ರಾಜ್ಯ

ಧಾರವಾಡದ ಐವರು ಕರೊನಾ ಸೋಂಕಿತರ ಪ್ರಯಾಣ ಮಾಹಿತಿ

ಧಾರವಾಡ prajakiran.com : ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ  ಐವರಲ್ಲಿ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು‌ ಅವರನ್ನು  ಪಿ – 1505 , ಪಿ- 1506 , ಪಿ – 1507 , ಪಿ – 1508 ಹಾಗೂ ಪಿ – 1509 ಎಂದು ಗುರುತಿಸಲಾಗಿದೆ. ಈ ಐದು ಜನರ  ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ. 

ಪಿ- 1505 ಹಾಗೂ ಪಿ – 1506  ಇವರು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಇವರು ಮಾ18 ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು.

ಅಲ್ಲಿ ಮೇ 17 ರವರೆಗೆ ವಾಸವಾಗಿದ್ದರು . ಮೇ 17 ರ  5 ಗಂಟೆಗೆ  ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೊ ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 6:30  ಕ್ಕೆ  ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು , ಮಾನ್ವಿ , ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ.

ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೊಸ್ಟ್ ದಾಟಿ ಮೇ 18 ರಂದು ಮುಂಜಾನೆ 8  ಗಂಟೆಗೆ ಹುಬ್ಬಳ್ಳಿ ತಲುಪಿರುತ್ತಾರೆ .

ಮೇ 18  ರಂದು ಮುಂಜಾನೆ 9 ಗಂಟೆಗೆ  ಧಾರವಾಡ ತಲುಪಿರುತ್ತಾರೆ. ಅದೇ ದಿನ ಕುಟುಂಬದ ಎಲ್ಲಾ 4 ಜನ ಸದಸ್ಯರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‌ನಲ್ಲಿರಿಸಲಾಗಿರುತ್ತದೆ .

ಮೇ 20 ರಂದು ಪಿ – 1505 ಹಾಗೂ ಪಿ – 1506 ಇವರು ಕೋವಿಡ್ -19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ . 

ಪಿ – 1507 , ಪಿ – 1508 ಹಾಗೂ ಪಿ- 1509 ಇವರ ಪ್ರಯಾಣ ವಿವರ :

 ಇವರು ಮಹಾರಾಷ್ಟ್ರದ ಮುಂಬಯಿ ಶಹರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ. ಮೇ 16 ರಂದು ರಾತ್ರಿ 11:30 ಕ್ಕೆ  ಬಾಡಿಗೆ ಇನ್ನೊವಾ ವಾಹನ ಸಂಖ್ಯೆ : MH.04.ED.5367 ದ ಮೂಲಕ ಕುಟುಂಬದ 11 ಜನ  ಸದಸ್ಯರು ಮುಂಬೈಯಿಂದ ಹೊರಟು ಮೇ 17 ರಂದು ರಾತ್ರಿ 8  ಗಂಟೆಗೆ ಕೊಲ್ಲಾಪುರ ಚೆಕ್ ಪೊಸ್ಟ್ ಹತ್ತಿರದಲ್ಲಿ ಊಟ ಮಾಡಿರುತ್ತಾರೆ .

ನಂತರ ರಾತ್ರಿ  11.30  ಕ್ಕೆ  ಕೊಲ್ಲಾಪುರ ಚೆಕ್ ಪೊಸ್ಟ್‌ನಿಂದ ಹೊರಟು ಮೇ 18 ರಂದು ಮುಂಜಾನೆ 5 ಗಂಟೆಗೆ ಧಾರವಾಡ ತಲುಪಿರುತ್ತಾರೆ. ಅದೇ ದಿನ ಕುಟುಂಬದ ಎಲ್ಲಾ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ನಲ್ಲಿರಿಸಲಾಗಿರುತ್ತದೆ .

ಮೇ 20 ರಂದು  ಇವರು ಕೋವಿಡ್ 19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .

ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ಐದು ವ್ಯಕ್ತಿಗಳನ್ನು  ಸಂಪರ್ಕಿಸಿದ ಸಾರ್ವಜನಿಕರಿಗೆ ಕರೊನಾ ಸೊಂಕು ತಗಲುವ ಸಾಧ್ಯತೆ ಇದೆ . 

, ಅಂತಹ  ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *