ರಾಜ್ಯ

ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದ ದಿಂಗಾಲೇಶ್ವರ ಸ್ವಾಮಿಜಿ

ಗದಗ prajakiran.com : ಇತಿಹಾಸ ಪ್ರಸಿದ್ಧ ಹಾಗೂ ಹಿಂದು ಮುಸ್ಲಿಂ ಭಾವೈಕತೆಯ ಪ್ರತೀಕವಾಗಿರುವ ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ದಿಂಗಾಲೇಶ್ವರ ಸ್ವಾಮಿಜಿ ಉತ್ತರಾಧಿಕಾರಿಯಾಗಿ ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳು ಪೂರೈಸಿದರು.

ಖಾವಿ ಜೊತೆಗೆ ಶ್ವೇತವಸ್ತ್ರಧಾರಿಯಾಗಿ ಆಗಮಿಸಿದ ದಿಂಗಾಲೇಶ್ವರ ಸ್ವಾಮಿಜಿ ಅವರು

ತಲೆ‌ಮೇಲೆ ಖಾವಿಪೇಠ, ಕೊರಳಲ್ಲಿ ಹಸಿರು ಶಾಲು, ಬೀಳಿ ಬಣ್ಣದ ಫಕೀರ ಪೋಷಾಕಿನೊಂದಿಗೆ ಕಾಣಿಸಿಕೊಂಡರು.

ಹಿರಿಯ ಸ್ವಾಮಿಗಳಾದವ ಜಗದ್ಗುರು ಫಕೀರ ಸಿದ್ಧರಾಮ ಸ್ಬಾಮಿಜಿಗಳೊಂದಿಗೆ ಆಗಮಿಸಿದ ಉತ್ತರಾಧಿಕಾರಿ ದಿಂಗಾಲೇಶ್ವರ ಸ್ವಾಮಿಜಿ ಅವರಿಗೆ ಎರಡು ಮಠಗಳ ಭಕ್ತಗಳು ಸಾಥ್ ನೀಡಿದರು.

ಮುಸ್ಲಿಂ ಸಂಪ್ರದಾಯದಂತೆ ಪೋಷಾಕು ತೊಟ್ಟು ಆಗಮಿಸಿದ ದಿಂಗಾಲೇಶ್ವರ ಸ್ವಾಮಿಜಿ ಅವರಿಗೆ
ನಾಡಿನ ವಿವಿಧ ಮಠಾಧೀಶರಾದ
ಶಿರಸಿ ತೊಟ್ಲಕೆರೆಮಠದ ಶಿವಲಿಂಗ ಸ್ವಾಮಿಜಿ, ಸೇರಿದಂತೆ, ಕುಂಟೋಜಿ, ಹೊಸಳ್ಳಿ, ನೀಲಗುಂದ‌ ಮಠದ ಸ್ವಾಮಿಜಿಗಳು ಸಾಕ್ಷಿಯಾದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *