ಜಿಲ್ಲೆ

ಧಾರವಾಡದ ಮಹಾನಗರ ಪಾಲಿಕೆ ಹೆರಿಗೆ ಆಸ್ಪತ್ರೆ ಶೀಘ್ರ ಮೇಲ್ದರ್ಜೆಗೆ

ಮೇಯರ್ ಈರೇಶ ಅಂಚಟಗೇರಿ ಭೇಟಿ, ಪರಿಶೀಲನೆ

ಧಾರವಾಡ prajakiran. com : ಧಾರವಾಡದ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಕಾರ್ಪೊರೇಶನ್ ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಭೇಟಿ ನೀಡಿ ಆಸ್ಪತ್ರೆಯಲ್ಲಿಯ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆದರು.
ಮುಖ್ಯ ವೈದ್ಯಾಧಿಕಾರಿ ದಂಡಪ್ಪನವರ ಅವರಿಂದ ಪಡೆದರು.

ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಶುಲ್ಕ ಇರುವುದರಿಂದ ಮತ್ತು ಧಾರವಾಡದ ಪ್ರಸಿದ್ಧ ಹಿರಿಯ ಖಾಸಗಿ ವೈದ್ಯರು ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ತಪಾಸಣೆ ಮಾಡುತ್ತಿರುವದರಿಂದ ಜನ ಸಾಮಾನ್ಯರಿಗೆ ಬಹಳ ಅನುಕೂಲ ಆಗಿದೆ.

ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಎರಿಸಲು ಬೇಕಾದ ಸಹಕಾರ ಮಹಾನಗರ ಪಾಲಿಕೆಯವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರಪೊರ್ಟರ್ ರಾದ ಸುರೇಶ ಬೆದರೆ ಹಾಗೂ ಸಹಾಯ ಆಯುಕ್ತರಾದ ಆರ್. ಎಮ್‌ ಕುಲಕರ್ಣಿ, ಪಾಲಿಕೆಯ ವೈದ್ಯರಾದ ಶ್ರೀಮತಿ ಮೂಲಿಮನಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರ ಇದ್ದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *