ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾಗೆ ಕೊರೋನಾ ಸೋಂಕು ತಗುಲಿರುವುದು ಧೃಡಪಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ನಟಿ ತಾರಾ, ನನಗೆ ಕೊರೋನಾ ಸೋಂಕು ಧೃಡವಾಗಿದ್ದು, ಸ್ನೇಹಿತರು, ಸಂಬಂಧಿಗಳು, ಅಭಿಮಾನಿಗಳು ಕರೆ ಮಾಡುವ ಮೂಲಕ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.
ಕೊರೋನಾ ಬಂದ ಕೂಡಲೇ ಯಾರೂ ಕೂಡ ಗಾಬರಿಯಾಗಬೇಡಿ, ಮೊದಲು ಮನೆಯಲ್ಲೇ ಐಸೋಲೇಟ್ ಆಗಿ.
ದಯವಿಟ್ಟು ಮನೆಯಿಂದ ಯಾರೂ ಕೂಡ ಹೊರಗೆ ಬರಬೇಡಿ, ಮಾನಸಿಕ ಧೈರ್ಯ ತಂದುಕೊಳ್ಳಿ.
ನನಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು, ಮೊದಲು ರುಚಿ ಗೊತ್ತಾಗುತ್ತಿರಲಿಲ್ಲ.
ಸುಸ್ತು, ವಾಂತಿ ಭೇದಿ ಕಾಣಿಸಿಕೊಂಡಿತು. ಬಳಿಕ ಪರೀಕ್ಷೆಗೊಳಪಟ್ಟಾಗ ಕೊರೊನಾ ಸೋಂಕು ಧೃಡವಾಯಿತು ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ ಯಾರಿಗೇ ಕೊರೋನಾ ಬಂದರೂ ಯಾರೂ ಕೂಡ ಗಾಬರಿಯಾಗಬೇಡಿ, ಮಾರ್ಗಸೂಚಿ ಪಾಲಿಸಿ.
14 ದಿನ ಎಲ್ಲೂ ಕೂಡ ಹೊರಗೆ ಹೋಗಬೇಡಿ. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಎಂದು ಮನವಿ ಮಾಡಿದ್ದಾರೆ.