ರಾಜ್ಯ

ಧಾರವಾಡ ಜರ್ನಲಿಸ್ಟ್ ಗಿಲ್ಡ್ ನೂತನ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಜೋಶಿ

ಧಾರವಾಡ ಪ್ರಜಾಕಿರಣ.ಕಾಮ್ : ಇಂದಿನ ಸ್ಪರ್ಧಾತ್ಮಕ ಜಗತ್ತಿಲ್ಲಿ ಪತ್ರಕರ್ತರು ಬದಲಾದ ತಂತ್ರಜ್ಞಾನದ ಜೊತೆಗೆ ಮುಂದಡಿ ಇಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಹೇಳಿದರು.

ಅವರು ರಂಗಾಯಣದ ಆವರಣದಲ್ಲಿ ಭಾನುವಾರ ಧಾರವಾಡ ಜರ್ನಲಿಸ್ಟ್ ಗಿಲ್ಡ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.

 ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ನವೀನ ತಾಂತ್ರಿಕತೆಗಳು ಕಾಲಿಟ್ಟಿವೆ. ಅವುಗಳ ಬಗ್ಗೆ ಪತ್ರಕರ್ತರಿಗೆ ಜ್ಞಾನ ಇರಬೇಕು.
ತಂತ್ರಜ್ಞಾನ ಬಲ್ಲ ಪತ್ರಕರ್ತರು ಜಗತ್ತಿನಲ್ಲಿ ಎಲ್ಲಿಯಾದರೂ ಬದುಕುತ್ತಾನೆ.

 ಜರ್ನಲಿಸ್ಟ್ ಗಿಲ್ಡ್ ಪತ್ರಕರ್ತರ ಹಿತಕ್ಕೆ ವಾರಕ್ಕೊಮ್ಮೆ ತಂತ್ರಜ್ಞಾನದ ತರಬೇತಿ ನೀಡುವ ಕಾರ್ಯ ನಡೆಸುವಂತೆ ಆಶಯ ವ್ಯಕ್ತಪಡಿಸಿದರು.

ದುನಿಯಾ ಬದಲಾದಂತೆ ತಂತ್ರಜ್ಞಾನ, ಓದುಗರ ಅಭಿರುಚಿಯೂ ಬದಲಾಗಿದೆ. ಈ ಕಾರಣಕ್ಕೆ ಮುದ್ರಣ ಮಾಧ್ಯಮದಲ್ಲಿ ರಚನಾತ್ಮಕ ಮತ್ತು ಸಂಶೋಧನಾತ್ಮಕ ವರದಿಗಳಿಗೆ ಹೆಚ್ಚು ಪ್ರಕಟಗೊಳ್ಳಬೇಕು.

ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದು ಅನೇಕ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಹುಟ್ಟಿಕೊಂಡಿವೆ.

ವರದಿ ನೀಡುವ ದಾವಂತಕ್ಕೆ ಬೀಳದೆ, ಸತ್ಯಾಸತ್ಯೆ ಪ್ರಕಟಿಸಬೇಕು. ಹು-ಧಾ ಪಾಲಿಕೆಯಿಂದ ಪತ್ರಕರ್ತರ ಆರೋಗ್ಯ ವಿಮೆಗೆ ರೂ.೨೫ ಲಕ್ಷ ನೀಡುವಂತೆ ಮೇಯರ್‌ಗೆ ಸೂಚನೆ ನೀಡಿದರು.

ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಗಿಲ್ಡ್‌  ನೂತನ ಕಚೇರಿಗೆ ಮೂಲ ಸೌಕರ್ಯಗಳ ಅಗತ್ಯವಿದೆ. ಅವುಗಳನ್ನು ಮಹಾನಗರ ಪಾಲಿಕೆಯಿಂದಲೇ ಒದಗಿಸುವ ಭರವಸೆ ನೀಡಿದರು.

ಕಚೇರಿ ಸದ್ಬಳಿಸಿಕೊಂಡು, ಜನರಿಗೆ, ಸಮಾಜಕ್ಕೆ ಅನುಕೂಲಕರ ಕಾರ್ಯ ಮಾಡಲು ಸಲಹೆ ನೀಡಿದರು.

 ಗಿಲ್ಡ್ ಅಧ್ಯಕ್ಷ ಡಾ.ಬಸವರಾಜ ಹೊಂಗಲ್ ಮಾತನಾಡಿ, ಕೋವಿಡ್ ಹಿನ್ನಲೆ ಬಹುತೇಕ ಜಿಲ್ಲಾ ಪತ್ರಿಕಾ ಕಚೇರಿ ಮುಚ್ಚಲ್ಪಟ್ಟಿವೆ. ಇದರಿಂದ ಪತ್ರಕರ್ತರಿಗೆ ತೊಂದರೆ ಆಗಿತ್ತು. ಈ ಕೊರತೆ ನೀಗಿಸಲು ಪಾಲಿಕೆ ಒಡೆತನದ ಕಟ್ಟಡ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪತ್ರಕರ್ತರಾದ ಗುರುರಾಜ ಜಮಖಂಡಿ, ಪುಂಡಲಿಕ ಹಡಪದ, ಮಂಜುನಾಥ ಅಂಗಡಿ, ಬಸವರಾಜ ಹಿರೇಮಠ, ರವಿಕುಮಾರ ಕಗ್ಗಣ್ಣವರ ಅವರನ್ನು ಸನ್ಮಾನಿಸಲಾಯಿತು.

ಜರ್ನಲಿಸ್ಟ್ ಗಿಲ್ಡ್ ನಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಸುರೇಶ ಬೆದರೆ, ಪಾಲಿಕೆ ಅಧಿಕಾರಿ ಆರ್.ಎಂ. ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗಿಲ್ಡ್‌  ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ನಾಯಕರು ಪಾಲ್ಗೊಂಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *