ಅಪರಾಧ

ದಾವಣಗೆರೆ ಟೂ ಗೋವಾ ದುರಂತ ಅಂತ್ಯ ಕಂಡವರ ವಿವರ

ಧಾರವಾಡ prajakiran.com : ಧಾರವಾಡದ ಹೊರವಲಯದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 4ರ ಇಟಿಗಟ್ಟಿ ಬಳಿ ಶುಕ್ರವಾರ ಬೆಳಿಗ್ಗೆ 7ರ ಹೊತ್ತಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರು ದಾವಣಗೆರೆ ಮೂಲದವರು.

ಇವರೆಲ್ಲರೂ ದಾವಣಗೆರೆ ಟೂ ಗೋವಾ ಪ್ರವಾಸಕ್ಕೆ ಹೊರಟಿದ್ದರು.
ಈ ವೇಳೆ ಧಾರವಾಡದ ಪರಿಚಯಸ್ಥರಯಸ್ಥರೊಬ್ಬರ ಮನೆಯಲ್ಲಿ ಉಪಹಾರ ಸೇವಿಸಿ ಮುಂದಕ್ಕೆ ಹೋಗುವವರಿದ್ದರು.

ಅದಕ್ಕಿಂತ ಮುಂಚಿತವಾಗಿ ದುರ್ಘಟನೆ ಸಂಭವಿಸಿದ್ದು, ಟೆಂಪೋದಲ್ಲಿ ಎಂಟು ಜನ ಮಹಿಳೆಯರು, ಟೆಂಪೋ ಚಾಲಕ ಹಾಗೂ ಲಾರಿಯಲ್ಲಿದ್ದ ಕ್ಲೀನರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವನ್ನಪ್ಪಿದರನ್ನು
ದಾವಣಗೆರೆಯ ರಜನಿ ಶ್ರೀನಿವಾಸ (47), ಪ್ರೀತಿ ರವಿಕುಮಾರ (46) ಪರಂಜ್ಯೋತಿ ಶಶಿಧರ (47), ಮಂಜುಳಾ ನಾಗೇಶ ಜಿ.ಬಿ (47), ರಾಜೇಶ್ವರಿ ಶಿವಾಯ ಬಂಡೆಮ್ಮನವರ (40), ಡಾ. ವೀಣಾ ಪ್ರಕಾಶ (47) ವರ್ಷಿತಾ ವೀರೇಶ (45) ಹಾಗೂ ಪೂರ್ಣಿಮಾ (45), ಪ್ರವೀಣಾ (44) ಸ್ನೇಹಿತೆಯರು ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಮಕರ ಸಂಕ್ರಮಣದ ನಿಮಿತ್ತ 16 ಜನರು ಶುಕ್ರವಾರ ನಸುಕಿನ ಜಾವ 3ರ ಸುಮಾರಿಗೆ ದಾವಣಗೆರೆಯಿಂದ ಹೊರಟಿದ್ದರು.

ಆಗ ಮರಳು ತುಂಬಿದ ಲಾರಿ ಗುದ್ದಿದ ರಭಸಕ್ಕೆ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದೆ.
ವಾಹನಗಳಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆಯಲು ಸ್ಥಳೀಯರೊಂದಿಗೆ ಪೊಲೀಸರು ಹರಸಾಹಸ ನಡೆಸಿದರು.

ಕೊನೆಗೆ ಕ್ರೇನ್ ಮೂಲಕ ವಾಹನಗಳನ್ನು ಬೇರ್ಪಡಿಸಿ ಕಾರ್ಯಾಚರಣೆ ನಡೆಸಲಾಯಿತು.

ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲೆಯ ಪೊಲೀಸ ವರಿಷ್ಠಾಕಾರಿ ಪಿ. ಕೃಷ್ಣಕಾಂತ ಭೇಟಿ ನೀಡಿ ಪರಿಶೀಲಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *