ಜಿಲ್ಲೆ

ಧಾರವಾಡದಲ್ಲಿ ಅರ್ಚಕರಿಗೆ ಆಹಾರ ಕಿಟ್ ವಿತರಣೆ

ಧಾರವಾಡ prajakiran.com ಮೇ.28 :  ಲಾಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ, ಮಲಬಾರ ಗೋಲ್ಡ್ ಹಾಗೂ ಇನ್ನರ ವ್ಹಿಲ್ ಕ್ಲಬ್ ವತಿಯಿಂದ ಅರ್ಚಕ, ಪೂಜಾರಿ ಹಾಗೂ ಪುರೋಹಿತರಿಗೆ ಉಚಿತ ಆಹಾರ ಕಿಟ್, ಸೈನಿಟೈಜರ್ ಹಾಗೂ ಮಾಸ್ಕ್ ಗಳನ್ನು ಮೇ 28 ಶುಕ್ದುರವಾರ ಅಂಜುಮನ್ ಕಾಲೇಜು ಆವರಣದಲ್ಲಿ ವಿತರಿಸಲಾಯಿತು.

ಲಾಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಅಧ್ಯಕ್ಷ ಡಾ.ಎಮ್.ಎ.ಮುಮ್ಮಿಗಟ್ಟಿ ಅವರು ಮಾತನಾಡಿ, ಉಚಿತ ಉಚಿತ ಆಹಾರ ಕಿಟ್, ಸೈನಿಟೈಜರ್ ಹಾಗೂ ಮಾಸ್ಕ್ ವಿತರಣೆ ಮಾಡಿ ಬಹಳ ಸಂತಸವಾಗಿದೆ.

ನಾವೆಲ್ಲ ಲಾಯನ್ಸ ಸದಸ್ಯರು ಕೂಡಿಕೊಂಡು ಇವರಿಗೆ ಸಹಾಯ ಮಾಡಬೇಕೆಂದು ತಿರ್ಮಾನಿಸಿ ಎಲ್ಲ ವ್ಯವಸ್ಥೆಯನ್ನು ಮಾಡಲು ಪ್ರಯತ್ನ ಮಾಡಿದ್ದೇವೆ ಹಾಗೂ ಅವರ ಜೊತೆ ಲಾಯನ್ಸ ಕ್ಲಬ್ ಇದೆ ಎಂದು ಭರವಸೆ ನೀಡಿದರು.

ಮಲಬಾರ ಗೋಲ್ಡ್ ವತಿಯಿಂದ 200 ಆಹಾರ ಕಿಟ್, ಲಾಯನ್ಸ ಕ್ಲಬ್ ವತಿಯಿಂದ 50 ಜನ ವಿಕಲಚೇತನರಿಗೆ, 70 ಆಟೋ ಚಾಲಕರಿಗೆ, 60 ಬಡ ಕುಟುಂಬಗಳಿಗೆ, 20 ಜನ ಅರ್ಚಕ, ಪೂಜಾರಿ, ಪುರೋಹಿತರಿಗೆ ಉಚಿತ ಆಹಾರ ಕಿಟ್ ವಿತರಿಸಿ ಆದಷ್ಟು ಬೇಗ ಸರಕಾರ ಇವರಿಗೆ ಈ ಕಷ್ಟ ಕಾಲದಲ್ಲಿ ಸಹಾಯ ನೀಡಿ ಅವರಿಗೆ ಪ್ರೋತ್ಸಾಹವನ್ನು ನೀಡಬೇಕೆಂದು ವಿನಂತಿಸಿಕೊಂಡರು.

 ಲಾಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಕಾರ್ಯದರ್ಶಿ ಲಾಯನ್ ರತಿ ಶ್ರಿನಿವಾಸನ, ಲಾಯನ್ ನಾಗರಾಜ ಜಿ, ಲಾಯನ್ ಜ್ಯೋತಿ ಹಿರೇಮಠ, ಮಲಬಾರ ಗೋಲ್ದ್ ಇರಫಾನ , ನಿಯಾಜ ಹಾಗೂ ಇನ್ನಿತರರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *