಪೊಲೀಸ್‌ಗೆ ಕಪ್ಪು ಚುಕ್ಕೆ ತಂದಿದೆ. ಜ. ೯ರಂದು ಬೆಳಗಾವಿಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳೂರು ಮೂಲದ ತಿಲಕ್ ಪೂಜಾರಿಗೆ ಸೇರಿದ ಎರ್ಟಿಗಾ ಕಾರು ಕೆ ಎ ೧೯ ಎಂ.ಎಚ್ ೯೪೫೧ ಕಾರಿನಲ್ಲಿದ್ದ ೪ ಕೆ ಜಿ ೯೦೦ ಗ್ರಾಂ ಚಿನ್ನವನ್ನು ಕಳುವು ಮಾಡಿರುವ ಕುರಿತು ನಾಲ್ಕು ತಿಂಗಳ ನಂತರ ಸಿಐಡಿ ನಿರ್ದೇಶನದಂತೆ ಪ್ರಕರಣ ದಾಖಲಾಗಿರುವುದು ನೋಡಿದರೆ ಇದರಲ್ಲಿ ಪ್ರಭಾವಿ ಹಿರಿಯ ಪೊಲೀಸ ಅಧಿಕಾರಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ದೂರಿನ ಕುರಿತು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳು ಹೈ ವೇ ದಲಾಲ್ ಹಾಗೂ ಹುಬ್ಬಳ್ಳಿ ಮೂಲದ ಕಿರಣ  ಹಾಗೂ ಹಲವು ಪೊಲೀಸ ಅಧಿಕಾರಿಗಳು ಪೂನಾ ಬೆಂಗಳೂರು ರಸ್ತೆಯಲ್ಲಿ (ಪಿಬಿರಸ್ತೆ) ನಡೆಸಿರುವ ಅಕ್ರಮಗಳ ಕುರಿತು ಚೆಲ್ಲುತ್ತಿವೆ.
ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ವರದಿಗಳು ಪೊಲೀಸ್ ಸಿಬ್ಬಂದಿಯ ಆತ್ಮಸ್ಥೆöÊರ್ಯ ಕುಂದಿಸುತ್ತಿವೆ. ಎಲ್ಲಾ ಪೊಲೀಸರನ್ನು ಜನಸಾಮಾನ್ಯರು ಕಳ್ಳರಂತೆ ನೋಡುವಂತೆ ಆಗಿದೆ.
ಯಮಕನಮರಡಿ ಪೊಲೀಸ್ ಠಾಣೆಯ ಚಿನ್ನ ಕಳುವು ಪ್ರಕರಣವನ್ನು ಯಾವುದೇ ಹಿರಿಯ ಅಧೀಕಾರಿಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಇಂತಹ ಹತ್ತು ಹದಿನೈದು ಚಿನ್ನ ಕಳುವು ಪ್ರಕರಣ ಬಯಲಿಗೆ ಬರಲಿವೆ ಎಂದು ಬಸವರಾಜ ಕೊರವರ ಎಚ್ಚರಿಸಿದ್ದಾರೆ.
ಮಂಗಳೂರು, ಹುಬ್ಬಳ್ಳಿ ಹಾಗೂ ಉತ್ತರಕರ್ನಾಟಕದ ಹಲವು ಜಿಲ್ಲೆಗಳಿಂದ ಮಹಾರಾಷ್ಟçಕ್ಕೆ (ಮುಂಬೈ)ಗೆ ಹೋಗುವ ಮತ್ತು ಮಹಾರಾಷ್ಟçದಿಂದ ಉತ್ತರಕರ್ನಾಟಕ ಭಾಗಕ್ಕೆ ಬರುವ ಚಿನ್ನದ ವ್ಯಾಪಾರಿಗಳ ಕಾರುಗಳನ್ನು ಹಿಡಿದು ಅವರ ಬಳಿಯಿದ್ದ ಕೆಜಿಗಟ್ಟಲೇ ಆಭರಣ ಚಿನ್ನವನ್ನು ದೋಚಿದಲ್ಲದೆ, ಹಣವನ್ನು ಪಡೆದು ಕೈ ತೊಳೇದುಕೊಳ್ಳಲಾಗಿದೆ.
ಹುಬ್ಬಳ್ಳಿ ಮೂಲದ ಕಿರಣ ಹಾಗೂ ಹಲವು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಪೊಲೀಸ್ ಇಲಾಖೆಯ ಗೌರವಕ್ಕೆ ಚ್ಯುತಿ ತರುವುದಲ್ಲದೆ, ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾರೆ ಎಂದು ಬಸವರಾಜ ಕೊರವರ ದೂರಿದ್ದಾರೆ.
ಪ್ರಕರಣ ದಾಖಲು ಆಗದೆ ಇರುವ ೧೦ರಿಂದ ೧೫ ಚಿನ್ನ ಕಳುವಿನ ಪ್ರಕರಣ ಸಾರ್ವಜನಿಕರಿಂದ ಹಾಗೂ ಪೊಲೀಸರ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಅವುಗಳಲ್ಲಿ ಕೆಲವು ನನ್ನ ಗಮನಕ್ಕೆ ಬಂದಿವೆ ಎಂದು ವಿವರಿಸಿದ್ದಾರೆ.
ಮಾ. ೬ರಂದು ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ಕೇರಳದಿಂದ ಮುಂಬೈಗೆ ಹೊರಟಿದ್ದ ೩ ಕೋಟಿ ೬೦ ಲಕ್ಷ ಹಾಗೂ ಚಿನ್ನವನ್ನು ತೆಗೆದುಕೊಂಡು ಹೋಗುತ್ತಿದ್ದ ಮುಂಬೈ ಮೂಲದ ವಿಕಾಸ ಎಂಬುವರಿಗೆ ಸೇರಿದ ಕೆಎಲ್ ೮ ಆರ್ ೭೨೯೯ ಸ್ವಿಪ್ಟ್ ಡಿಸೈರ್ ಕಾರ  ನಲ್ಲಿದ್ದ ಚಿನ್ನ ಹಾಗೂ ಹಣವನ್ನು ಪಡೆದಿದ್ದಾರೆ.
ಇದೇ ರೀತಿ ಧಾರವಾಡ ಭಾಗದಲ್ಲಿ ೭ ಕೆ ಜಿ ಬಂಗಾರ ಪ್ರಕರಣದಲ್ಲಿ ಜನಾರ್ಧನ  ಅಲಿಯಾಸ್ ಜೆಡಿ ಬಳಿ ಸುಮಾರು ನಲವತ್ತು ಲಕ್ಷ ಮೌಲ್ಯದ  ೮೩೦ ಗ್ರಾಂ ಬಂಗಾರ   ತೆಗೆದುಕೊಂಡು ಪ್ರಕರಣ ಮುಚ್ಚಿ ಹಾಕಿದ್ದಾರೆ.
ಅದೇ ರೀತಿ ಕಲಘಟಗಿ ಹಾಗೂ ಧಾರವಾಡ ಪೊಲೀಸ್ ಠಾಣೆಯ ವ್ಯಾಪ್ತಿಗಳಲ್ಲಿ ಸುಮಾರು ಕಾರುಗಳನ್ನು ಹಿಡಿದು ಅವುಗಳಲ್ಲಿ ಇದ್ದ ೧೦ ಕೋಟಿಗೂ ಅಧಿಕ ಬಂಗಾರ ಬದಲಾಗಿ ಲಕ್ಷಾಂತರ ರೂಪಾಯಿ ಹಣ ಲಂಚದ ರೂಪದಲ್ಲಿ  ಪಡೆದಿದ್ದಾರೆ.
ಮಂಗಳೂರು ಹಾಗೂ ಹುಬ್ಬಳ್ಳಿ ಮೂಲಕ ಮುಂಬೈಗೆ ಹೋಗುವ ಚಿನ್ನದ ವ್ಯಾಪಾರಿಗಳು ಪ್ರತಿ ತಿಂಗಳೂ ಕಿರಣ ಎಂಬುವರಿಗೆ ಮಾಮೂಲು ನೀಡುತ್ತಾರೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಜನಾರ್ಧನ ಅಲಿಯಾಸ್ ಜೆಡಿ, ಕಿರಣ ಹಾಗೂ ಪೊಲೀಸ ಅಧಿಕಾರಿಗಳು ೧೪ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ್ದಾರೆ.
ಬೆಳಗಾವಿಯ ಐಪಿಎಸ್ ಅಧಿಕಾರಿ ಹಾಗೂ ಹುಬ್ಬಳ್ಳಿ-ಧಾರವಾಡದಿಂದ ವರ್ಗಾವಣೆಗೊಂಡ ಇಬ್ಬರು ಡಿಸಿಪಿ, ೧೦ರಿಂದ ೧೫ ಪೊಲೀಸ್ ಇನ್ಸಪೆಕ್ಟರ್ ಸೇರಿ ಹಲವಾರು ಚಿನ್ನದ ವ್ಯಾಪಾರಿಗಳಿಂದ ಅಕ್ರಮ, ಅವ್ಯವಹಾರ ಕುದಿರಿಸಲು ಹಾಗೂ ಪ್ರಕರಣ ಮುಚ್ಚಿಹಾಕಲು ಹಣ ಪಡೆದಿದ್ದಾರೆ ಎಂದು ಪೊಲೀಸ್ ಸಿಬ್ಬಂದಿಯೇ ಮಾತನಾಡಿಕೊಳ್ಳುವಂತಾಗಿದೆ.
ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು, ಕಿರಣ ಹಾಗೂ ಜನಾರ್ಧನ ಅಲಿಯಾಸ ಜೆಡಿಯ ವಿರುದ್ದ ಕಾನೂನು ಕ್ರಮ ಕೈಗೊಂಡು ಕುಗ್ಗುತ್ತಿರುವ ಪೊಲೀಸರ ಮನೋಸ್ಥೆöÊರ್ಯ ಹೆಚ್ಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಬರೆದ ನಾಲ್ಕು ಪುಟಗಳ ಪತ್ರದಲ್ಲಿ ಮನವಿ ಮಾಡಿದ್ದಾರೆ. 
PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *