ಆರೋಗ್ಯ

ಹೊಂಗೆಯ ಮರ ಮನೆ ಮದ್ದು

  • ಹೊಗೆಯ ಹೂವನ್ನು ತುಪ್ಪದಲ್ಲಿ ಹುರಿದು ನಂತರ ಪುಡಿ ಮಾಡಿಟ್ಟುಕೊಂಡು ಬೆಳಗ್ಗೆ ಸಂಜೆ ಎರಡು ಹೊತ್ತು ಆರು ವಾರ ಸೇವಿಸಿದರೆ ಸಕಲ ಮೇಹ ರೋಗಗಳು ವಾಸಿಯಾಗುತ್ತವೆ.
  • ಹೊಂಗೆಯ ಪಂಚಾಗಗಳನ್ನು ಅರೆದು ಹಾಲು ಸೇರಿಸಿ ಕುಡಿಯುವುದರಿಂದ ಪಾಂಡುರೋಗ ಗುಣವಾಗುತ್ತದೆ. ದೇಹದ ಬಲವು ಬರುತ್ತದೆ.
  • ಹೊಂಗೆಯ ಪಂಚಾಂಗದ ಚೂರ್ಣಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ವಾತ ಸಂಬಂಧದ ವ್ಯಾದಿಗಳು ಗುಣವಾಗುತ್ತದೆ.
  • ಹೊಂಗೆಯ ಪಂಚಾಂಗಗಳನ್ನು ಅರೆದು ಅದಕ್ಕೆ ಎಳ್ಳೆಣ್ಣೆ ಸೇರಿಸಿ ಕಾಯಿಸಿ ಎಣ್ಣೆಮಾತ್ರ ಉಳಿಸಿಕೊಂಡು ಬಾಟಲ್ ನಲ್ಲಿ ಸಂಗ್ರಹಿಸಿಟ್ಟು ಈ ತೈಲವನ್ನು ಹಚ್ಚುವುದರಿಂದ ಚರ್ಮವ್ಯಾದಿಗಳು ವಾಸಿಯಾಗುತ್ತವೆ.
  • ಹೊಂಗೆ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಸಿಪ್ಪೆ ಸುಲಿದು ಒಣಗಿಸಿ ಕುಟ್ಟಿ ವಸ್ತ್ರಗಾಳಿತ ಚೂರ್ಣ ಮಾಡಿಕೊಂಡು ಹೊತ್ತಿಗೆ 5 ರಿಂದ 6 ಗುಂಜಿ ತೂಕದಷ್ಟು ಚೂರ್ಣವನ್ನು ತೆಗೆದುಕೊಂಡು ಜೇನುತುಪ್ಪದಲ್ಲಿ ಕಲಿಸಿ ದಿನಕ್ಕೆ 3ರಿಂದ 4 ಬಾರಿ ಸೇವಿಸಿದರೆ ಮಲೇರಿಯಾ ಜ್ವರ ವಾಸಿಯಾಗುತ್ತದೆ.
  • ಹೊಂಗೆಯ ಚಿಗುರುಲೆಯ ರಸ 2 ಚಮಚಕ್ಕೆ ಎರಡು ಗುಂಜಿ ತೂಕ ಕಾಳು ಮೆಣಸಿನ ಚೂರ್ಣ ಸೇರಿಸಿ ನಿತ್ಯ ಬೆಳಗ್ಗೆ ಸಂಜೆ ಸೇವಿಸಿದರೆ ಕಫ ಕಡಿಮೆಯಾಗಿ ಕೆಮ್ಮು ಸಹ ಕಡಿಮೆ ಆಗುತ್ತದೆ.
  • ಹೊಂಗೆಯ ಎಣ್ಣೆ 6 ತೊಲದಷ್ಟು ತೆಗೆದುಕೊಂಡು ಅದಕ್ಕೆ ಒಂದೂವರೆ ತೊಲ ಆರತಿ ಕರ್ಪೂರ ಮಿಶ್ರ ಮಾಡಿ ಬಿಸಿ ಮಾಡಿಟ್ಟುಕೊಂಡು ಆ ಎಣ್ಣೆಯನ್ನು ಹಚ್ಚಿ ತಿಕ್ಕುವುದರಿಂದ ಸಂಧಿವಾತ (ಆಮವಾತ) ನಿವಾರಣೆಯಾಗುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *