ಜಿಲ್ಲೆ

ಹುಬ್ಬಳ್ಳಿಯಲ್ಲಿ ಸಿ. ಕೃಷ್ಣಯ್ಯ ಚೆಟ್ಟಿ ಸಮೂಹ ಸಂಸ್ಥೆಯಿಂದ ವಜ್ರ, ಚಿನ್ನ, ಬೆಳ್ಳಿ ಆಭರಣ ಪ್ರದರ್ಶನ, ಮಾರಾಟ ಮೇಳ

ಹುಬ್ಬಳ್ಳಿ prajakiran. com ಜೂನ್ 17 : ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾದ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಹುಬ್ಬಳ್ಳಿಯ ಡೆನ್ನಿಸನ್ಸ್ ಹೊಟೇಲ್‍ನ ಮೊದಲ ಮಹಡಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಶೇಷ ಆಭರಣ ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭಗೊಂಡಿದೆ.

ಉತ್ತರಕರ್ನಾಟಕ ಭಾಗದ ಜನತೆ ಹಾಗೂ ವಿಶೇಷವಾಗಿ ಹುಬ್ಬಳ್ಳಿ ದಾರವಾಡದ ಆಭರಣ ಪ್ರಿಯರಿಗೆ ಹೊಸ ಹೊಸ ವಿನ್ಯಾಸದ ವಜ್ರ, ಚಿನ್ನ ಬೆಳ್ಳಿ ಆಭರಣಗಳನ್ನು ಪೂರೈಸುವ ಉದ್ದೇಶದಿಂದ ಸಂಸ್ಥೆಯು ಈ ಪ್ರದರ್ಶನ ಆಯೋಜಿಸಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ.


ಸಾಂಪ್ರದಾಯಿಕ ಮತ್ತು ಸಮಕಾಲೀನ ಸಂಗ್ರಹಗಳ ಶ್ರೇಣಿಯ ಆಭರಣಗಳು ಲಭ್ಯವಿದ್ದು, ಮನಸೊರೆಗೊಳ್ಳುವಂತಿವೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರು ಉದ್ಘಾಟಿಸಿದರು.

ವೈಢೂರ್ಯ, ಸಿಟ್ರಿನ್, ಮುತ್ತುಗಳು, ಆಕರ್ಷಕವಾದ ಹರಳುಗಳು, ಅಪರೂಪದ ರತ್ನಗಳೊಂದಿಗೆ ಸೂಕ್ಷ್ಮವಾದ ವಜ್ರಗಳೊಂದಿಗೆ ಆಕರ್ಷಕ ವಿನ್ಯಾಸಗಳ ಆಭರಣಗಳು, ಕ್ಲಾಸಿಕ್ ಶೈಲಿಯ ಸಂಗ್ರಹಗಳು ಆಭರಣ
ಪ್ರಿಯರ ಗಮನ ಸೆಳೆದವು.

ಡೆನಿಮ್ & ಡೈಮಂಡ್ ಸಂಗ್ರಹ
ಇಂದಿನ ಯುವ ಮತ್ತು ಡೆನಿಮ್ ಧರಿಸುವ ಯುವತಿಯರಿಗೆ ಒಪ್ಪುವಂತಹ ವಜ್ರಗಳು ಮತ್ತು ಅಮೂಲ್ಯವಾದ ರತ್ನಗಳ ಟ್ರೆಂಡಿ ಆಭರಣಗಳು ಈ ಪ್ರದರ್ಶನದಲ್ಲಿವೆ.
ಪರ್ಲ್ ಸಂಗ್ರಹ
ಪ್ರಪಂಚದಲ್ಲಿ ಕಂಡುಬರುವ ಎಲ್ಲಾ ರತ್ನಗಳು ಅಂದರೆ ಪರ್ಲ್‍ಗಳು ಮತ್ತು ಆಭರಣಗಳಲ್ಲಿ ಒಂದು ಪರಿಪೂರ್ಣವಾದ ಪರ್ಲ್ ಇವೆ.

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‍ನಿಂದ ಎ ವಿಫ್ ಆಫ್ ದಿ ಎಕ್ಸಾಟಿಕ್ ಪ್ರದರ್ಶನ :
ಭಾರತೀಯ ಸುಗಂಧ ದ್ರವ್ಯ ಮಾರುಕಟ್ಟೆಯು ತನ್ನ ವೈವಿಧ್ಯಮಯ ಪೋರ್ಟ್‍ಫೋಲಿಯೋವನ್ನು ಪ್ರವೇಶಿಸುವ ಹೊಸ, ವಿಶಿಷ್ಟ ಬ್ರ್ಯಾಂಡ್ ಅನ್ನು ಹೊಂದಿದೆ.

ಅಪರೂಪವೆನಿಸುವ ಪರಿಮಳಗಳು ಇಲ್ಲಿರಲಿದ್ದು, ಇದು ಭಾರತದ ಏಕೈಕ ಪ್ರೀಮಿಯಂ, ಐಶಾರಾಮಿ ಸುಗಂಧ ಬ್ರ್ಯಾಂಡ್ ಎನಿಸಿದೆ. ಸಿ.ಕೃಷ್ಣಯ್ಯ ಚೆಟ್ಟಿ ಸಂಸ್ಥೆಯು 150 ವರ್ಷಗಳ ಪರಂಪರೆಯ ಲಕ್ಷುರಿ ಜ್ಯುವೆಲ್ಲರಿಯನ್ನು ಆಭರಣ ಪ್ರಿಯರಿಗೆ ನೀಡುತ್ತಾ ಬಂದಿದೆ.

24 ಕ್ಯಾರೆಟ್ ಚಿನ್ನ, ಅಪರೂಪದ ಪರಿಮಳಗಳು ಇಲ್ಲಿ 5 ಸೊಗಸಾದ ವೇರಿಯೆಂಟ್‍ಗಳಾದ ಅಡಮಾಸ್, ಔರಂ, ಬೆರಿಲ್, ಕೊರುಂಡಂ ಮತ್ತು ಪ್ಲಾಟಿನಂನಲ್ಲಿ ಲಭ್ಯವಿವೆ.

ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಚೈತನ್ಯ ವಿ ಕೋಥಾ ಅವರು ಮಾತನಾಡಿ, ಹುಬ್ಬಳ್ಳಿ ಪ್ರದರ್ಶನದಲ್ಲಿ ಶಾಪಿಂಗ್ ಅಭಿಮಾನಿಗಳಿಗೆ ಅನೇಕ ಅದ್ಭುತವಾದ ಉಳಿತಾಯಗಳು ಸಿಗಲಿವೆ.

ಕೃಷ್ಣಯ್ಯ ಚೆಟ್ಟಿ ಅವರ ಮ್ಯಾಜಿಕಲ್ ಸಿಗ್ನೇಚರ್ ನಂಬರ್ 1869 ಆಗಿದೆ. ಇದೇ ಮ್ಯಾಜಿಕ್ ನಂಬರ್ ಸುತ್ತಲೂ ನಮ್ಮ ಗ್ರಾಹಕರಿಗೆ ಉಳಿತಾಯಗಳು ಲಭ್ಯವಾಗಲಿವೆ.

ಇದರಲ್ಲಿ ಹಲವಾರು ರಿಯಾಯ್ತಿಗಳು, ಟ್ರಿಪಲ್ ಲಾಯಲ್ಟಿ ರಿವಾರ್ಡ್ ಪಾಯಿಂಟ್‍ಗಳಿಂದ ವಜ್ರದ ಖರೀದಿಗಾಗಿ ಚಿನ್ನದ ಮೌಲ್ಯವನ್ನು ಪಡೆಯಲಿದ್ದಾರೆ ಎಂದರು.

ಈ ಪ್ರದರ್ಶನದಲ್ಲಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಉತ್ಪನ್ನಗಳು 1869 ರೂಪಾಯಿಗಳಿಂದ ಆರಂಭವಾಗುತ್ತವೆ. ಚಿನ್ನದ ದರವನ್ನು ಪ್ರತಿ ಗ್ರಾಂಗೆ 1869 ರೂಪಾಯಿಗೆ, ವಜ್ರದ ದರವನ್ನು ಪ್ರತಿ ಕ್ಯಾರೆಟ್‍ಗೆ 1869 ಮತ್ತು ಬೆಳ್ಳಿಯ ದರವನ್ನು ಪ್ರತಿ ಗ್ರಾಂಗೆ 18.69 ರೂಪಾಯಿಗಳಂತೆ ಲೆಕ್ಕಾಚಾರ ಹಾಕಲಾಗುತ್ತದೆ ಎಂದು ವಿವರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *