ಅಂತಾರಾಷ್ಟ್ರೀಯ

ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್,ಪಬ್ ತೆರೆಯಲು ಚಿಂತನೆ ನಡೆಸಿದ ಗೋವಾ ಸರ್ಕಾರ

ಪಣಜಿ prajakiran.com : ಹೋಟೆಲ್ ಮತ್ತು ರೆಸ್ಟೊರೆಂಟ್‍ಗಳಲ್ಲಿ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಪರವಾನಗಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಇದರಿಂದಾಗಿ ರಾಜ್ಯದಲ್ಲಿ ಈ ವಾರದಿಂದಲೇ ಹೋಟೆಲ್ ರೆಸ್ಟೊರೆಂಟ್ ಆರಂಭಕ್ಕೆ ಪರವಾನಗಿ ಲಭಿಸುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಕರ್ಫ್ಯೂಜಾರಿಯಲ್ಲಿದ್ದರೂ ಕೂಡ ಕೆಲ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಆದರೆ ಸಿನೆಮಾ ಥಿಯೇಟರ್, ಕ್ಯಾಸಿನೊ ಇವುಗಳು ಮಾತ್ರ ಬಂದ್ ಆಗಿಯೆ ಉಳಿಯಲಿದೆ.

ರಾಜ್ಯದಲ್ಲಿ ಹೋಟೆಲ್,ರೆಸ್ಟೊರೆಂಟ್ ಮಾಲೀಕರು ಹೋಟೆಲ್ ರೆಸ್ಟೊರೆಂಟ್ ಆರಂಭಿಸಲು ಪರವಾನಗಿ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾರೆ.

ಶೇ 50 ಗ್ರಾಹಕರೊಂದಿಗೆ ಹೋಟೆಲ್ ರೆಸ್ಟೊರೆಂಟ್ ಆರಂಭಕ್ಕೆ ಪರವಾನಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *