ಧಾರವಾಡ prajakiran. com : ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮಪಂಚಾಯತ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಂದ ಇಂದು (ಡಿ.10) ವಿವಿಧ ಗ್ರಾಮಪಂಚಾಯತಿಗಳಲ್ಲಿ ಒಟ್ಟು 1424 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಧಾರವಾಡ ತಾಲೂಕಿನ ಗ್ರಾಮಪಂಚಾಯತಿಗಳಿಗೆ ಇಂದು 850 ನಾಮಪತ್ರಗಳು, ಕಲಘಟಗಿ ತಾಲೂಕಿನ ಗ್ರಾಮಪಂಚಾತಿಗಳಿಗೆ 488 ನಾಮಪತ್ರಗಳು ಮತ್ತು ಅಳ್ನಾವರ ತಾಲೂಕಿನ ಗ್ರಾಮಪಂಚಾತಿಗಳಿಗೆ 86 ನಾಮಪತ್ರಗಳು ಸೇರಿ ಒಟ್ಟು 1424 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.