ಧಾರವಾಡ prajakiran. com : ಟಂಟಂ ವಾಹನ ತೊಳೆಯಲು ಕೆರೆಗೆ ಇಳಿದಿದ್ದ ತಂದೆ-ಮಗ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕ್ಯಾರಕೊಪ್ಪ ಗ್ರಾಮದ ಗದಿಗೆಪ್ಪ ಅಂಗಡಿ (ತಂದೆ) ಹಾಗೂ ರವಿ ಅಂಗಡಿ (ಮಗ) ಎಂಬುವವರೇ ಸಾವಿಗೀಡಾದ ದುರ್ದೈವಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರೂ ಇಂದು ಬೆಳಿಗ್ಗೆ ಟಂಟಂ ವಾಹನ ತೊಳೆಯಲೆಂದು ಗ್ರಾಮದ ಹೊರ ವಲಯದ ನವೋದಯ ಶಾಲೆಯ ಪಕ್ಕದ ಕೆರೆಗೆ ಇಳಿದಾಗ ಕಾಲು ಜಾರಿ ಕರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಂದೆ ಗದಿಗೆಪ್ಪನ ಶವ ದೊರೆತಿದ್ದು, ರವಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.