ಜಿಲ್ಲೆ

ಧಾರವಾಡ ಜಿಲ್ಲೆಗೆ ಅತಿವೃಷ್ಟಿ, ಪ್ರವಾಹ ಭೀತಿ ; ನೋಡಲ್ ಅಧಿಕಾರಿಗಳ ನೇಮಕ

ಧಾರವಾಡ prajakiran.com : ಮೇ.19: ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅತಿವೃಷ್ಠಿಯಿಂದ ಪ್ರವಾಹ ಉಂಟಾಗಬಹುದಾದ ಸಂಭವನೀಯತೆ ಇದೆ.

ಜನ ಜಾನುವಾರು,ಮನೆ ಮತ್ತಿತರ ಹಾನಿ ಸಂಭವಿಸಿದರೆ ತುರ್ತು ಪರಿಹಾರ ಕ್ರಮಗಳನ್ನು ಜರುಗಿಸಲು ಪ್ರತಿ ತಾಲ್ಲೂಕಿಗೆ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ನಿಯೋಜಿಸಲಾದ ತಾಲ್ಲೂಕುಗಳ ನೋಡಲ್ ಅಧಿಕಾರಿಗಳು ಅತಿವೃಷ್ಠಿ ಹಾನಿಯ ಪ್ರಮಾಣ ತಗ್ಗಿಸುವುದು, ಹಾನಿಯ ಮಾಹಿತಿ, ವಿವರಗಳನ್ನು ಒದಗಿಸುವುದು.

ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವುದು. ತಾಲ್ಲೂಕು ಮಟ್ಟದ ವಿಪತ್ತು ನಿರ್ವಹಣೆ ಸಮಿತಿಯ ಕಾರ್ಯ ಪರಿಶೀಲಿಸುವುದು.

ಕೆರೆಗಳು ಭರ್ತಿಯಾಗಿ ಕೋಡಿ ಹರಿದು ಅಥವಾ ಹಳ್ಳಗಳು ತುಂಬಿ ಪ್ರವಾಹ ಉಂಟಾಗುವ ಸಂಭವನೀಯತೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದು ಸೇರಿದಂತೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ.

*ನೋಡಲ್ ಅಧಿಕಾರಿಗಳ ವಿವರ*

ಧಾರವಾಡ ತಾಲೂಕು – ಅಶೋಕ ತೇಲಿ,ಉಪವಿಭಾಗಾಧಿಕಾರಿಗಳು-8123295366,

ಹುಬ್ಬಳ್ಳಿ ತಾಲೂಕು- ಮಂಜುನಾಥ ಅಂತರವಳ್ಳಿ ಉಪಕೃಷಿನಿರ್ದೇಶಕರು-8277931272,

ಹುಬ್ಬಳ್ಳಿ ನಗರ- ಅಜೀಜ್ ದೇಸಾಯಿ,ಜಂಟಿ‌ ಆಯುಕ್ತರು,ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ -7019764507,

ನವಲಗುಂದ ತಾಲೂಕು- ಸುಧೀರ್ ಸಾವ್ಕಾರ್,ಹಿರಿಯ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ -9845297783,

ಕುಂದಗೋಳ ತಾಲೂಕು- ರೇಖಾ ಡೊಳ್ಳಿನವರ,ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ, -9480864001,

ಕಲಘಟಗಿ ತಾಲೂಕು-
ಗೋಪಾಲ ಲಮಾಣಿ,ಜಿಲ್ಲಾ ಅಧಿಕಾರಿ,
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-8748067302,

ಅಳ್ನಾವರ ತಾಲೂಕು- ಡಾ.ಉಮೇಶ ಕೊಂಡಿ,ಉಪನಿರ್ದೇಶಕರು,ಪಶು ವೈದ್ಯಕೀಯ ಸೇವೆಗಳ ಇಲಾಖೆ -9900675607,

ಅಣ್ಣಿಗೇರಿ ತಾಲೂಕು- ಮಮತಾ ನಾಯಕ್,ನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ -9591539062 ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿಲಾಗಿದೆ.

ತಮಗೆ ವಹಿಸಲಾದ ಕರ್ತವ್ಯಗಳನ್ನು ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *