ರಾಜ್ಯ

ಅನ್ಯರಾಜ್ಯಗಳಿಂದ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದ ಮೂವರು ಕ್ವಾರಂಟೈನಿಗಳು

ಬೆಳಗಾವಿ prajakiran.com : ಅನ್ಯರಾಜ್ಯಗಳಿಂದ ಮೂವರು ಕ್ವಾರಂಟೈನಿಗಳು ನೇರವಾಗಿ ಬಸ್ ನಿಲ್ದಾಣಕ್ಕೆ ಬಂದ ಕಾರಣ ಕೆಲಕಾಲ ಆತಂಕ ನಿರ್ಮಾಣವಾದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.

ಮೂವರ ಕೈಯಲ್ಲಿ ಕ್ವಾರಂಟೈನ್ ಸೀಲ್ ಕಂಡ ಬಸ್ ನಿಲ್ದಾಣದಲ್ಲಿದ್ದ ಜನ ಭಯಭೀತರಾಗಿ ಆತಂಕಗೊಂಡಿದ್ದರು.

ಇದರಿಂದಾಗಿ ಬೆಳಗಾವಿ ಬಸ್ ನಿಲ್ದಾಣದಲ್ಲಿ ಇದ್ದ ಥರ್ಮಲ್ ಸ್ಕ್ರೀನಿಂಗ್ ಮಾಡುವ ಸಿಬ್ಬಂದಿಗೆ ಕೂಡ ಗಲಿಬಿಲಿಗೊಂಡಿದ್ದರು.

ಮಹಾರಾಷ್ಟ್ರದ ವೀಟಾದಿಂದ, ಪೂನಾದಿಂದ ಒಬ್ಬ ಹಾಗೂ  ಗೋವಾದಿಂದ ಒಬ್ಬರು ಬಂದಿದ್ದರು.

ಥರ್ಮಲ್ ಸ್ಕ್ರೀನಿಂಗ್ ವೇಳೆ ಒಬ್ಬನಿಗೆ 103 ಟೆಂಪರೇಚರ್ ಕಂಡು ಬಂದಿದ್ದರಿಂದ ಇನ್ನಷ್ಟುಹೌಹಾರಿದರು. ತಕ್ಷಣ ಆತನನ್ನು ದೂರ ನಿಲ್ಲಿಸಿ ಕೆಎಸ್‌ಆರ್‌‌ಟಿಸಿ ಸಿಬ್ಬಂದಿ ಆ್ಯಂಬುಲೆನ್ಸ್ ಕರೆಸಿದರು.

ಹೆಡ್ ಕಾನ್ಸಟೇಬಲ್ ಎಸ್.ಬಿ. ಮಡಿವಾಳರಿಂದ ಭಾರೀ ಅನಾಹುತ ತಪ್ಪಿದ್ದು, ಮಡಿವಾಳರಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

ಈ ವೇಳೆ ಪೂನಾದಿಂದ ಬಂದ ವ್ಯಕ್ತಿಯೊಬ್ಬ ಹೈಡ್ರಾಮಾ ನಡೆಸಿದ. ತನ್ನಲ್ಲಿ ಎಲ್ಲಾ ಆರೋಗ್ಯ ತಪಾಸಣೆ ನಡೆಸಿದ ದಾಖಲೆ ಇದೆ ಎಂದು ಸಮರ್ಥನೆ ಮಾಡಿಕೊಂಡ.

ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ  ಮೂವರನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು.  

ಅನ್ಯರಾಜ್ಯಗಳಿಂದ ಬಂದು ಕ್ವಾರಂಟೈನ್  ಆಗದೇ ನೇರವಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಸ್ಥಳೀಯರಿಗೆ ಎದುರಾಗಿದೆ.

ಅನ್ಯ ರಾಜ್ಯಗಳಿಂದ ವಲಸಿಗರು ಅಕ್ರಮವಾಗಿ ಬೆಳಗಾವಿ ಪ್ರವೇಶಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಅಲ್ಲದೆ, ಗಡಿಜಿಲ್ಲೆ ಬೆಳಗಾವಿಯ ಜನರಲ್ಲಿ ಆತಂಕ ಹೆಚ್ಚಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *