ಧಾರವಾಡ prajakiran.com :
ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟ 24 ಸೋಂಕಿತರ ಸಾವಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸುರೇಶಕುಮಾರ, @nimmasuresh ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ @mla_sudhakar ನೇರ ಹೊಣೆ ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಪಾದಿಸಿದ್ದಾರೆ.
ಕೂಡಲೇ ಇಬ್ಬರೂ ಸಚಿವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
#BSYadiyurappa ನವರೆ ಚಾಮರಾಜನಗರ ಅಕ್ಷಿಜನ್ ಕೊರತೆಯಿಂದ 24ಜನ ಸಾವನ್ನಪ್ಪಿದ ಕಾರಣ ಸರ್ಕಾರ ಆರೋಪಿ ಸ್ಥಾನದಲ್ಲಿದೆ.
#Cm #Health ಮಿನಿಸ್ಟರ್ಸ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಇದು ಒಂದೇ ಘಟನೆಯಲ್ಲ.
ಬೇರೆ ಬೇರೆ ಜಿಲ್ಲೆಗಳಲ್ಲಿ ನೂರಾರು ಜನ #oxygen ಕೊರತೆಯಿಂದ ಸಾಯುತ್ತಿದ್ದಾರೆ. ಇದು #bsybjp ಸರಕಾರದ ಬೇಜಾವಾಬ್ದಾರಿ ಎಂದು ಕಿಡಿಕಾರಿದ್ದಾರೆ.
24 ಜನರ ಕೊಲೆ ಸರ್ಕಾರದಿಂದಲೇ ಆಗಿದೆ. ಆರೋಗ್ಯ ಸಚಿವರು, ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು.ಮತ್ತು ನ್ಯಾಯಾಂಗ ಕೂಡಲೇ ಮಧ್ಯ ಪ್ರವೇಶಿಸಬೇಕು.
ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ತನಿಖೆ ಮಾಡಲಿ ಎಂದು ನೀರಲಕೇರಿ ಒತ್ತಾಯಿಸಿದ್ದಾರೆ.
ಸರ್ಕಾರ ಕೆಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ನೇಮಿಸಿ ಮೂರು ದಿನದ ಒಳಗೆ ವರದಿ ನೀಡುವಂತೆ ಹೇಳುತ್ತಿರುವುದು ಸರಕಾರದ ಕಣ್ಣೋರೆಸುವ ತಂತ್ರ.
ಇದರಿಂದ ನ್ಯಾಯ ಸಿಗುವದಿಲ್ಲ ಇವರು ಸರಕಾರದ ಒಂದು ಭಾಗವೇ ಹೋರತು ತಜ್ಞರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.