ರಾಜ್ಯ

ಹೈಕೋರ್ಟ್ ರಾಷ್ಟ್ರೀಯ ಇ-ಲೋಕ ಅದಾಲತ್‌ನಲ್ಲಿ ೩೨೩ ಪ್ರಕರಣಗಳ ಇತ್ಯರ್ಥ

ಧಾರವಾಡ prajakiran.com : ಕರ್ನಾಟಕ ಉಚ್ಛ ನ್ಯಾಯಾಲಯ ಪೀಠ ಧಾರವಾಡದಲ್ಲಿ ಶನಿವಾರ   ರಾಷ್ಟ್ರೀಯ ಇ-ಲೋಕ ಅದಾಲತ್ ಜರುಗಿತು.

ಅದಾಲತ್‌ನಲ್ಲಿ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್, ಸೂರಜ್ ಗೋವಿಂದ ರಾಜ್,  ಎಸ್. ವಿಶ್ವಜಿತ್ ಶೆಟ್ಟಿ, ಎಸ್.ಬಿ. ಅಮರಣ್ಣವರ್, ಎಂ.ಜಿ. ಉಮಾ ಹಾಗೂ ಇವರೊಂದಿಗೆ ಲೋಕ ಅದಾಲತ್‌ನ ಸದಸ್ಯರಾದ ಎಲ್.ಟಿ. ಮಂಟಗಣಿ, ಜೆ.ಎಸ್. ಶೆಟ್ಟಿ,   ಎಮ್.ಸಿ. ಹುಕ್ಕೇರಿ, ಎಸ್.ಎಸ್. ಬಡವಡಗಿ ಮತ್ತು ಸುನಂದಾ ಪಾಟೀಲ ಪಾಲ್ಗೋಂಡಿದ್ದರು.

ಕರ್ನಾಟಕ ಉಚ್ಛ ನ್ಯಾಯಲಯ ಪೀಠದಲ್ಲಿ ರಾಷ್ಟ್ರೀಯ ಇ-ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಒಟ್ಟು  ೫ ಪೀಠಗಳನ್ನು ಆಯೋಜಿಸಲಾಗಿತ್ತು.

ಅದಾಲತ್‌ನಲ್ಲಿ ಒಟ್ಟು ೪೭೬ ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು.

ಆ ಪೈಕಿ ಒಟ್ಟು ೩೨೩ ಪ್ರಕರಣಗಳನ್ನು ರೂ.೫,೬೧,೩೪,೦೦೦/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿಗಳು ಮತ್ತು ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ರೋಣ ವಾಸುದೇವ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *