ಅಪರಾಧ

ಧಾರವಾಡದಲ್ಲಿ 17 ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಸುಮಾರು 17 ಬೈಕ್ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

20 ವರ್ಷದ ಇಬ್ಬರು ಯುವಕರು ಈವರೆಗೆ ಒಟ್ಟು ಅಂದಾಜು ಎಙಟು ಲಕ್ಷ ಮೌಲ್ಯದ 17 ಬೈಕ್ ಕಳ್ಳತನ ಮಾಡಿದ್ದರು.

ಈ ಕುರಿತು ಪ್ರಕರಣದ ಜಾಡು ಹಿಡಿದ
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ, ಪಿ ಎಸ್ ಐಗಳಾದ ಸಚಿನಕುಮಾರ ದಾಸರಡ್ಡಿ, ಎಸ.ಆರ್. ತೇಗೂರ ಹಾಗೂ ಪೊಲೀಸ ಸಿಬ್ಬಂದಿ ಈ ಕಳ್ಳರನ್ನು ಪತ್ತೆ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತ ಕಳ್ನರನ್ನು ಅಭಿಷೇಕ ತಂದೆ ರಾಜೇಶ ಸಂಗ್ಪಾಳೆ (20) ಹಾಗೂ ಈರನಗೌಡ @ ಈರಣ್ಣ ತಂದೆ ಮರಿಗೌಡ ಕೋಣಿ
(20) ಎಂದು ಗುರುತಿಸಲಾಗಿದೆ.

ಇವರಿಬ್ಬರು ಧಾರವಾಡದ ರಾಜೀವ್ ಗಾಂಧಿ ನಗರದ ನಿವಾಸಿಗಳಾಗಿದ್ದು, ಗೌಂಡಿ ಕೆಲಸ ಮಾಡುತ್ತಿದ್ದರು.

ಇವರು ಧಾರವಾಡದ ಅರವಿಂದ ನಗರ,ಲಕಮನಹಳ್ಳಿ, ಎಸ್. ವೈ ಕಾಲನಿ, ಶಂಕರ ಮಠ ಹಾಗೂ ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ರಸ್ತೆ ಬದಿ ನಿಂತಿದ್ದ ಬೈಕ್ ಎಗ್ಗರಿಸಿ ಮಾರಾಟ ಮಾಡುತ್ತಿದ್ದ ಈ ಖದೀಮರು
ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದು, 17 ಹಿರೋ ಹಾಗೂ ಹೋಂಡಾ ಬೈಕ್ ಜಪ್ತಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ವಿದ್ಯಾಗಿರಿ ಪೊಲೀಸ್ ಸಿಬ್ಬಂದಿ ಕಾರ್ಯ ಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿ,
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಡಿಸಿಪಿಗಳಾದ ಪಿ. ಕೃಷ್ಣಕಾಂತ, ಆರ್.ಬಿ. ಬಸರಗಿ,
ಎಸಿಪಿ ಜಿ. ಅನುಷಾ ಅಭಿನಂದನೆ ಸಲ್ಲಿಸಿ, ಬಹುಮಾನ ಘೋಷಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *